ಆಗದು ಎಂದು ಕೈಕಟ್ಟಿ ಕೂರದಿರಿ..

ಮದ್ಯವರ್ಗ ಹಾಗೂ ಕೆಳವರ್ಗದವರ ಬದುಕು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಬದುಕುವುದೇ ಕಷ್ಟವೆನ್ನುವ ಸ್ಥಿತಿಯಲ್ಲಿ ಬದುಕು ದುಸ್ತರವಾಗುತ್ತಿದೆ. ನಮ್ಮ ಕನಸಿನಂತೆ ಬದುಕ ಸಾಗಿಸಲಾಗುತ್ತಿಲ್ಲ. ಹೇಗಾದರೂ ಸರಿ ಬದುಕಿದರೆ ಸಾಕು ಎನ್ನುವಂತದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿ ನಾವು ಎಷ್ಟು ಗಳಿಸಿದರೂ ಸಾಕಾಗುತ್ತಿಲ್ಲ. ಸಂಸಾರ ಸಾಗಿಸಲು ಸಾಕಾಗುವಷ್ಟು ಸಂಬಳ ನಮ್ಮ ಕೆಲಸದಿಂದ ಬರುತ್ತಿಲ್ಲ. ಅದಕ್ಕಾಗಿ ಹೆಚ್ಚು ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ. ಇದ್ದುದರಲ್ಲೇ ಹೇಗೂ ಬದುಕು ಕಟ್ಟಿಕೊಳ್ಳೊಣವೆಂದುಕೊಳ್ಳುವವರಿಗೆ ಅದೂ ಕೂಡ ಆಗುತ್ತಿಲ್ಲ. ಹಾಗಂತ ಕೈಚೆಲ್ಲಿ ಕೂರುವ ಬದಲು. ಬಿಡುವಿನ ವೇಳೆಯಲ್ಲಿ ಏನದರೂ ಒಂದು ಚಿಕ್ಕ ಕೆಲಸವನ್ನು ಸೃಷ್ಟಿಸಿಕೊಂಡು ನಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳವ ಪ್ರಯತ್ನ ಮಾಡಬೇಕು. ಅಂದಹಾಗೆ ಪ್ರತಿಯೊಬ್ಬರ ಕುಟುಂಬಗಳೂ ಹಿಂದಿನಿಂದಲೂ ಒಂದು ಕುಲಕಸುಬನ್ನು ಅವಲಂಬಿಸಿಕೊಂಡು ಬಂದಿರುತ್ತವೆ. ಆದರೆ ಇತ್ತೀಚಿವರು ಅವುಗಳಿಗೆ ಹೆಚ್ಚು ಮನ್ನಣೆ ಕೊಡುತ್ತಿಲ್ಲ. ನಮಗೆ ದೊಡ್ಡ ಉದ್ಯೋಗವೇ ಬೇಕು. ಅಪ್ಪಂದಿರು ಮಾಡಿದ ಆ ಕೆಲಸವನ್ನು ನಾನೂ ಮಾಡಬೇಕೆ? ಎಂದು ತಮ್ಮ ಕುಟುಂಬ ನಂಬಿಕೊಂಡ ಆ ಕೆಲಸವನ್ನು ಕಡೆಗಣಿಸಿ ಆಧುನಿಕವಾಗಿ ಬದುಕಲು ಇಚ್ಚೆ ಪಡುತ್ತಾರೆ.

ಹೀಗೆ ಇಚ್ಚೆಪಟ್ಟವರು ಒಂದೊಳ್ಳೆ ಕೆಲಸವನ್ನು ಗಿಟ್ಟಿಸಿಕೊಂಡು ಬದುಕು ರೂಪಿಸಿಕೊಂಡರೆ ಸರಿ. ಒಂದು ವೇಳೆ ಹಾಗಾಗದಿದ್ದಾಗ ನಮಗೆ ಸಿಕ್ಕ ಸಣ್ಣ ಪುಟ್ಟ ಕೆಲಸದಲ್ಲಿಯೇ ಮುಂದುವರಿಯಬೇಕಾಗುತ್ತೆ. ಆದರೆ ಈ ಕೆಲಸ ನಮಗೆ ಬೇಕಾದಷ್ಟು ಆದಾಯವನ್ನು ಒದಗಿಸದಿದ್ದಾಗ ಕೈÀ್ಯಕಟ್ಟಿ ಕೂರುವ ಬದಲು ತಂದೆ ಮಾಡಿದ ಅಥವಾ ಕುಲಕಸುಬನ್ನು ಒಂದು ಚಿಕ್ಕ ಉದ್ಯಮವಾಗಿ ರೂಪಿಸಿ ಸಮಯ ಸಿಕ್ಕಾಗೆಲ್ಲ ಮುಂದುವರೆಸಿಕೊಂಡು ಹೋದರೆ ತಪ್ಪೇನೂ ಇಲ್ಲ. ನಿಮಗೆ ಗೊತ್ತಿರಲೀ ಯಾವ ಕೆಲಸವೂ ಕನಿಷ್ಟವಲ್ಲ. ಅದಕ್ಕೆ ಅದರದ್ದೇ ಆದ ಗೌರವವಿರುತ್ತದೆ. ತಂದೆ ಬಗಿಗಿಯೋ, ಕಮ್ಮಾರನೋ ಅಥವಾ ಮೆಕ್ಯಾನಿಕ್ ಆಗಿದ್ದರೆ ಅದೇ ಕೆಲಸದಲ್ಲಿ ಬಿಡುವಿನ ವೇಳೆಯಲ್ಲಿ ತೊಡಗಿಸಿಕೊಳ್ಳವುದರಲ್ಲಿ ತಪ್ಪೇನಿದೇ? ಯಾವುದೇ ಕೆಲಸವಾಗಿರಲಿ ಪ್ರಾಮಾಣಿಕವಾಗಿ ಮಾಡಿದರೆ ಅದು ತನ್ನ ಗೌರವವನ್ನು ಎಲ್ಲ ಕಾಲಕ್ಕೂ ಉಳಿಸಿಕೊಂಡಿರುತ್ತದೆ.

ಎಲ್ಲರ ಶ್ರಮಕ್ಕೂ ಬೆಲೆ ಸಿಗುವುದು ಅವರು ಮಾಡುತ್ತಿರುವ ಕೆಲಸ ಪ್ರಾಮಾಣಿಕವಾಗಿದ್ದು ಅವರ ಹೊಟ್ಟೆ ತುಂಬಿಸಿದಾಗ ಮಾತ್ರ. ಮತ್ತೊಬ್ಬರಿಗೆ ಸರಿಸಮಾನವಾಗಿ ಬದುಕಬೇಕು ಎಂದುಕೊಂಡಿದ್ದರೆ ಉದ್ಯೋಗದ ಜೊತೆ ಸ್ವಯಂಉದ್ಯೋಗವನ್ನು ಮಾಡಿ ಆದಾಯವನ್ನು ಹೆಚ್ಚಿಸಿಕೊಂಡು ಅಂದುಕೊಂಡಂತೆ ಬದುಕುವುದರಲ್ಲಿ ತಪ್ಪೇನಿದೆ? ಕೆಲವರಲ್ಲಿ ತಮ್ಮ ಕುಲಕಸುಬಿನ ಬಗ್ಗೆ ಕೀಳರಿಮೆಯಿರುತ್ತದೆ. ಅದರಿಂದ ತಮ್ಮ ಗೌರವಕ್ಕೆ ದಕ್ಕೆಯುಂಟಾಗಬದುದು ಎಂಬ ಆಲೋಚನೆ ಕೆಲವರಲ್ಲಿದ್ದರೆ ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ಕೆಲಸ ಮುಖ್ಯ ಅದರಿಂದ ನಮಗೆ ಎಷ್ಟು ಒಳ್ಳೆಯದಾಗುತ್ತದೆ ಎಂದು ಯೋಚನೆ ಮಾಡಬೇಕೆ ವಿನಹ ಮತ್ತೊಬ್ಬರು ನಮ್ಮ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೋ ಎಂದು ಯೋಚಿಸಬಾರದು. ಹಾಗೆ ಯೋಚಿಸಿದರೆ ನಿಮ್ಮ ಬದುಕಿನ ಅನೇಕ ಆಸೆಗಳಿಂದ ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಂಡು ಬದುಕಬೇಕಾಗುತ್ತದೆ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *