ಜೀನ್ಸ್ ಪ್ಯಾಂಟ್ ಧರಿಸೋದು ಮೊದಲು ಹುಷಾರ್

ಜೀನ್ಸ್ ಆಧುನಿಕ ಯುವಕ ಯುವತಿಯರ ನೆಚ್ಚಿನ ಉಡುಪುಗಳಲ್ಲೊಂದು. ಕಾಲೇಜು ವಿದ್ಯಾರ್ಥಿಗಳಿಗಂತೂ ಜೀನ್ಸ್ ಎಂದರೆ ಪಂಚಪ್ರಾಣ. ಟೈಟ್ ಜೀನ್ಸ್, ಹೈ ಹೀಲ್ಡ್ ಧರಿಸಿ ಸ್ಟೈಲಾಗಿ ಹೊರಗೆ ಹೋಗುವ ಮುನ್ನ ಕೊಂಚ ಯೋಚಿಸಿ. ಇಂಥ ಫ್ಯಾಶನ್ ವ್ಯಾಮೋಹವು ನಿಮ್ಮ ಆರೋಗ್ಯಕ್ಕೇ ಕುತ್ತು ತರಬಹುದು!  ಫ್ಯಾಷನ್‍ಗೂ ಆರೋಗ್ಯಕ್ಕೂ ಏನು ನಂಟು ಎಂದು ಕೇಳಬೇಡಿ. ಮೈಗಂಟುವ ಜೀನ್ಸ್ ತೊಡುವುದರಿಂದ ನರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ವೈದ್ಯರು ಹೇಳುತ್ತಾರೆ. `ಟೈಟ್ ಜೀನ್ಸ್ ತೊಡುವವರಲ್ಲಿ `ಮೆರಲ್ಜಿಯಾ ಪರೆಸ್ತೆಟಿಕಾ` ಎನ್ನುವ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕಾಲುಗಳಿಗೆ ಜೋಮು ಹಿಡಿಯುವುದು, ನೋವು ಹಾಗೂ ಸೆಳೆತ ಈ ಕಾಯಿಲೆಯ ಲಕ್ಷಣ. ಟೈಟ್ ಜೀನ್ಸ್ ತೊಟ್ಟಾಗ ತೊಡೆಯ ಮೇಲ್ಭಾಗದ ನರಗಳ ಮೇಲೆ ಒತ್ತಡ ಬೀಳುತ್ತದೆ. ಟೈಟ್ ಜೀನ್ಸ್ ತೊಟ್ಟು ಜತೆಗೆ ಎತ್ತರ ಹಿಮ್ಮಡಿಯ ಚಪ್ಪಲಿ ಧರಿಸಿದರಂತೂ ಈ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳಬಹುದು.

ಹುಡುಗಿಯರು ಜೀನ್ಸ್ ಧರಿಸುವುದರಿಂದ ಅವರ ಮೇಲೆಯೇ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇಂತಹ ಆಕ್ಷೇಪಕಾರಿ ಬಟ್ಟೆ ಧರಿಸುವುದರಿಂದ ಚುಡಾವಣೆಯಂತಹ ಪ್ರಸಂಗಗಳು ಹೆಚ್ಚಿವೆ ಜೀನ್ಸ್ ಧರಿಸುವುದರಿಂದ ಲೈಂಗಿಕ ಕಿರುಕುಳ ಪ್ರಕರಣಗಳು, ಚುಡಾವಣೆ, ಯುವ ಜೋಡಿಗಳ ಪರಾರಿ ಮುಂತಾದುವು ಹೆಚ್ಚಿವೆ. ಅದಕ್ಕೆಲ್ಲ ಆಕ್ಷೇಪಕಾರಿ ಬಟ್ಟೆಗಳು ಪ್ರಚೋದನೆ ನೀಡುತ್ತವೆ ಎಂಬುದು ಕೆಲವರ ವಾದ.

ಫ್ಯಾಷನ್ ಲೋಕದಲ್ಲಿ ಹರಿದ ಪ್ಯಾಂಟï ನ ದರಬಾರು ಹೆಚ್ಚಾಗಿದೆ. ಹರಿದ ಜೀನ್ಸ್ ಹಾಕುವ ಫ್ಯಾಶನ್ ಹೊಸದೇನು ಅಲ್ಲ. ಜನಪ್ರಿಯ ಸಿನಿಮಾ ತಾರೆಗಳು, ಕ್ರಿಕೆಟ್ ತಾರೆಯರು ಕಾಲೇಜು ಹುಡುಗರಿಗೆ ಹರಿದ ಪ್ಯಾಂಟ್ ಧರಿಸುವುದು ಒಂದು ಫ್ಯಾಷನ್ ಆಗಿದೆ. ಈ ರೀತಿಯ ಹರಿದ ಪ್ಯಾಂಟï ಮೇಲೆ ಟಿ-ಶರ್ಟ್ ಅಥವಾ ಶರ್ಟ್ ಧರಿಸಬಹುದಾಗಿದ್ದು ಅದರ ಜೊತೆ ಈ ಕೆಳಗಿನ ಟಿಪ್ಸï ಪಾಲಿಸಿದರೆ ಮತ್ತಷ್ಟು ಫ್ಯಾಷನ್ ಆಗಿ ಕಾಣಬಹುದು. ಆದರೆ ನೆನಪಿರಲಿ ನಾವು ಬಟ್ಟೆಗಳನ್ನು ಧರಿಸುವುದು ನಮ್ಮ ಮೈ ಮುಚ್ಚಲೆಂದೆ ಹೊರತು ದೇಹದ ಅಂಗಾಂಗಗಳ ಪ್ರದರ್ಶಿಸುವುದಕ್ಕಲ್ಲ.

ಜೀನ್ಸ್ ಧರಿಸುವ ಮುನ್ನ….

ಜೀನ್ಸ್ ಫ್ಯಾಶನ್ ಎಷ್ಟು ಚಂದವೋ ಅದು ನಮ್ಮ ದೇಹಕ್ಕೆ ಹೊಂದಿಕೊಳ್ಳುವುದಿಲ್ಲವಾದರೆ ಅಷ್ಟೇ ಕೆಟ್ಟದಾಗಿ ಕಾಣಿಸುತ್ತದೆ. ಹೀಗಾಗಿ ಉತ್ತಮ ಜೀನ್ಸ್ ಆಯ್ಕೆಗೆ ಮುನ್ನ ಹಾಗೂ ಧನ್ನನು ಧರಿಸುವ ಮುನ್ನ ಈ ಕೆಳಗಿನ ಅಂಶಗಳು ನೆಪಿರಲಿ.* ಗಾಢ ಬಣ್ಣದ ಜೀನ್ಸ್ ಪ್ಯಾಂಟ್‍ಗಳು ನಿಮಗೆ ಸ್ಲಿಮ್ ಹಾಗೂ ಕ್ಲಾಸಿಕ್ ಲುಕ್ ನೀಡುತ್ತದೆ. ಜೀನ್ಸ್ ಪ್ಯಾಂಟï ನಿಮ್ಮ ಫಾರ್ಮಲ್ ಹಾಗೂ ಕ್ಯಾಶುವಲ್ ಅಗತ್ಯಗಳನ್ನು ಕೂಡಾ ಸರಿದೂಗಿಸಬಲ್ಲುದು. ಜೀನ್ಸ್ ಪ್ಯಾಂಟ್ ಅದರ ಮೇಲೊಂದು ನಿಮಗೊಪ್ಪುವ ಶರ್ಟ್ ಅಥವಾ ಟಿ-ಶರ್ಟ್ ಹಾಗೂ ನಿಮಗೊಂದು ರೋಯಲ್ ಆಕರ್ಷಣೆ ನೀಡುತ್ತದೆ.

* ನಿಮ್ಮ ಸೋಂಟದ ಅಳತೆಯ ಬಗ್ಗೆ ಸ್ವಲ್ಪ ಎಚ್ಚರವಿರಲಿ. ಜೀನ್ಸ್ ಪ್ಯಾಂಟ್‍ಗಳು ಹಲವಾರು ವಿಧಗಳಲ್ಲಿ ಬರುವುದರಿಂದ ಫಾರ್ಮಲ್ ಪ್ಯಾಂಟ್‍ಗಳ ಸೊಂಟದ ಅಳತೆ ಹಾಗೂ ಜೀನ್ಸ್ ಅಳತೆ ಒಂದೇ ರೀತಿ ಇರುವುದಿಲ್ಲ.

* ಜೀನ್ಸ್ ಪ್ಯಾಂಟ್‍ಗಳನ್ನು ಸೊಂಟದ ಮಟ್ಟಕ್ಕೆ ಅಥವಾ ಅದಕ್ಕಿಂತ ಸ್ವಲ್ಪ ಕೆಳಗೆ ಹೆಚ್ಚಾಗಿ ಧರಿಸುವುದರಿಂದ ನಿಮ್ಮ ಒಳ ಉಡುಪುಗಳ ಬಗ್ಗೆ ಜಾಗ್ರತೆ ಇರಲಿ.
* ಸ್ಕಿನ್ ಟೈಟ್ ಹಾಗೂ ಸ್ಟ್ರೆಚ್ ಜೀನ್ಸ್‍ಗಳು ಸಂದರ್ಭಕ್ಕೆ ಅನುಸಾರವಾಗಿ ಶೋಭೆ ನೀಡುತ್ತವೆ. ಕುರ್ತಾ ತರಹದ ಉಡುಪು ಈ ಜೀನ್ಸ್‍ಗಳಿಗೆ ಚೆನ್ನಾಗಿ ಒಪ್ಪುತ್ತದೆ.

* ಹಲವಾರು ಬಾರಿ ಜೀನ್ಸ್ ಪ್ಯಾಂಟ್ ನಿಮ್ಮ ಪಾದರಕ್ಷೆಗಳನ್ನು ದಾಟಿ ನೆಲವನ್ನು ಶುಚಿಮಾಡಲು ಆರಂಭಿಸುತ್ತವೆ. ಆದುದರಿಂದ ನಿಮ್ಮ ಪ್ಯಾಂಟ್‍ನ ಉದ್ದದ ಬಗ್ಗೆ ಸರಿಯಾದ ನಿಗಾ ಇರಲಿ.

* ಜೀನ್ಸ್ ಗಳು ನೋಡಲು ಚಂದ ಕಂಡರೂ ಕೆಲವು ಬಾರಿ ಅವು ನಿಮ್ಮ ಆಕಾರಕ್ಕೆ ಹೊಂದುವುದಿಲ್ಲ ಹಾಗಾಗೀ ಜೀನ್ಸ್ ಪ್ಯಾಂಟ್ ಮೋಹ ಬಿಟ್ಟು ನಿಮಗೆ ಉತ್ತಮ ಎನಿಸುವ ಇತರ ಬಟ್ಟೆಗಳತ್ತ ನೀವು ಮುಖ ಮಾಡಬಹುದು. ಆದರೂ ಜೀನ್ಸ್ ಧರಿಸಲೇ ಬೇಕೆಂತಾದರೆ ಜೀನ್ಸ್ ಶರ್ಟ್, ಕುರ್ತಾಗಳನ್ನು ಟ್ರೈ ಮಾಡಬಹುದು.

ಕೊನೆಯದಾಗಿ ಹೇಳಬೆಕೆಂದರೆ ಜೀನ್ಸ್ ಅಥವಾ ಮತ್ಯಾವುದೋ ಬಟ್ಟೆ ಇರಲಿ ನಾವು ಅವುಗಳನ್ನು ಧರಿಸುವ ಉದ್ದೇಶ ನಮ್ಮ ದೇಹದ ಅಂಗಾಂಗಗಳನ್ನು ಮುಚ್ಚಿಕೊಳ್ಳಲು ಎಂಬುದು ಸದಾ ನೆನಪಿರಲಿ. ನಿಮ್ಮ ಬಟ್ಟೆ ನಿಮಗೆ ಗೌರವ ಮತ್ತು ಒಂದು ಇಮೇಜ್‍ನ್ನು ತಂದು ಕೊಡುವ ಹಾಗಿರಬೇಕೆ ಹೊರತು. ನಿಮ್ಮ ಬಗ್ಗೆ ಮತ್ತೊಬ್ಬರು ಕೆಟ್ಟದಾಗಿ ಯೋಚಿಸಲು ಅನುವು ಮಾಡಿಕೊಡದಿರಲಿ. ನಿಮ್ಮ ಡ್ರೆಸ್ ಬೆರೆಯವರನ್ನು ಕೆಣಕದಂತಿರಲಿ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *