ಸ್ತನ ಕ್ಯಾನ್ಸರ್ ಸೇರಿದಂತೆ ಹಲವು ಸಮಸ್ಯೆಗಳಿಗೆ ‘ರೆಡ್ ವೈನ್’ನಲ್ಲಿದೆ ಪರಿಹಾರ ..!

ಇಂದು ಪ್ರತಿಯೊಬ್ಬರ ಬದುಕಿನ ಶೈಲಿ ಬದಲಾಗಿದೆ. ಎಲ್ಲರ ಮನೆಯಲ್ಲೂ ಮಾಮೂಲಿಯಾಗಿ ಆಧುನಿಕತೆಯ ಗಾಳಿ ಬೀಸಿದೆ. ಈಗಿನ ಕುಟುಂಬಗಳು ಆಧುನಿಕತೆಗೆ ಒಳಗಾಗಿ ತಮ್ಮ ಜೀವನ ಶೈಲಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿವೆ. ನಾನು ಯಾವುದರ ಬಗ್ಗೆ ಹೇಳುತ್ತಿದ್ದೇನೆ ಎನ್ನುವ ಯೋಚನೆ ಶುರುವಾಗಿದೆಯಾ? ಹೌದು ಇದು ಆಶ್ಚರ್ಯವಾಗುವ ವಿಷಯವೇ. ರಮ್, ವಿಸ್ಕಿ, ವೈನ್ ಬಗ್ಗೆ ಹೇಳ್ತಿದ್ದಾರೆ ಅಂದರೆ ಹೆಚ್ಚು ಆಸಕ್ತಿ ತೋರಿಸಿ ತಿಳಿದುಕೊಳ್ಳಬೇಕು ಎಂಬುವವರೇ ಹೆಚ್ಚು. ಶತಮಾನಗಳಿಂದಲೂ ಅಳಿಯದೇ ಹೆಚ್ಚು ಹೆಚ್ಚು ಬೆಳಯುತ್ತಲೇ ಬಂದ ಒಂದು ಉದ್ಯಮವೆಂದರೆ ಅದು ವೈನ್ ಉದ್ಯಮ. ಶತಮಾನಗಳ ಹಿಂದಿನಿಂದ ಮನುಜ ಕುಲಕ್ಕೆ ಬಿಡದೇ ಅಂಟಿಕೊಂಡು ಬಂದ ನಂಟು ಇದು. ನಮ್ಮಲ್ಲಿ ನಾನಾ ಬಗೆಯಾಗಿ ಕುಡಿತಕ್ಕೆ ಅಂಟಿಕೊಂಡ ಜನರಿದ್ದಾರೆ. ಪ್ರೋಫೆಷನಲ್ ಆಗಿ ಕುಡಿಯುವ ವರ್ಗ ಒಂದೆಡೆಯಾದರೆ ಕುಡಿಯುವುದನ್ನೇ ಪ್ರೋಫೆಷನ್ ಆಗಿ ಮಾಡಿಕೊಂಡವರು ಮತ್ತೊಂದೆಡೆ. ಕುಡಿಯುವುದು ತಪ್ಪಲ್ಲ ಆದರೆ ನಾವು ಏನನ್ನು ಏತಕ್ಕಾಗಿ ಕುಡಿಯುತ್ತಿದ್ದೇವೆ ಎಂಬುದದನ್ನು ತಿಳಿದುಕೊಳ್ಳದಿರುವುದೇ ತಪ್ಪು.

ಆರೋಗ್ಯದ ದೃಷ್ಟಿಯನ್ನಿಟ್ಟುಕೊಂಡು ಕುಡಿದರೆ ಅದು ಎಂದೂ ತಪ್ಪಲ್ಲ. ಇಂದು ಎಷ್ಟೋ ಕುಟುಂಬಗಳಲ್ಲಿ ತಂದೆ ಮಕ್ಕಳು ಒಟ್ಟಿಗೆ ಕೂತು ಡ್ರಿಂಕ್ಸ್ ಮಾಡುವುದು ಮಾಮೂಲಿಯಾಗಿದೆ. ಆದರೆ ಅವರಲ್ಲಿ ಒಂದು ಉತ್ತಮ ಒಡನಾಟವಿರುತ್ತದೆ. ಅದಕ್ಕೆ ತಕ್ಕಹಾಗೆ ಅವರು ತಾವು ಏನನ್ನು ಕುಡಿಯುತ್ತಿದ್ದೇವೆ ಎಂಬ ಪರಿಜ್ಞಾನವಿರುತ್ತದೆ. ಕುಡಿತ ಆರೋಗ್ಯವನ್ನಷ್ಟೇ ಅಲ್ಲದೇ ಜೀವನವನ್ನೇ ಹಾಳು ಮಾಡುತ್ತದೆ ಎನ್ನುವವರ ಮಧ್ಯೆ ಕುಡಿತ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಿರುವ ನನ್ನ ಬಗ್ಗೆ ನಿಮಗೆ ನಾನಾ ಯೋಚನೆ ಮೂಡಿದರೆ ತಪ್ಪೇನಿಲ್ಲ. ನಾನು ಹೇಳುತ್ತಿರುವುದು ಹತ್ತೋ ಇಪ್ಪತ್ತೋ ಕೊಟ್ಟು ಕುಡಿದು ಬಂದು ದಿನವೀಡೀ ಕಿರುಚಾಡುವವರ ಬಗ್ಗೆ ಅಲ್ಲ. ಘಿಘಿಘಿ ಖUಒ ಹಾಗೂ ವೈನ್‍ನಂತಹ ಕೆಲವು ಆಲ್ಕೋಹಾಲಿಕ್ ಡ್ರಿಂಕ್‍ಗಳನ್ನು ಮಿತವಾಗಿ ಪ್ರತಿದಿನ ಬಳಸಿದಲ್ಲಿ ಆರೋಗ್ಯ ಹೆಚ್ಚಿಸಿಕೊಳ್ಳಬಹುದೆಂದಾರೆ ಪ್ರತಿದಿನ ಕುಡಿಯುವುದರಲ್ಲಿ ತಪ್ಪೇನಿಲ್ಲ. ಆದರೆ ಕುಡಿಯುವ ಮುನ್ನ ಕ್ವಾಲಿಟಿ ಹಾಗೂ ಕ್ವಾಂಟಿಟಿಯ ಕಡೆ ಗಮನವಿರಬೇಕು ಅಷ್ಟೇ.
ಕುಡಿತವನ್ನು ಇಷ್ಟಪಡುವವರು ನೀವಾಗಿದ್ದರೆ ನೀವು ರೆಡ್‍ವೈನ್‍ನಂತಹ ವೈನ್‍ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಸ್ವಾಭಾವಿಕ ದ್ರಾಕ್ಷಿಯಿಂದ ತಯಾರಾದ ಈ ರೆಡ್‍ವೈನ್‍ಗೆ ಕ್ರಿ.ಪೂ 5400 ವರ್ಷಗಳ ಇತಿಹಾಸವಿದೆ ಎಂದು ವಿಜ್ಞಾನಿಗಳೇ ದೃಢಪಡಿಸಿದ್ದಾರೆ. ಪ್ರತಿ ದಿನ ಒಂದು ಗ್ಲಾಸ್ ರೆಡ್‍ವೈನ್ ಸೇವನೆಯಿಂದ ಆಗುವ ಕೆಲವು ಲಾಭಗಳು ಏನೆಂದರೆ.

* ನಿದ್ದೆ : ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ ಚೈಂಟಿ, ಮೆರ್ಲೋಟ್‍ನಂತಹ ರೆಡ್‍ವೈನ್ ಮೆಲಟೋನಿನ್ ನಂತಹ ಅಂಶಗಳನ್ನು ಒಳಗೊಂಡಿದ್ದು ಮಲಗುವ ಮುನ್ನ ಮಿತವಾಗಿ ಇದನ್ನು ಸೇವಿಸುವುದರಿಂದ ದೇಹ ಉಷ್ಣತೆ, ಆ್ಯಂಟಿ-ಏಜಿಂಗ್ ಮತ್ತು ಕ್ಯಾನ್ಸ್‍ರ್‍ನಂತಹ ಕೆಲವು ಖಾಯಿಲೆಗಳಿದ ನಿಮ್ಮನ್ನು ದೂರವಿರಿಸುತ್ತದೆ. ನಿದ್ದೆಯಲ್ಲಿ ದೇಹದ ಚಟುವಟಿಕೆಗಳನ್ನು ನಿಯಂತ್ರಿಸಿ ನಿದ್ದೆಯಿಂದ ನಮ್ಮ ಆರೋಗ್ಯಕ್ಕೆ ಲಾಭವಾಗುವಂತೆ ಮಾಡಲು ಈ ರೆಡ್ ವೈನ್ ಸಹಕರಿಸುತ್ತದೆ.

* ದೀರ್ಘಾಯುಷ್ಯ : ರೆಡ್‍ವೈನಲ್ಲಿನ ರಿಸ್ವೆರಾಟ್ರೋಲ್ ಎಂಬ ಅಂಶ ಜೀವಿತಾವಧಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಬಲ್ಲದು ಎಂದು ಎನಿಮಲ್ ಸ್ಟಡೀಸ್‍ನಿಂದ ತಿಳಿದು ಬಂದಿದೆ.

* ಮಿದುಳಿನ ಆರೋಗ್ಯ : ರೆಡ್‍ವೈನ್ ಸೇವನೆಯಿಂದ ರೆಡ್‍ವೈನಲ್ಲಿನ ರಿಸ್ವೆರಾಟ್ರೋಲ್ ಎಂಬ ಅಂಶ ಅಲ್ಝೈಮರ್ನ್ ಹಾಗೂ ಬುದ್ದಿಮಾಂಧ್ಯತ್ವವನ್ನು ಹೊಗಲಾಡಿಸುತ್ತದೆ. ಮತ್ತು ಮೆದುಳು ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುವಂತೆ ಪ್ರಚೋದಿಸುತ್ತದೆ. ಬ್ರೈನ್ ಟ್ಯೋಮರ್‍ನಂತಹ ಖಾಯಿಲೆಗಳ ಸಾಧ್ಯತೆಗಳನ್ನು ಕಡಿಮೆಯಾಗಿಸುತ್ತದೆ.

* ಸ್ತನ ಕ್ಯಾನ್ಸರ್ : ಮಿತವಾಸ ರೆಡ್‍ವೈನ್ ಸೇವನೆಯಿಂದ ಸ್ತನ ಕ್ಯಾನ್ಸರ್ನ ಸಾಧ್ಯತೆಗಳನ್ನು ಕಡಿಮೆಯಾಗಿಸುತ್ತದೆ. ಪ್ರತಿದಿನ ಇತರೇ ಹೆಚ್ಚು ಆಲ್ಕೋಹಾಲಿಕ್ ಅಂಶವನ್ನೊಳಗೊಂಡ ಡ್ರಿಂಕ್‍ಗಳಿಗೆ ಅಡಿಕ್ಟ್ ಆದ ಮಹಿಳೆಯರಿಗೆ ಸ್ತನ ಕ್ಯಾನ್ಸ್‍ರ್ ಬರುವ ಸಾಧ್ಯತೆಗಳು ಹೆಚ್ಚು.

* ಶ್ವಾಸಕೋಶ ಕ್ಯಾನ್ಸರ್ : ಸ್ಪೇನ್‍ನ ಸಾಟಿಯಾಗೋ-ಡಿ-ಕಾಂಪೋಸೆಲಾ ಎಂಬಿ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ ಪ್ರತಿ ದಿನ ಒಂದು ಗ್ಲಾಸ್ ರೆಡ್ ವೈನ್ ಸೇವನೆಯಿಂದ ಶೇ.13 ರಷ್ಟು ಶ್ವಾಸಕೋಶ ಕ್ಯಾನ್ಸ್‍ರ್‍ನ್ನು ನಿಯಂತ್ರಿಸಬಹುದು. ಅಲ್ಲದೇ ಆಸ್ತಮಾದಂತಹ ಖಾಯಿಲೆಯುಳ್ಳವರು ರೆಡ್‍ವೈನ್ ಸೇವಿಸುವುದರಿಂದ ಉಸಿರಾಟದ ಅನೇಕ ತೊಂದರೆಗಳಿಂದ ದೂರವಿರಬಹುದು.

* ಕೊಲೆಸ್ಟ್ರಾಲ್ : ನಿತ್ಯ ರೆಡ್ ವೈನ್ ಸೇವನೆ ದೇಹದ ಕೊಲೆಸ್ಟ್ರಾಲ್‍ನ್ನು ನಿಯಂತ್ರಿಸುವುದಲ್ಲದೆ. ಕೊಲೆಸ್ಟ್ರಲ್‍ನ್ನು ಕಡಿಮೆಗೊಳಸಿ ಚರ್ಮದ ಅಂದವನ್ನು ಹೆಚ್ಚಿಸುತ್ತದೆ.

* ಹೃದಯದ ಆರೋಗ್ಯ : ಇತ್ತೀಚಿನ ಒಂದು ವರದಿಯಂತೆ ಹುಟ್ಟಿದ ಮಗುವಿನಿಂದ ವೃದ್ದರ ವರೆಗೂ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆಗಳು ಸಾಮಾನ್ಯ ಎಂದು ತಿಳಿದುಬಂದಿದೆ. ದಿನನಿತ್ಯ ಒಂದು ಗ್ಲಾಸ್ ರೆಡ್‍ವೈನ್ ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಉಪಯುಕ್ತವಾಗಿದೆ. ಹಾಗೂ ಹಾರ್ಟ್ ಅಟ್ಯಾಕ್ ಸಾದ್ಯತೆಗಳನ್ನು ಹೋಗಲಾಡಿಸಿ ಕಾರ್ಡಿಯೋವ್ಯಾಸ್ಕುಲರ್ ನಂತಹ ಖಾಯಿಲೆಗಳಿಂದ ದೂರವಿರಬವುದು.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *