‘ಹಗ್’ ಮಾಡೋ ಮುನ್ನ ಈ ವಿಷಯದ ಬಗ್ಗೆ ಗಮನವಿರಲಿ

ಮನುಷ್ಯ ಭಾವನಾ ಜೀವಿ, ಭಾವನೆಗಳಿಲ್ಲದವನು ಎಂದೂ ಮನುಷ್ಯನಾಗಲಾರ. ನಮ್ಮ ಭಾವನೆಗಳೇ ನಮನ್ನು ಎಲ್ಲ ಪ್ರಾಣಿಗಳಿಗಿಂತ ಉನ್ನತ ಮಟ್ಟದಲ್ಲಿ ಇರಿಸಿರೋದು. ಹಾಗಂತ ಬೇರಾವ ಪ್ರಾಣಿಗಳಿಗೂ ಭಾವನೆಗಳಿಲ್ಲ ಎಂದಲ್ಲ. ಬೇರೋಬ್ಬರ ಎಲ್ಲ ಭಾವನೆಗಳನ್ನು ಅರಿಯುವ ಮತ್ತು ಆ ಭಾವನೆಗಳಿಗೆ ಸ್ಪಂದಿಸುವ ವಿಶೇಷ ಶಕ್ತಿ ಇರುವುದು ಮನಸ್ಸಿರುವ ಈ ನಮ್ಮ ಮನುಷ್ಯ ಜಾತಿಯಲ್ಲಿ ಮಾತ್ರ. ನಮ್ಮ ಭಾವನೆಗಳಿಗೆ ಬೆಲೆ ಸಿಗುವುದು ಬೇರೆಯವರು ಅವುಗಳಿಗೆ ಸ್ಪಂದಿಸಿದಾಗ ಅವರು ನಮ್ಮನ್ನು ಅರ್ಥಮಾಡಿಕೊಂಡಾಗ. ಆದರೆ ಮತ್ತೊಬ್ಬರು ನಮ್ಮ ಭಾವನೆಗಳಿಗೆ ಬೆಲೆ ಕೊಡಬೇಕೆಂದರೆ ನಮ್ಮಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಮುಖ್ಯವಾಗಿರುತ್ತೆ.

ನಮ್ಮ ಭಾವನೆಗಳನ್ನು ನಾವು ನಾನಾ ರೀತಿಯಲ್ಲಿ ವ್ಯಕ್ತ ಪಡಿಸುತ್ತೇವೆ. ಕೆಲವರು ಮುಖದಲ್ಲೇ ಎಲ್ಲವನ್ನು ಮಾತನಾಡುತ್ತಾರೆ. ತಮ್ಮ ನಗುವಿನಲ್ಲೇ ಇಡೀ ಪ್ರಪಂಚವನ್ನು ತಮ್ಮ ಸ್ವಂತವಾಗಿಸಿಕೊಂಡುಬಿಡುತ್ತಾರೆ. ಅದು ದೇವರು ಅವರಿಗೆ ಕೊಟ್ಟ ಉಡುಗೂರೆ. ಇನ್ನು ಕೆಲವರು ತಮ್ಮ ಕಣ್ಣುಗಳಲ್ಲೇ ತಮ್ಮ ಭಾವನೆಗಳಿಗೆ ಬೆಳಕು ನೀಡುತ್ತಿರುತ್ತಾರೆ. ಆದರೆ ವಿಭನ್ನ ಮನಸ್ಥಿತಿಯನ್ನು ಹೊಂದಿದವರು ಭಾವನೆಗಳಿಗೆ ಬೇಲಿ ಹಾಕಿ ಮನಸ್ಸಿನಲ್ಲಿಯೇ ಅವುಗಳನ್ನು ಬಂಧಿಸಿಟ್ಟಿರುತ್ತಾರೆ. ಪ್ರತಿಯೊಬ್ಬರಿಗೂ ಭಾವನೆಗಳಿರುತ್ತವೆ, ನೋವುಗಳಿರುತ್ತವೆ, ತಮ್ಮದೇ ಆದ ಕನಸುಗಳಿರುತ್ತವೆ. ಆದರೆ ಅವುಗಳನ್ನು ನಾವು ಎಲ್ಲರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ. ನಮ್ಮ ಮನಸ್ಸಿಗೆ ಸ್ಪಂದಿಸಿದವರೊಂದಿಗೆ ಆ ಭಾವನೆಗಳು ತಾವಗಿಯೇ ರೆಕ್ಕೆ ಬಿಚ್ಚಿ ಹೊರಬರುತ್ತವೆ.

ಮನುಷ್ಯನ ಒಂದು ಬಲಹೀನತೆಯೆಂದರೆ ತನ್ನ ಸಂತೋಷವನ್ನಾಗಲಿ ಅಥವಾ ದು:ಖವನ್ನಾಗಲಿ ತಾನೋಬ್ಬನೆ ಅನುಭವಿಸಬೇಕು ಎಂದುಕೊಳ್ಳುವುದಿಲ್ಲ. ಆದರೆ ಕೆಲವರು ತಮ್ಮ ದು:ಖವನ್ನು ತಮ್ಮ ಮನಸ್ಸಿನಲ್ಲಿಯೇ ಇರಿಸಿಕೊಂಡು ತಮ್ಮ ಖುಷಿಯನ್ನು ಮಾತ್ರ ಹಂಚಿಕೊಳ್ಳುತ್ತಾರೆ. ಅತೀ ಸಂತೋಷವಾದಾಗ ನಾವು ತುಂಬ ಇಷ್ಟಪಡುವವರನ್ನು ಒಮ್ಮೆ ತಬ್ಬಿಕೊಂಡು ಆ ಸಂತೋಷವನ್ನು ಅವರೊಂದಿಗೆ ಹಂಚಿಕೊಳ್ಳುತ್ತೇವೆ. ಹಾಗೆಯೇ ಅತೀ ದು:ಖವೆನಿಸಿದಾಗ ಮನಸ್ಸು ಮತ್ತೊಬ್ಬರ ಆಲಿಂಗನವನ್ನು ಬೇಡುತ್ತದೆ. ಪ್ರೀತಿಯಿಂದ ನಾವಿಷ್ಟಪಟ್ಟವರನ್ನು ಅಥವಾ ನಮ್ಮನ್ನಿಷ್ಟಪಡುವವರು ತಬ್ಬಿಕೊಂಡಾಗ ಆಗುವ ಸಂತೋಷ ನಮ್ಮ ಮನಸ್ಸಿನಲ್ಲ್ಲಿರೋ ಎಷ್ಟೋ ನೋವುಗಳಿಗೆ ಸಮಾಧಾನ ನೀಡುತ್ತದೆ. ಮತ್ತೊಬ್ಬರ ತೋಳಿನಲ್ಲಿ ನಾವು ಬಂದಿಯಾದ ಆ ಕ್ಷಣ ನಮ್ಮನ್ನು ನಾವು ಮರೆಯುವಂತೆ ಮಾಡುತ್ತದೆ.

ಸಾಮಾನ್ಯವಾಗಿ ನಾವು ವಿದೇಶದವರು ಹಗ್ ಮಾಡಿಕೊಳ್ಳುವುದನ್ನು ಚೇಡಿಸುತ್ತೇವೆ. ಆದರೆ ಅದು ಭಾವನೆಗಳನ್ನು, ಸಂತೋಷವನ್ನು, ದು:ಖವನ್ನು ಮತ್ತು ಅಭಿನಂದನೆಗಳನ್ನು ಹಂಚಿಕೊಳ್ಳಲು ವಿದೇಶಿಗರು ಕಂಡುಕೊಂಡ ಒಂದು ಮಾರ್ಗ. ತಮಗೆ ಪರಿಚಯವಿರಲಿ, ಇಲ್ಲದಿರಲಿ ಹಗ್ ಮಾಡಿಕೊಂಡು ಅಭಿನಂದಿಸುವುದು ಅವರ ಶೈಲಿ. ನಮ್ಮಲ್ಲಿ ಅವರಂತೆ ಹಗ್ ಮಾಡಿಕೊಳ್ಳುವ ಸಂಸ್ಕøತಿಯಿಲ್ಲದಿದ್ದರೂ ನಮ್ಮಲ್ಲಿ ಈ ‘ಆಲಿಂಗನ’ಕ್ಕೆ ಭಾವನಾರ್ಥಕ ಸಂಬಂಧs ಇದೆ. ಆದರೆ ಅದು ಇಂದು ಬದಲಾಗಿದೆ. ವಿದೇಶಿಗರಂತೆ ನಾವೂ ಕೂಡ ಈ ಪದ್ದತಿಯನ್ನು ಅನುಸರಿಸುತ್ತಿದ್ದೇವೆ. ಅದಕ್ಕೆ ಕಾರಣ ಆಧುನೀಕರಣ. ಇಂದಿನ ಯುವಕ / ಯುವತಿಯರು ಹಗ್ ಮಾಡಿಕೊಳ್ಳುವುದನ್ನು ಹಾಬಿಯಾಗಿಸಿಕೊಂಡಿದ್ದಾರೆ. ಹಗ್ ಮಾಡಿಕೊಳ್ಳುವ ವಿಷಯವನ್ನಿಟ್ಟುಕೊಂಡು ಇಷ್ಟೆಲ್ಲಾ ಹೇಳಲು ಕಾರಣ ಇದೆ. ಹಗ್ ಮಾಡುವುದರಿಂದ ಬೇರೆಯವರೊಂದಿಗೆ ನಿಮ್ಮ ಭಾಂಧವ್ಯ ವೃದ್ಧಿಯಾಗಬೇಕೆ ವಿನಃ, ನಿಮ್ಮ ಮೇಲೆ ಕೀಳರಿಮೆ ಬರಬಾರದು. ನೀವು ಬೇರೊಬ್ಬರನ್ನು ಹಗ್ ಮಾಡುವ ಮುನ್ನ ನಿಮ್ಮ ಮನಸ್ಸಷ್ಟೇ ಅಲ್ಲ ಮೈ ಕೂಡ ಶುದ್ಧವಾಗಿರಬೇಕು.

ನೀವು ಮತ್ತೊಬ್ಬರನ್ನು ತಬ್ಬಿಕೊಳ್ಳುವುದಕ್ಕಿಂತ ಮೊದಲು ಅಥವಾ ಬೇರೊಬ್ಬರು ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಡಲೇಬೇಕು. ಇಲ್ಲದಿದ್ದರೆ ಎಷ್ಟೇ ಪ್ರೀತಿಯಿದ್ದರೂ ನಿಮ್ಮನ್ನು ತಬ್ಬಿಕೊಂಡವರಿಗೆ ನಿಮ್ಮ ಬಗ್ಗೆ ಅಸಹ್ಯ ಹುಟ್ಟದೇ ಇರದು.

+ ನಾವು ಬೇರೊಬ್ಬರನ್ನು ಅಥವಾ ಬೇರೊಬ್ಬರು ನಿಮ್ಮನ್ನು ಆಲಿಂಗಿಸುವ ಮುನ್ನ ದೇಹದ ಸ್ವಚ್ಚತೆ ಬಗ್ಗೆ ಗಮನವಿರಲಿ. ಪ್ರತಿ ದಿನ ಗಂಟೆಗಳವರೆಗೆ ಸ್ನಾನ ಮಾಡಿದರೆ ಸಾಲದು. ಆರೋಗ್ಯಕರ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ದೇಹದಿಂದ ಬೆವರು ಹೊರ ಬರುವುದು ಎಲ್ಲರಲ್ಲೂ ಸಾಮಾನ್ಯವಾದರೂ. ಕೆಲವರಲ್ಲಿ ಹೆಚ್ಚಿನ ಬೆವರು ದೇಹದ ದುರ್ಗಂಧವನ್ನು ಹೆಚ್ಚಿಸುವುದರಿಂದ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿದರೆ ತಪ್ಪೇನು ಇಲ್ಲ.

+ ಅತಿಯಾದ ಪರ್‍ಫ್ಯೂಮ್‍ಗಳ ಬಳಕೆ ಒಳ್ಳೆಯದಲ್ಲ. ಪರ್‍ಫ್ಯೂಮ್ ಅಥವಾ ಡಿಯೋಡ್ರೆಂಟ್‍ಗಳನ್ನು ಕೊಳ್ಳುವಾಗ ಜಾಗ್ರತೆÀವಹಿಸಿ. ಏಕೆಂದರೆ ನಿಮಗೆ ಇಷ್ಟವಾದ ಪರ್‍ಫ್ಯೂಮ್ ಬೇರೆಯವರಿಗೆ ಇರಿಟೆಟಿಂಗ್ ಅನ್ನಿಸಬಾರದು.

+ ನೀವು ಬೇರೊಬ್ಬರನ್ನು ತಬ್ಬಿಕೊಳ್ಳುವ ಮುನ್ನ ಅವರ ಮನಸ್ಥಿತಿಯನ್ನು ಅರಿತುಕೊಳ್ಳಿ. ಅವರಿಗೆ ಮನಸ್ಸಿಲ್ಲದಿದ್ದರೂ ನೀವು ಅವರನ್ನು ತಬ್ಬಿಕೊಳ್ಳಲು ಯತ್ನಿಸಿದಲ್ಲಿ ಅವರ ದೃಷ್ಟಿಯಲ್ಲಿ ನಿಮ್ಮ ನಡವಳಿಕೆಗಳ ಬಗ್ಗೆ ಅಸಹ್ಯ ಹುಟ್ಟಬಹುದು?

+ಇನ್ನು ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಆಲಿಂಗನ ಭಾವನೆಗಳೊಂದಿಗೆ ಬೆಸೆದುಕೊಂಡಿರುವುದರಿಂದ, ಭಾವನಾತ್ಮಕ ಸಂದರ್ಭದಲ್ಲಿ ಮಾತ್ರ ಇಂತಹ ಪ್ರಯತ್ನ ಮಾಡಿ. ಸಮಯದ ಅರಿವಿಲ್ಲದೆ ಸಲಿಗೆಯಿಂದ ನಿಮ್ಮವರನ್ನು ಕಂಡ ಕಂಡ ಜಾಗದಲ್ಲಿ ತಬ್ಬಿಕೊಳ್ಳುವುದು ನಿಮ್ಮ ನಡವಳಿಕೆಯ ಬಗ್ಗೆ ಬೇರೊಬ್ಬರು ಮಾತನಾಡಿಕೊಳ್ಳಲು ಅನುವು ಮಾಡಿಕೊಡದಂತೆ ನೋಡಿಕೊಳ್ಳಿ. ಎಕೆಂದರೆ ನಮ್ಮಲ್ಲಿ ತಮ್ಮ ನಡವಳಿಕೆಗಿಂತ ಬೇರೆಯವರ ನಡವಳಿಕೆಗಳ ಬಗ್ಗೆ ಮಾತನಾಡಿಕೊಳ್ಳುವವರೇ ಜಾಸ್ತಿ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *