ಕಾಲು ಸ್ವಚ್ಚಗೊಳಿಸುವ ಮತ್ಸ್ಯ ಚಿಕಿತ್ಸೆ ‘ಫಿಶ್ ರೆಫ್ಲೆಕ್ಸಾಲಜಿ’ ಬಗ್ಗೆ ನಿಮಗೆ ಗೊತ್ತೇ..?

ಫಿಶ್ ರೆಫ್ಲೆಕ್ಸಾಲಜಿ ಅಂದರೆ ಕಾಲು ಸ್ವಚ್ಚಗೊಳಿಸುವ ಮತ್ಸ್ಯ ಚಿಕಿತ್ಸೆ ದಿನೇ ದಿನೇ ಜನಪ್ರಿಯವಾಗುತ್ತಿದೆ. ವಿದೇಶಗಳ ಐಷಾರಾಮಿ ಹೊಟೇಲ್‍ಗಳ ಸ್ಪಾಗಳಲ್ಲಿ ರೆಫ್ಲೆಕ್ಸಾಲಜಿ ತುಂಬ ಪ್ಯಾಪುಲರ್ ಆಗಿದೆ. ಭಾರತದಲ್ಲೂ ಇತ್ತೀಚೆಗೆ ಇದು ನಿಧಾನವಾಗಿ ರೂಢಿಗೆ ಬರುತ್ತಿದೆ. ವಿವಿಧ ಚರ್ಮರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿರುವ ಈ ಮೀನಿಗೆ ಮತ್ಸ್ಯ ವೈದ್ಯ ಎಂದು ಕರೆಯುತ್ತಾರೆ.

ಈ ಪುಟ್ಟ ಮೀನುಗಳು ಸುಮಾರು 10 ಸೆಂ.ಮೀ. ಇರುತ್ತವೆ. ಸಿಹಿ ನೀರಿನಲ್ಲಿ ವಾಸಿಸುವ ಇವು ಸಹಜ ಆಹಾರದ ಕೊರತೆಯಿಂದಾಗಿ ಸತ್ತ, ಒಣ, ಶುಷ್ಕ ಧರ್ಮವನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿವೆ. ಈ ಮೀನುಗಳಿಗೆ ಹಲ್ಲುಗಳಿಲ್ಲ ಬಾಯಿಯ ಸುತ್ತ ದೊರೆಗಾದ ಅಂಚಿದೆ. ಇತ್ತು ಸತ್ತ ಮತ್ತು ಒಣ ಧರ್ಮವನ್ನು ಮಾತ್ರ ತೆಗೆಯಬಲ್ಲದು. ಈ ಮೀನಿನಿಂದ ಕಾಲು ಅಥವಾ ಚರ್ಮಕ್ಕೆ ಯಾವುದೇ ಅಪಾಯವಿಲ್ಲ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಫಿಶ್ ರೆಫ್ಲೆಕ್ಸಾಲಜಿಯಿಂದ ಅನೇಕ ಪ್ರಯೋಜನಗಳಿವೆ.

ಈ ಮೀನುಗಳು ಕಾಲಿಗೆ ಮುತ್ತಿಕ್ಕಿದಾಗ ಅವುಗಳ ಬಾಯಿಯಿಂದ ಎಂಜೈಮ್‍ನಿಂದ ಕೂಡಿದ ದ್ರವ ಸ್ರವಿಸಲ್ಪಡುತ್ತದೆ. ಇದರಲ್ಲಿ ಚರ್ಮ ಮರು ಉತ್ಪತ್ತಿಯಾಗಲು ಸಹಾಯ ಮಾಡುವ ರಾಸಾಯನಿಕಗಳೂ ಇರುತ್ತವೆ. ಈ ಕಾರಣದಿಂದಾಗಿ ನಿಯಮಿತವಾಗಿ ಈ ವಿಧಾನದಿಂದ ಸೋರಿಯಾಸಿಸ್, ಕಜ್ಜಿ, ಅಲರ್ಜಿ ಮುಂತಾದ ಕಾಲಿನ ಚರ್ಮರೋಗಗಳು ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಪಾದದಲ್ಲಿರುವ ಕೊಳೆಯಿಂದ ಮುಚ್ಚಿಹೋದ ಚರ್ಮದ ರಂಧ್ರಗಳನ್ನು ಇವು ತೆರೆದು ಸ್ವಚ್ಚಗೊಳಿಸುತ್ತವೆ. ಹಾಗಾಗಿ ಪಾದಕ್ಕೆ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ.   ಇವುಗಳ ದೊರಗು ಬಾಯಿಯಿಂದ ಸತ್ತ ಧರ್ಮವನ್ನು ಸುರಕ್ಷಿತವಾಗಿ ತೆಗೆಯಲ್ಪಟ್ಟು ಹೊಸ ಧರ್ಮ ಕಾಣುತ್ತದೆ. ಇದರೊಂದ ಚರ್ಮ ನುಣುಪಾಗುತ್ತದೆ ಮತ್ತು ಹೊಳೆಯುತ್ತದೆ.

ಈ ಮೀನುಗಳು ಆಕಾರ ಪುಟ್ಟದಾದರೂ ಬಾಯಿಯ ಶಕ್ತಿ ದೊಡ್ಡದು. ಪಾದವನ್ನು ಪ್ರತಿ ಸಾರಿ ಮೃದುವಾಗಿ ಕಚ್ಚುವಾಗ ಪಾದದ ನಿರ್ದಿಷ್ಟ ಸ್ಥಳಗಳಲ್ಲಿ ಒತ್ತಡ ಬಿದ್ದು ಆ ಮೂಲಕ ಆಕ್ಯುಪ್ರೆಷರ್ ಚಿಕಿತ್ಸೆ ರೀತಿ ಕೆಲಸ ಮಾಡುತ್ತದೆ. ಆದ್ದರಿಂದ ಪಾದ, ಹಿಮ್ಮಡಿ, ಗಂಟು ನೋವು ಕಡಿಮೆಯಾಗುತ್ತದೆ.  ಮೀನುಗಳ ಚಲನೆ, ಮೃದು ಸ್ಪರ್ಶದ ಕಚಗುಳಿಯಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *