ವಂಡರ್ ‘ವಾಲ್‍ನಟ್’

ವಾಲ್‍ನಟ್ ಮರದಿಂದ ಲಭಿಸುವ ಕಾಯಿ ಆರೋಗ್ಯವರ್ಧಕವಾದುದು. ಇದನ್ನು ಅಕ್ಷೋಟ ಅಥವಾ ಅಕ್ರೋಡು ಎಂದು ಸಹ ಕರೆಯಲಾಗುತ್ತದೆ. ಪರಸ್ಪರ ಹೋಲುವ ದೋಣಿಯಾಕಾರದ ಬೀಜಕೋಶ ಜೋಡಿಯಲ್ಲಿ ಸುವಾಸನೆಯ ಕಾಯಿ ಬಿಡುವ ಹಲವಾರು ಮರಗಳಿವೆ. ಇದರ ಕಾಯಿ ರುಚಿಯೊಂದಿಗೆ ಆರೋಗ್ಯ ರಕ್ಷಣೆಗೂ ಸಹಕಾರಿ. ವಾಲ್‍ನಟ್ ಪ್ರೊಟೀನ್, ಕೊಬ್ಬಿನಾವ್ಮ್ಲಗಳು ಮತ್ತು ಫೈಬರ್‍ನೊಂದಿಗೆ ಸಮೃದ್ಧವಾಗಿರುತ್ತದೆ. ವಿಟಮಿನ್ ಬಿ, ಮ್ಯಾಗ್ನಿಸಿಯಂ ಮತ್ತು ಆಂಟಿಅಕ್ಸಡಂಟ್‍ಗಳು, ಓಮೆಗಾ 3, ಫ್ಯಾಟಿ ಆಮ್ಲ, ಓಲಿಯಿಕ್ ಆಮ್ಲ, ಆಲ್ಫಾ ಲಿನೋಲೆನಿಕ್ ಆಮ್ಲ ಹಾಗೂ ಹಲವಾರು ವಿವಿಧ ಬಗೆಯ ಕ್ಯಾನ್ಸರ್ ಪ್ರತಿರೋಧಕ ವಸ್ತುಗಳನ್ನು ಒಳಗೊಂಡಿರುತ್ತದೆ.

ರೋಗ ನಿರೋಧಕ ವ್ಯವಸ್ಥೆಗೆ ಬೆಂಬಲ ನೀಡುವಲ್ಲಿ ಹಾಗೂ ಅಧಿಕ ಕೊಲೆಸ್ಟರಾಲ್‍ನನ್ನು ಕಡಿಮೆ ಮಾಡುವಲ್ಲಿ ಇದು ಸಹಕಾರಿ. ಮೂತ್ರಪಿಂಡ ಸಮಸ್ಯೆ, ಅಸ್ತಮಾವನ್ನು ನಿಯಂತ್ರಣಕ್ಕೆ ತರುವ ಜೊತೆಗೆ ಹೃದ್ರೋಗ ಸಮಸ್ಯೆಗಳನ್ನು ಕಡಿಮೆ ಮಾಡಿ, ಹ್ಲದಯದ ರಕ್ತನಾಳಗಳನ್ನು ಆರೋಗ್ಯಕರವಾಗಿ ಇಡುತ್ತದೆ.

ಜಠರ ಮತ್ತು ಕರುಳಿನ ರೋಗಗಳಿಂದ ನರಳುತ್ತಿರುವವರಿಗೆ ಈ ಕಾಯಿಯ ಕಷಾಯ ಅಥವಾ ಗಂಜಿ ತಯಾರಿಸಿ ನೀಡುವ್ಯದರಿಂದ ಉಪಶಮನ ಕಂಡು ಬರುತ್ತದೆ. ಪ್ರತಿ ದಿನ 25 ಗ್ರಾಂ ವಾಲ್‍ನಟ್ ಕಾಯಿಗಳನ್ನು ಸೇವಿಸಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಲಭಿಸುತ್ತವೆ.  ಸ್ಥೂಲಕಾಯ ಮತ್ತು ಬೊಜ್ಜು ನಿವಾರಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ದೇಹಕ್ಕೆ ಚೈತನ್ಯ ನೀಡುವ ಅದ್ಭುತ ಶುಷ್ಕ ಕಾಯಿ ಇದು. ಅಧಿಕ ರಕ್ತದೊತ್ತಡ, ಡಯಾಬಿಟಿಸ್ ಮತ್ತು ಹೃದ್ರೋಗ ಸಮಸ್ಯೆಗಳ ನಿಯಂತ್ರಣದಲ್ಲಿ ಇದು ಸಹಕಾರಿ. ಆರೋಗ್ಯವರ್ಧಕ ಶುಷ್ಕ ಫಲಗಳಲ್ಲಿ ವಾಲ್‍ನಟ್‍ಗೆ ವಿಶೇಷ ಸ್ಥಾನವಿದೆ. ಇದನ್ನು ವಿವಿಧ ಆಹಾರಗಳು ಮತ್ತು ಖಾದ್ಯಗಳಿಗೆ ಪೂರಕ ಪದಾರ್ಥವಾಗಿ ಬಳಸಲಾಗುತ್ತದೆ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *