ಸಂಬಂಧಗಳನ್ನು ಗಟ್ಟಿಯಾಗಿಸಬಲ್ಲ ಪುಟ್ಟ ಬ್ರೇಕ್

ನಾವೆಲ್ಲಾ ನಾವು ಇಷ್ಟ ಪಡುತ್ತಿರುವ ವ್ಯಕ್ತಿ ಸದಾ ನಮ್ಮ ಜೊತೆಯಲ್ಲಿಯೇ ಇರಬೇಕೆಂದು ಬಯಸುತ್ತೇವೆ. ಸ್ವಲ್ಪ ದಿನ ಒಬ್ಬರನ್ನೊಬ್ಬರು ಅನಿವಾರ್ಯವಾಗಿ ಬಿಟ್ಟು ಇರಬೇಕಾದ ಪರಿಸ್ಥಿತಿ ಬಂದರೆ ತುಂಬಾ ಬೇಜಾರು ಪಟ್ಟುಕೊಳ್ಳುತ್ತೇವೆ. ಆದರೆ ನಾವಾಗಿ ಈ ಸಂಬಂಧದಿಂದ ದೂರ ಇರಲು ಬಯಸುತ್ತೇವೆಯೇ? ಖಂಡಿತ ಇಲ್ಲ. ಸಂಬಂಧದಲ್ಲಿ ಏನಾದರೂ ಬಿರುಕು ಕಂಡು ಬಂದು ಇನ್ನು ಇವನ/ಳ ಜೊತೆ ಸಂಬಂಧ ಮುಂದುವರೆಸಿಕೊಂಡು ಹೋಗಲು ಸಾಧ್ಯವಿಲ್ಲ ಅನ್ನುವಾಗ ರಿಲೇಷನ್ ಶಿಪ್ ಅನ್ನು ಬ್ರೇಕ್ ಅಪ್ ಮಾಡಿಕೊಳ್ಳುವವರನ್ನು ನೋಡುತ್ತೇವೆ. ಆದರೆ ನಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗಬೇಕೆಂದು ಸ್ವಲ್ಪ ಕಾಲ ಬ್ರೇಕ್ ಮಾಡುವವರು ತುಂಬಾ ವಿರಳ! ಬ್ರೇಕ್ ಅಪ್ ಮಾಡಿಕೊಂಡರೆ ಬ್ರೇಕï ಅಪï ಮಾಡಿಕೊಂಡು ಪ್ರೀತಿ ಹೆಚ್ಚಿಸುವುದು ಹೇಗೆ?

ಜೊತೆಯಲ್ಲಿದ್ದರೆ ಪ್ರೀತಿ, ಆಗಾಗ ಮುನಿಸ್ಸು ಇವೆಲ್ಲಾ ಸಾಮಾನ್ಯ. ಆದರೆ ಕೆಲವರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರೂ ಅಷ್ಟೇ ಜಗಳ ಕೂಡ ಆಡುತ್ತಾರೆ. ಅಂತಹವರು ಸ್ವಲ್ಪ ಕಾಲ ಬೇರೆ ಇರಿ. ಈ ರೀತಿ ಸಂಬಂಧದಲ್ಲಿ ಬ್ರೇಕ್ ತೆಗೆದುಕೊಂಡು ದೂರವಿದ್ದಾಗ ಅವರಿಗೆ ಫೋನ್ ಮಾಡಿ ಮಾತನಾಡುವುದು ಕೂಡ ಮಾಡಬಾರದು. ಈ ರೀತಿ ಮಾಡಿದಾಗ ನೀವು ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಅನ್ನುವುದು ಅರ್ಥವಾಗುತ್ತದೆ. ಕೆರಿಯರ್ ಬಿಲ್ಡï ಮಾಡಬೇಕು, ಅದಕ್ಕಾಗಿ ತನ್ನೆಲ್ಲಾ ಗಮನವನ್ನು ಅದರ ಮೇಲೆ ಹರಿಸಬೇಕು ಎಂದು ಬಯಸುವವರು ಸಂಬಂಧದಿಂದ ಬ್ರೇಕ್ ತೆಗೆದುಕೊಳ್ಳುವುದು ಒಳ್ಳೆಯದು. ಈ ರೀತಿ ಬ್ರೇಕ್ ತೆಗೆದುಕೊಳ್ಳುವಾಗ ನಮ್ಮ ಭವಿಷ್ಯಕ್ಕಾಗಿ ಈ ಬ್ರೇಕ್. ಆದ್ದರಿಂದ ಸ್ವಲ್ಪ ಸಮಯಾವಕಾಶ ಕೊಡು ನಂತರ ನಾವು ಜೊತೆಯಾಗಿ ಬಾಳುವ ಅನ್ನುವುದನ್ನು ನೀವು ನಿಮ್ಮನ್ನು ಇಷ್ಟಪಡುತ್ತಿರವವರಿಗೆ ಮನದಟ್ಟು ಮಾಡಿಕೊಡಬೇಕು.

ಅಲ್ಲದೆ ಈ ರೀತಿಯ ಬ್ರೇಕ್ ಮಾನಸಿಕವಾಗಿ ನಮ್ಮನ್ನು ಗಟ್ಟಿ ಮಾಡುತ್ತದೆ. ಜೀವನದ ಬಗ್ಗೆ ಅವಲೋಕನ ಮಾಡಬಹುದು. ಜೊತೆಯಲ್ಲಿ ಬಾಳಲು ನಮ್ಮಲ್ಲಿ ಆಗಬೇಕಾದ ಬದಲಾವಣೆಗಳೇನು ಎಂಬುದೆಲ್ಲಾ ತಿಳಿಯುತ್ತದೆ. ಒಂದು ಬ್ರೇಕ್ ನ ನಂತರ ಒಂದಾದರೆ ಪರಸ್ಪರ ಅರ್ಥ ಮಾಡಿಕೊಂಡು ಬಾಳುವ ಗುಣ ನಿಮ್ಮಲ್ಲಿ ಬೆಳೆಯುವುದು, ಮೊದಲಿನಂತೆ ಚಿಕ್ಕ-ಪುಟ್ಟ ವಿಷಯಗಳಿಗೆ ಜಗಳವೂ ಬರುವುದಿಲ್ಲ. ನಮ್ಮ ಸಂಬಂಧ ಗಟ್ಟಿಯಾಗುತ್ತದೆ ಅಂದರೆ ನಮ್ಮ ಪ್ರೀತಿಯ ವ್ಯಕ್ತಿಯಿಂದ ಸ್ವಲ್ಪ ಕಾಲ ದೂರವಿರುವುದು ಏನೂ ಕಷ್ಟವಿಲ್ಲ ಅಲ್ಲವೇ? ನನ್ನ ಅಭಿಪ್ರಾಯವನ್ನು ಇಲ್ಲಿ ಹೇಳಿರುವೆ ಅಷ್ಟೆ..

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *