ಮಧುಮೇಹದಿಂದ ಬಳಲುತ್ತಿರುವವರಿಗೆ ತುಂಬಾ ಒಳ್ಳೆಯದು ‘ರಂಜಾನ್ ಉಪವಾಸ’

ರಂಜಾನ್ ಮುಸಲ್ಮಾನರಿಗೆ ಪವಿತ್ರವಾದ ಮಾಸ. ಈ ತಿಂಗಳಲ್ಲಿ ಉಪವಾಸ ಕೈಗೊಳ್ಳುವುದು ಇಸ್ಲಾಮಿಕ್ ಧರ್ಮದ ಐದು ಸ್ಥಂಭಗಳಲ್ಲಿ ಒಂದು ಎಂದೇ ಭಾವಿಸಲಾಗುತ್ತದೆ. ಈ ತಿಂಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಮುಸಲ್ಮಾನರು ಊಟ ಮತ್ತು ಪಾನೀಯದಿಂದ ದೂರ ಉಳಿಯುತ್ತಾರೆ.
ಧಾರ್ಮಿಕವಾಗಿ ಬದ್ಧರಾಗಿರುವವರು ಆರೋಗ್ಯಕ್ಕೆ ಧಕ್ಕೆಯಾಗದ ರೀತಿ ಈ ತಿಂಗಳಲ್ಲಿ ಉಪವಾಸ ಮಾಡಬೇಕು ಎಂದು ಹೇಳಲಾಗುತ್ತದೆ. ವಯಸ್ಸಾದವರು, ಮಕ್ಕಳು, ಗರ್ಭಿಣಿಯರು, ಮಕ್ಕಳಿಗೆ ಹಾಲುಣಿಸುವ ತಾಯಂದಿರು, ಗಂಭೀರ ಸ್ವರೂಪದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಇದರಿಂದ ವಿನಾಯಿತಿ ಇದೆ.

ರಂಜಾನ್ ಅವಧಿಯಲ್ಲಿ ಉಪವಾಸ ಇರುವುದರಿಂದ ಈ ತಿಂಗಳಲ್ಲಿ. ಜೀವನಶೈಲಿಯಲ್ಲಿ ಕೆಲವೊಂದು ಮೂಲಭೂತ ಬದಲಾವಣೆ ತರಲಿದೆ. ಮಧುಮೇಹ ರೋಗಿಗಳ ಜೀವರಾಸಾಯನಿಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಈ ಬದಲಾವಣೆಯು ಉಪವಾಸ ಮತ್ತು ದೇಹದ ಆರೋಗ್ಯದಲ್ಲಿ ಸಂಭವಿಸುವ ಬದಲಾವಣೆಗಳು ನಿರಂತರ ಉಪವಾಸದ ಅವಧಿಯನ್ನು ಅವಲಂಬಿಸಿರುತ್ತದೆ. ಉಪವಾಸದ ಅವಧಿಯು ದೇಹದ ಮೇಲೆ ಪರಿಣಾಮ ಎಷ್ಟು ಎಂಬುದನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಉಪವಾಸದ ಅವಧಿಯಲ್ಲಿ ಗ್ಲುಕೋಸ್ ಶೇಖರಣೆಯ ಅಂಗಗಳಾದ ಯಕೃತ್ತು, ಮಾಂಸಖಂಡಗಳು (ಸ್ನಾಯುಗಳು) ದೇಹದ ಶಕ್ತಿಯ ಮುಖ್ಯ ಮೂಲವಾಗಿ ಮಾರ್ಪಡುತ್ತವೆ. ದೇಹದ ಆರೋಗ್ಯಕ್ಕೆ ಮೂಲ ಅಗತ್ಯವಾಗಿರುವ ಸಕ್ಕರೆ ಅಂಶವು ಬಳಕೆಯಾಗಲಿದೆ. ಸುದೀರ್ಘ ಅವಧಿಯ ಉಪವಾಸ ಸಂದರ್ಭದಲ್ಲಿ ಒಮ್ಮೆ ಸಕ್ಕರೆ ಅಂಶ ಕಡಿಮೆಯಾದರೆ ಬೊಜ್ಜು ಶಕ್ತಿಯು ಇನ್ನೊಂದು ಮೂಲವಾಗಲಿದೆ.

ಇನ್‍ಸುಲಿನ್ ಹಂತ ಮತ್ತು ಪರ್ಯಾಯ ನಿಯಂತ್ರಣ ಕ್ರಮಗಳು ಇವುಗಳ ನಡುವೆ ಸಮತೋಲನ ಹೊಂದಲು ಕಾರಣವಾಗಲಿವೆ. ಮಧುಮೇಹ ರೋಗಿಗಳ ಪೈಕಿ ಇನ್ಸುಲಿನ್ ಹಂತದಲ್ಲಿ ಏರುಪೇರು ಇರಲಿದ್ದು, ಅಸಮತೋಲನಕ್ಕೆ ಮಧುಮೇಹವೇ ಕಾರಣವಾಗಲಿದೆ. ಸರಿಯಾದ ರೀತಿಯಲ್ಲಿ ಉಪವಾಸ ಕೈಗೊಳ್ಳುವುದು ದೇಹದಲ್ಲಿನ ಶಕ್ತಿ ಮತ್ತು ಬೊಜ್ಜು ಪ್ರಮಾಣವನ್ನು ಸರಿಯಾದ ರೀತಿ ಬಳಕೆ ಮಾಡಿಕೊಳ್ಳಲು ಹಾಗೂ ತೂಕ ಇಳಿಸಿಕೊಳ್ಳಲು, ಸರಿಸಮಾನವಾಗಿ ಬೊಜ್ಜು ಪ್ರಮಾಣ ಕುಗ್ಗಿಸಲು, ರಕ್ತದೊತ್ತಡ ಕಡಿಮೆ ಮಾಡಲು ಈ ಮೂಲಕ ಮಧುಮೇಹ ಅಂಶವನ್ನು ನಿಯಂತ್ರಿಸಲು ನೆರವಾಗಲಿದೆ. ಮಧುಮೇಹ ರೋಗಿಗಳು ಕೂಡ ಸುರಕ್ಷಿತವಾಗಿ ಉಪವಾಸ ವ್ರತ ಕೈಗೊಳ್ಳುವುದು ಸಾಧ್ಯ. ಆದರೆ, ಇದರ ಸೂಕ್ತ ಮೇಲ್ವಿಚಾರಣೆ ಅಗತ್ಯ. ಸರಿಯಾಗಿ ನಿರ್ವಹಣೆ ಮಾಡದಿದ್ದರೆ ನಿಯಮಿತ ಇನ್ಸುಲಿನ್‍ನಲ್ಲಿ ಏರುಪೇರಾದರೆ ರಕ್ತದಲ್ಲಿನ ಸಕ್ಕರೆ ಅಂಶ ಏರುಪೇರಾಗುವ ಸಂಭವವಿದೆ. ಅಲ್ಲದೆ, ಮಧುಮೇಹದಿಂದಾಗಿ ಹೃದ್ರೋಗ, ಮೂತ್ರಪಿಂಡ ಮತ್ತು ಕಣ್ಣಿನ ಸಮಸ್ಯೆ ಇರುವವರು ಖಂಡಿತವಾಗಿ ಉಪವಾಸ ಮಾಡುವುದನ್ನು ಕೈಬಿಡಬಹುದು. ಮಧುಮೇಹದಿಂದ ಬಳಲುತ್ತಿರುವವರು ಔಷಧ ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು.

ಆದರೆ, ಇದನ್ನು ವಿಭಿನ್ನ ಸಮಯದಲ್ಲಿ ತೆಗೆದುಕೊಳ್ಳಬಹುದು. ಕೆಲವೊಂದು ಡೋಸ್‍ಅನ್ನು ಬದಲಿಸಬಹುದು. ಇದಕ್ಕಾಗಿ ಮಧುಮೇಹದಿಂದ ಬಳಲುತ್ತಿರುವವರು ತಮ್ಮ ವೈದ್ಯರ ಜತೆಗೆ ಚರ್ಚಿಸುವುದು ಅಂದರೆ ರಂಜಾನ್‍ಗೆ ಕನಿಷ್ಠ ಒಂದು ತಿಂಗಳು ಮೊದಲು ಚರ್ಚಿಸುವುದು ಸೂಕ್ತ.
ಮಧುಮೇಹಕ್ಕಾಗಿ ಇರುವ ನೂತನ ಔಷಧಿಗಳು ಈ ನಿಟ್ಟಿನಲ್ಲಿ ಸುರಕ್ಷಿತವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಬಲ್ಲವು. ಅಂದರೆ ಸಕ್ಕರೆ ಅಂಶ ಕಡಿಮೆ ಆಗದಂತೆ ನೋಡಿಕೊಳ್ಳಬಲ್ಲವು. ಇನ್ಸುಲಿನ್ ತೆಗೆದುಕೊಳ್ಳುತ್ತಿರುವವರು ಇನ್ಸುಲಿನ್‍ನ ಮಾದರಿ ಹಾಗೂ ಡೋಸೇಜ್ ಅನ್ನು ಬದಲಿಸಬಹುದು. ಟೈಪ್ 1ರ ಮಧುಮೇಹ ರೋಗಿಗಳು ಕೆಟೊಸಿಸ್ ಎಂದು ಹೇಳಲಾಗುವ ಗಂಭೀರ ಸ್ವರೂಪದ ಸಮಸ್ಯೆ ಎದುರಿಸಲಿದ್ದಾರೆ. ಹೀಗಾಗಿ, ಅವರು ಹೆಚ್ಚಿನ ಮೇಲ್ವಿಚಾರಣೆಯೊಂದಿಗೆ ಗಮನಹರಿಸಬೇಕಾದ ಅಗತ್ಯವಿದೆ. ಆದರೆ, ಟೈಪ್1 ಮಧುಮೇಹವುಳ್ಳವರು ಉಪವಾಸ ವ್ರತ ಕೈಗೊಳ್ಳದಿರುವುದು ಉತ್ತಮ.

ಉಪವಾಸದ ನಡುವೆ ಸಮತೋಲನವುಳ್ಳ ಆಹಾರ ಮತ್ತು ದ್ರವ ರೂಪದ ಆಹಾರ ಸೇವಿಸುವುದು ಅಗತ್ಯ. ಪಥ್ಯ ಎಂದಿಗೂ ಸಮತೋಲನದಿಂದ ಕೂಡಿರಬೇಕು. ಕಾರ್ಬೊಹೈಡ್ರೇಟ್ಸ್, ಬೊಜ್ಜು, ಪ್ರೋಟೀನ್ ಅಂಶಗಳು ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಉಪವಾಸದಿಂದ ಅಂತಿಮವಾಗಿ ತೂಕ ಹೆಚ್ಚಲು ಕಾರಣವಾಗಲಿದ್ದು, ತೂಕ ಇಳಿಸಿಕೊಳ್ಳುವ ಹಾಗೂ ಆರೋಗ್ಯವಾಗುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ. ದಿನದಲ್ಲಿ ಕೈಗೊಳ್ಳುವ ಎರಡು ಊಟ ಸೂರ್ಯೋದಯದ ಮೊದಲು (ಸುಹೂರ್), ಸೂರ್ಯಾಸ್ತದ ನಂತರ (ಇಫ್ತಾರ್) ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು. ಆಹಾರ ಸೇವನೆ ಸರಳವಾಗಿರಬೇಕು. ಸಾಮಾನ್ಯ ಪಥ್ಯಕ್ಕಿಂತಲೂ ಭಿನ್ನವಾಗಿರಬಾರದು.

ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿರುವ ಆಹಾರಗಳನ್ನು ಆದಷ್ಟು ಕಡಿಮೆ ಮಾಡಬೇಕು. ಸಂಕೀರ್ಣವಾದ ಕಾರ್ಬೊಹೈಡ್ರೇಟ್ ಒಳಗೊಂಡ ಆಹಾರವನ್ನು ಸುಹೂರ್ ಅವಧಿಯಲ್ಲಿ, ಸರಳವಾದ ಕಾರ್ಬೊಹೈಡ್ರೇಟ್ ಇರುವ ಆಹಾರವನ್ನು ಇಫ್ತಾರ್ ವೇಳೆಯಲ್ಲಿ ಕೈಗೊಳ್ಳುವುದು ಒಳಿತು. ದ್ರವರೂಪದ ಆಹಾರ ಸೇವನೆಯನ್ನು ಗಣನೀಯವಾಗಿ ಸೇವಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ನಿರೋಧಕ ಅಂಶಗಳಿರುವ ಆಹಾರ ಸೇವಿಸಬೇಕು. ಸೂರ್ಯೋದಯಕ್ಕೆ ಮುನ್ನ ಸೇವಿಸುವ ಊಟ (ಸುಹೂರ್) ಎಷ್ಟು ಸಾಧ್ಯವೋ ಅಷ್ಟು ವಿಳಂಬವಾಗಿ ಅಂದರೆ ಸೂರ್ಯೋದಯಕ್ಕೆ ಸ್ವಲ್ಪ ಹೊತ್ತಿನ ಮುಂಚೆ ಕೈಗೊಳ್ಳುವುದು ಉತ್ತಮ.

ದೈಹಿಕ ಚುಟವಟಿಕೆಗಳು ಕೂಡ ಸಾಮಾನ್ಯವಾಗಿ ಇರುವಂತೆ ನೊಡಿಕೊಳ್ಳಬೇಕು. ಹೆಚ್ಚಿನ ದೈಹಿಕ ಚಟುವಟಿಕೆಗಳು ಹೈಪೋಗ್ಲಿಸೇಮಿಯಾಕ್ಕೆ (ಸಕ್ಕರೆ ಪ್ರಮಾಣ ಕಡಿಮೆ ಆಗುವುದು) ಕಾರಣ ಆಗಬಹುದು. ಮುಖ್ಯವಾಗಿ ಸೂರ್ಯಾಸ್ತದ ಬಳಿಕ ಕೈಗೊಳ್ಳುವ ಊಟದ ಸ್ವಲ್ಪ ಹೊತ್ತಿನ ಮೊದಲು. ಮಧುಮೇಹದಿಂದ ಬಳಲುತ್ತಿರುವವರೆಲ್ಲರೂ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಆಗುತ್ತಿದೆ (ಕಡಿಮೆ ಸಕ್ಕರೆ ಅಂಶ 60ಎಂಜಿ/ಡಿಎಲ್) ಎಂಬುದಕ್ಕೆ ಮೊದಲೇ ಉಪವಾಸ ವ್ರತ ಅಂತ್ಯಗೊಳಿಸುವುದು ಉತ್ತಮ. ಏಕೆಂದರೆ, ಚಿಕಿತ್ಸೆ ವಿಳಂಬವಾದಷ್ಟೂ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಆಗುತ್ತಾ ಹೋಗಲಿದೆ. ಮುಖ್ಯವಾಗಿ ಇನ್ಸುಲಿನ್‍ನಲ್ಲಿ ಇದ್ದಾಗ ಅಥವಾ ಸಕ್ಕರೆ ಅಂಶ ಕುಗ್ಗಿಸುವ ಔಷಧ ಸೇವಿಸುವಾಗ. ಅಲ್ಲದೆ, ಸಕ್ಕರೆ ಅಂಶ 300 ಎಂಜಿ/ಡಿಎಲ್‍ಗಿಂತ ಹೆಚ್ಚಾದಾಗ ಉಪವಾಸ ಅಂತ್ಯಗೊಳಿಸಬೇಕು. ಅಲ್ಲದೆ, ಅನಾರೋಗ್ಯ ಇರುವಾಗ ಉಪವಾಸ ಕೈಗೊಳ್ಳಬಾರದು.  ಅಲ್ಲದೆ, ಉಪವಾಸ ಆರಂಭಕ್ಕೂ ಮುನ್ನ ಹಾಗೂ ಉಪವಾಸದ ಸಂದರ್ಭದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಗಮನಿಸಿಕೊಳ್ಳುವುದು ಅಗತ್ಯ. ಈ ಮೂಲಕ ಸುರಕ್ಷಿತ ರಂಜಾನ್ ಉಪವಾಸ ಮಾಡಬಹುದು.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *