ಕೆಲಸ ಬದಲಾಯಿಸಿದರೆ ನೀವು ಬದಲಾಗಬೇಕು…!

ಕಷ್ಟಪಟ್ಟು ಹಲವಾರು ವರ್ಷಗಳ ನಂತರ ನೀವು ಗಿಟ್ಟಿಸಿಕೊಂಡ ಕೆಲಸದಲ್ಲಿ ನೀವು ಮುಂದುವರೆಯಬೇಕಾದರೆ ನಿಮ್ಮ ನಡವಳಿಕೆ ಹಾಗೂ ನಿಮ್ಮ ಕಾರ್ಯವೈಖರಿ ಪ್ರಮುಖವಾಗಿರುತ್ತದೆ. ಕೆಲಸ ಪಡೆದುಕೊಳ್ಳುವುದಕ್ಕಿಂತ ಅದನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸ. ಅದಕ್ಕಾಗಿ ನೀವು ಕೆಲಸ ಮಾಡುತ್ತಿರುವ ಕಚೇರಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ. ನಿಮಗೆ ಸಿಕ್ಕ ಹೊಸ ಕೆಲಸ ಪ್ರಮೋಷನಲ್ ಆಪರ್ಚುನಿಟಿ ಆಗಿರಬಹುದು, ಅಥವಾ ನೀವು ಹಿಂದೆ ಇದ್ದ ಕೆಲಸಕ್ಕಿಂತ ಉನ್ನತಮಟ್ಟದ್ದಾಗಿರಬಹುದು. ಅಥವಾ ನಿಮ್ಮ ಹಿಂದಿನ ಕೆಲಸಕ್ಕೂ ಈ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲದಿರಬಹುದು. ಹೊಸ ಕೆಲಸ ಹೇಗೇ ಇರಲಿ, ಒಂದು ಮಾತನ್ನು ಚೆನ್ನಾಗಿ ನೆನಪಿನಲ್ಲಿಡಿ – ನೀವು ಹಿಂದಿನ ಕೆಲಸದಲ್ಲಿ ಬಳಸುತ್ತಿದ್ದ ತಂತ್ರ, ರೀತಿ-ನೀತಿ-ವಿಧಾನಗಳು ಈ ಹೊಸ ಕೆಲಸಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವುದಿಲ್ಲ. ಹೊಸ ಕೆಲಸ ಬೇಕಾದಷ್ಟು ರೀತಿಯಿಂದ ಹಳೆಯ ಕೆಲಸಕ್ಕೆ ಹೋಲಿಸಿದಲ್ಲಿ ಭಿನ್ನವಾಗಿರುವುದು, ಸಾಕಷ್ಟು ತೊಂದರೆ ಕೊಡಬಹುದು, ಆದರೆ ನಿಮ್ಮ ಬದಲಾದ ಪರಿಸರ ನಿಮ್ಮಲ್ಲಿಯೂ ಬದಲಾವಣೆಗಳನ್ನು ಬೇಡುವುದು ಸಹಜ. ಹಿಂದಿನ ಕೆಲಸದಲ್ಲಿ ನೀವು ಈಗಾಗಲೇ ಹಲವಾರು ತಿಂಗಳು/ವರ್ಷಗಳನ್ನು ಕಳೆದು ಆಫೀಸಿನ ಮೂಲೆ-ಮೂಲೆಗಳಿಗೂ ನಿಮ್ಮನ್ನು ಪರಿಚಯ ಮಾಡಿಕೊಂಡಿದ್ದಿರಬಹುದು, ಅದಕ್ಕೆ ತಕ್ಕಹಾಗೆ ಈ ಹೊಸ ಕೆಲಸದಲ್ಲಿ ಎಲ್ಲವೂ ಹೊಸತೇ. ಹಾಗಿದ್ದ ಮೇಲೆ ಹೊಸ ಕೆಲಸದ ಪರಿಧಿಯನ್ನು ಹತ್ತಿರದಿಂದ ವೀಕ್ಷಿಸಿ ಅದಕ್ಕೆ ತಕ್ಕನಾದ ಬದಲಾವಣೆಗಳನ್ನು ಮಾಡಿಕೊಳ್ಳುವುದು ನಿಮಗೆ ಸಹಜವಾಗಿ ಸಿದ್ಧಿಸಿದ ಕಲೆಯಾಗಿರಲಿ. ಸುಮ್ಮನೆ ಉದಾಹರಣೆಗೆ ಈ ಕೆಳಗಿನ ಸಂದರ್ಭಗಳನ್ನು ನೋಡಿ:

* ನಿಮ್ಮ ಹಳೆಯ ಆಫೀಸಿನಲ್ಲಿ ಎಲ್ಲರೂ ಮೀಟಿಂಗ್‍ಗಳಲ್ಲಿ ನೋಟ್‍ಬುಕ್‍ನಲ್ಲಿ ಧೀರ್ಘವಾಗಿ ಬರೆದುಕೊಂಡಿದ್ದು, ಹೊಸ ಆಫೀಸು/ಕೆಲಸ ಹೆಚ್ಚು-ಹೆಚ್ಚು ಎಲೆಕ್ಟ್ರಾನಿಕ್‍ಮಯವಾಗಿ ಕಂಡುಬರುವುದು

* ನಿಮ್ಮ ಹಳೆಯ ಅಫೀಸಿನಲ್ಲಿ ಮೀಟಿಂಗುಗಳು ಸರಿಯಾದ ಸಮಯಕ್ಕೆ ಆರಂಭವಾಗಿ ಸರಿಯಾದ ಸಮಯಕ್ಕೆ ಅಂತ್ಯವಾಗುತ್ತಿದ್ದು, ಈ ಹೊಸ ಅಫೀಸಿನಲ್ಲಿ ಚರ್ಚೆಗೆ ಗಮನ ಕೊಡುತ್ತಾರೆಯೇ ಹೊರತು ಸಮಯಕ್ಕಲ್ಲ ಎನಿಸುವುದು.

* ಹೊಸ ಆಫೀಸಿನಲ್ಲಿ ನಿಮ್ಮ ಮೇಲ್ದರ್ಜೆಯಲ್ಲಿ ಕೆಲಸ ಮಾಡುವವರು ಅಥವಾ ನಿಮ್ಮ ಬಾಸ್ ಮುಂತಾದವರೆಲ್ಲ ನಿಮ್ಮನ್ನು ಹುಡುಕಿಕೊಂಡು ಯಾವಾಗ ಬೇಕಂದರೆ ಆಗ ಬಂದು ಮಾಹಿತಿಯನ್ನು ಪಡೆಯಬಹುದು. ಅತಂಹ ಸಂದರ್ಭಗಲ್ಲಿ ನಿಮ್ಮ ನಡವಳಿಕೆಗೆÉ ಕಚೇರಿಯಲ್ಲಿನ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರಬಲ್ಲದು. ನಿಮ್ಮ ಕೆಲಸದ ಬಗ್ಗೆ ನೀವು ಪರಿಪೂರ್ಣವಾಗಿ ತಿಳಿದುಕೊಂಡಿರುವುದು ಒಳ್ಳೆಯದು.
ಹೀಗೆ ಉದಾಹರಣೆಗೆಂದು ಕೊಟ್ಟ ಬದಲಾವಣೆಗಳೇ ನಿಮ್ಮನ್ನು ಎಷ್ಟು ಪೇಚಿಗೆ ಸಿಕ್ಕಿ ಹಾಕಿಸಬಹುದು ಎಂದು ಒಮ್ಮೆ ಯೋಚಿಸಿ. ನಿಮ್ಮ ಹಳೆಯ ಕಂಪನಿಯ ಕಾರ್ಯವಿಧಾನಗಳು ಇಲ್ಲಿ ಔಟ್‍ಡೇಟೆಡ್ ಆಗದಿದ್ದರೂ ನೀವು ಅವೇ ವಿಧಾನಗಳನ್ನು ಬಳಸಿಕೊಂಡು ಮುಂದುವರೆದಿದ್ದೇ ಆದಲ್ಲಿ ನೀವು ನಿಮ್ಮ ಸಹೋದ್ಯೋಗಿಗಳಿಗೆ ಒಂದೇ ಸೈಂಟಿಸ್ಟ್ ಆಗಿಯೋ ಇಲ್ಲಾ ಮಹಾಮೂರ್ಖನಾಗಿಯೋ ಕಂಡುಬರುವುದರಲ್ಲಿ ಯಾವ ಸಂಶಯವೂ ಇಲ್ಲ. ನೀವೊಬ್ಬ ಎಕ್ಸಿಕ್ಯೂಟಿವ್ ಆಗಿ ಸೇರಿಕೊಳ್ಳದೇ ಕೆಳದರ್ಜೆಯ ನೌಕರನಾಗಿ ಸೇರಿಕೊಂಡಲ್ಲಿ ನಿಮ್ಮಿಂದ ಒಮ್ಮಿಂದೊಮ್ಮೆಲೆ ನಿಮ್ಮ ಕಂಪನಿ ಉದ್ದಾರವಾಗುವ ಸಾಧ್ಯತೆಗಳು ಕಡಿಮೆ. ನಿಮ್ಮ ಇತಿ-ಮಿತಿಯನ್ನು ಚೆನ್ನಾಗಿ ಅರಿತುಕೊಂಡು ಸಾಧ್ಯವಾದಷ್ಟು ಒಳ್ಳೆಯದನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮನ್ನು ನೀವು ಮುಂಬರುವ ಬದಲಾವಣೆಗಳಿಗೆ ತೆರೆದುಕೊಂಡರೆ ಆಯಿತು, ಅಷ್ಟೇ! ಬದಲಾವಣೆಗಳನ್ನು ಎದುರಿಸುವಲ್ಲಿ ನಿಮಗೆ ಅನಿವಾರ್ಯವಾಗಬಹುದು. ಹೊಸ ಆಫೀಸಿನಲ್ಲಿನ ರೂಲ್ಸ್ ಅಂಡ್ ರೆಗ್ಯುಲೇಷನ್‍ಗಳು ನಿಮಗೆ ಕಿರಿಕಿ ಅನ್ನಿಸಬಹುದು. ಅವುಗಳಿಗೆ ನೀವು ಹೊಂದಿ ಕೊಳ್ಳಲೇಬೇಕು. ಅದನ್ನು ಬಿಟ್ಟು ನಿಮ್ಮಿಷ್ಟದಂತೆ, ಬೇರೆಯ ವರಿಗೆ ಇಷ್ಟವಾಗದಂತೆ ನಡೆದುಕೊಂಡರೆ ನಿಮ್ಮ ಕೆಲಸಕ್ಕೆ ನೀವೇ ಕುತ್ತು ತಂದು
ಕೊಂಡಂತಾಗುತ್ತದೆ ನೆನಪಿರಲಿ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *