ಇಂದೇ ಆಲ್ಕೋಹಾಲ್’ಗೆ ಗುಡ್ ಬೈ ಹೇಳಿ

ಕುಡಿತದಿಂದ ಸರ್ವನಾಶ ಎಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಹೇಳಿದ್ದಾರೆ. ನಮ್ಮ ಸಮಾಜದಲ್ಲಿ ಸುರೆಯನ್ನು ಸಾಮಾಜಿಕ ಕಾರಣಗಳಿಗೆ ಕುಡಿಯುವುದು ತುಂಬಾ ಸಾಮಾನ್ಯವಾಗಿದೆ. ಆಧುನಿಕ ಜೀವನಶೈಲಿಯಲ್ಲಿ ಮದ್ಯಪಾನ ತೀರಾ ಸಾಧಾರಣವಾದ ಸಂಗತಿ. ಕುಡಿತಕ್ಕೆ ಯಾವ ವ್ಯಕ್ತಿಯಾದರೂ ಬಲಿಯಾಗಬಹುದು. ಆತನ ಅಂತಸ್ತು, ಉದ್ಯೋಗ, ಬುದ್ಧಿಶಕ್ತಿ, ವಿದ್ಯಾಭ್ಯಾಸ, ಜಾತಿ, ಕುಲಗೋತ್ರ ಯಾವುದೂ ಹೊರತಲ್ಲ. ಕುಡುಕರೆಲ್ಲರೂ ಕುಡಿತವನ್ನು ಪ್ರಾರಂಭಿಸುವುದಕ್ಕೆ ಮುನ್ನ ಸಾಮಾನ್ಯ ಮನುಷ್ಯರಂತೆಯೇ ಇರುತ್ತಾರೆ. ಕುಡಿತವು ಕಾಯಿಲೆಯ ಸ್ವರೂಪ ಪಡೆದಾಗ ಸಾಮಾನ್ಯ ವ್ಯಕ್ತಿ ರೋಗಿಯಾಗುತ್ತಾನೆ. ಕುಡಿತಾವಸ್ಥೆಯು ಆತ ಎಷ್ಟು ಕುಡಿಯುತ್ತಾನೆ ಎಂಬುದನ್ನು ಅವಲಂಬಿಸಿದೆಯೇ ಹೊರತು ಏಕೆ ಕುಡಿಯುತ್ತಾನೆ ಎಂಬುದನ್ನು ಅಲ್ಲ. ಕುಡಿತ ಒಬ್ಬ ವ್ಯಕ್ತಿಯ ಸಮಾಜದಲ್ಲಿನ ಸ್ಥಾನಮಾನ, ಮಾರ್ಯಾದೆ, ಉದ್ಯೋಗ, ಕುಟುಂಬ, ಸ್ನೇಹಿತರು ಮತ್ತು ಆರೋಗ್ಯವನ್ನು ಹಾಳು ಮಾಡುತ್ತದೆ.
ಮದ್ಯವ್ಯಸನದ ದುಷ್ಪರಿಣಾಮಗಳು
+ ವಿಪರೀತ ಮದ್ಯ ಸೇವನೆಯಿಂದ ಮೆದುಳಿನ ಕೋಶಗಳು ನಾಶವಾಗಿ, ಮೆದುಳಿಗೆ ತೀವ್ರ ಹಾನಿಯಾಗುತ್ತದೆ.
+ ಆಲ್ಕೋಹಾಲ್‍ನಿಂದ ಕೇಂದ್ರ ನರವ್ಯೂಹ ವ್ಯವಸ್ಥೆಯ ರಚನೆ ಮತ್ತು ಕಾರ್ಯದ ಮೇಲೆ ಗಂಭೀರ ಅಡಚಣೆ ಉಂಟಾಗುತ್ತದೆ. ಇದರಿಂದ ಪುನ:ಶ್ಚೇತನ, ಮೆದುಳಿಗೆ ಎಲೆಕ್ಟ್ರಿಕ್ ಇಂಪಲ್ಸ್‍ಗಳ ರವಾನೆ ಸಾಮಥ್ರ್ಯಕ್ಕೆ ಧಕ್ಕೆ ಉಂಟಾಗಿ, ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.
+ ಸಾಧಾರಣ ಅಲ್ಕೋಹಾಲ್ ಸೇವನೆಯಿಂದ ಬುದ್ದಿಶಕ್ತಿ ಸಾಮಥ್ರ್ಯದ ಮೇಲೆ ಪರಿಣಾಮ ಉಂಟಾದರೆ, ಮಿತಿಮೀರಿದ ಮದ್ಯಪಾನ ಸೇವನೆಯಿಂದ ಆಮ್ಲಜನಕ ಪೂರೈಕೆಗೆ ಅಡಚಣೆಯಾಗಿ ಮೆದುಳಿಗೆ ತೀವ್ರ ಹಾನಿಯಾಗುತ್ತದೆ.
+ ಆಲ್ಕೋಹಾಲ್ ವ್ಯಸನದಿಂದ ಬಾಯಿ, ಗಂಟಲು ಮತ್ತು ಹೊಟ್ಟೆಯಲ್ಲಿ ಉರಿಯುಂಟಾಗಿ ಈ ಸ್ಥಳಗಳಲ್ಲಿ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ವಿಶೇಷವಾಗಿ ಮದ್ಯವ್ಯಸನಿಗಳು ಇದರೊಂದಿಗೆ ಧೂಮಪಾನಿಗಳಾಗಿದ್ದರೆ ಈ ಗಂಡಾಂತರ ಇನ್ನಷ್ಟು ಅಧಿಕವಾಗುತ್ತದೆ.
+ ಮದ್ಯಪಾನದಿಂದ ಅಸಮರ್ಪಕ ಹೃದಯ ಬಡಿತ ಉಂಟಾಗಿ ವ್ಯಸನಿಗಳು ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಹೃದ್ರೋಗದ ಇತರ ಸಮಸ್ಯೆಗಳಿಗೆ ಒಳಗಾಗುತ್ತಾರೆ.
+ ಆಲ್ಕೋಹಾಲ್‍ನಿಂದ ದೃಷ್ಟಿದೋಷ, ಲೈಂಗಿಕ , ಕ್ರಿಯೆಗೆ ಹಾನಿ, ರಕ್ತಚಲನೆಯಲ್ಲಿ ಅಸಮರ್ಪಕತೆ, ಅಪೌಷ್ಟಿಕತೆ ಮತ್ತು ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ.
+ ಕುಡಿತದಿಂದ ಚರ್ಮ ಮತ್ತು ಮೇದೋಜೀರಕ ಗ್ರಂಥಿಯ ದೋಷ ಕಂಡುಬಂದು ಮೂಳೆ ಮತ್ತು ಮಾಂಸಖಂಡಗಳನ್ನು ದುರ್ಬಲಗೊಳಿಸುತ್ತದೆ. ಇದು ದೇಹದ ರೋಗ ಪ್ರತಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.
+ ಮದ್ಯವ್ಯಸನಿಗಳು, ದುಶ್ಚಟದಿಂದ ಹೊರಬರುವ ಆತ್ಮವಿಶ್ವಾಸ ಅಥವಾ ಸ್ವಯಂ ನಿಯಂತ್ರಣ ಇಲ್ಲದವರು ಎಂದೇ ಸಾಮಾನ್ಯ ಜನರು ಭಾವಿಸುತ್ತಾರೆ. ಆಲ್ಕೋಹಾಲ್ ಸೇವನೆಯು ಆಹಾರ ನೀರು ಮತ್ತು ಸೂರಿನಂತೆ ಕುಡುಕರಿಗೆ ಪ್ರಬಲ ಮೂಲಭೂತ ಅಗತ್ಯವಾಗಿ ಕಂಡುಬಂದಿರುವುದು ವಾಸ್ತವ ಸಂಗತಿ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *