ಸುಂದರವಾಗಿ ಕಾಣಿಸಿಕೊಳ್ಳಬೇಕೆಂದುಕೊಳ್ಳುವ ಪುರುಷರಿಗೆ ಇಲ್ಲಿವೆ ಹ್ಯಾಂಡ್ಸಂ ಟಿಪ್ಸ್

ಸಾಮಾನ್ಯವಾಗಿ ಹುಡುಗರು ತಮ್ಮ ದೇಹದ ಸೌಂದರ್ಯದ ಕಡೆ ಗಮನ ನೀಡೋದು ಕಡಿಮೆ. ಆರೋಗ್ಯದ ಕಾಳಜಿ ಇರುವವರು, ತಮ್ಮ ದೇಹವನ್ನು ತಾವು ಪ್ರೀತಿಸುವವರು ದೇಹದ ಬಗ್ಗೆ ಕಾಳಜಿ ವಹಿಸಿ ಶುಚಿಯಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಇದೇ ಅವರನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ದೇಹದ ಹೊರ ಭಾಗಗಳ ಸ್ವಚ್ಚತೆಗಿಂತ ದೇಹದ ಒಳಭಾಗಗಳನ್ನೂ ಶುಚಿಯಾಗಿಟ್ಟುಕೊಂಡರೆ ದೇಹದ ಔಟ್‍ಲುಕ್ ತಾನಾಗಿಯೇ ಬದಲಾಗುತ್ತೆ. ಆರೋಗ್ಯವಂತ ದೇಹ ಆಕರ್ಷಕವಾಗಿ ಕಾಣಿಸುವುದರಲ್ಲಿ ಅನುಮಾನವಿಲ್ಲ. ಇನ್ನು ಕೆಲವರು ತಮ್ಮ ಸೊಮಾರಿತನದಿಂದ ತಮ್ಮ ದೇಹ ಸೌಂದರ್ಯದ ಬಗ್ಗೆ ಅಷ್ಟಾಗಿ ಕಾಳಜಿವಹಿಸುವುದಿಲ್ಲ. ಒಂದು ದಿನ ಸ್ನಾನ ಇನ್ನೊಂದು ದಿನ ಪರ್‍ಫ್ಯೂಮ್ ಹಾಕಿ ಹೇಗೋ ಮ್ಯಾನೇಜ್ ಮಾಡಿ ಬಿಡುತ್ತಾರೆ. ಹೀಗೆ ಸೋಮಾರಿತನದಿಂದ ನಿರ್ಲಕ್ಷಿಸಿದ ದೇಹ ಒಂದು ದಿನ ಗ್ಯಾರೇಜ್ ಸೇರುವುದು ಗ್ಯಾರಂಟಿ. ಸದೃಢವಾದ ದೇಹದಲ್ಲಿ ದೃಢ ಮನಸ್ಸು ನೆಲೆಗೊಳ್ಳುತ್ತದೆ ಎಂಬುದು ಎಷ್ಟು ಸತ್ಯವೂ ಹಾಗೇ ದೃಢ ಮನಸ್ಸಿರುವವರ ದೇಹ ಸದೃಢವಾಗಿರುತ್ತದೆ ಎಂಬುದೂ ಅಷ್ಟೇ ಸತ್ಯ. ಸೋಮಾರಿತನ ದಿನ ಪೂರ್ತಿಯ ನಿಮ್ಮ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಬೇರೊಬ್ಬರಿಗೆ ನಾವು ಹ್ಯಾಡ್ಸಮ್ ಆಗಿ ಕಾಣಬೇಕು ಎನ್ನುವ ಬಯಕೆ ನಿಮ್ಮಲ್ಲಿದ್ದರೆ ದೇಹದ ಬಗೆಗಿನ ಸೋಮಾರಿತನವನ್ನು ಮೊದಲು ಹೋಗಲಾಡಿಸಿಕೊಳ್ಳಿ.

ಹುಡುಗಿಯರಿಗೆ ಬ್ಯೂಟಿ ಟಿಪ್ಸ್ ಕೊಡೊದನ್ನ ಕೇಳಿರುತ್ತೀರಾ.. ಹಾಗೇ ಹುಡುಗರೂ ಹ್ಯಾಂಡ್ಸಮ್ ಆಗಿ ಕಾಣಿಸೋಕೆ ಇಲ್ಲಿ ಟಿಪ್ಸ್‍ಗಳಿವೆ.. ಹೆಚ್ಚಿನ ಪುರುಷರಿಗೆ ಸೌಂದರ್ಯ ಸಲಹೆಗಳನ್ನು ಪಾಲಿಸಲು ಮುಜುಗರ, ಆದರೆ ತಾವು ಸುಂದರವಾಗಿ ಕಾಣಬೇಕು, ನಮ್ಮನ್ನು ನೋಡಿ ಮಹಿಳೆಯರು ‘ಯು ಆರ್ ಲುಕ್ಕಿಂಗ್ ಸೋ ಹ್ಯಾಂಡ್ಸಮ್’ಅಂತ ಹೇಳಬೇಕು ಎಂಬ ಆಸೆ ಇರುತ್ತದೆ. ನೈಸರ್ಗಿಕವಾಗಿ ಎಷ್ಟೇ ಸುಂದರವಾಗಿದ್ದರೂ ನೋಡುಗರಿಗೆ ಆಕರ್ಷಕವಾಗಿ ಕಾಣಬೇಕೆಂದರೆ ತ್ವಚೆ ಆರೈಕೆ ಬಗ್ಗೆ ಸ್ವಲ್ಪ ಗಮನ ನೀಡಬೇಕು. ಈ ಕೆಳಗೆ ಕೆಲ ಸಲಹೆಗಳಿವೆ, ಅವುಗಳು ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಪುರುಷರು ಆಕರ್ಷಕವಾಗಿ ಕಾಣಬೇಕೆಂದರೆ ನೀಟಾಗಿ ಶೇವ್ ಮಾಡಬೇಕು, ಗಡ್ಡ ಬಿಡುವುದಕ್ಕೆ ಇಷ್ಟ ಪಡುವವರು ಅದನ್ನು ಆಗಾಗ ಟ್ರಿಮ್ ಮಾಡುತ್ತಿರಬೇಕು. ಶೇವ್ ಮಾಡುವರು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಎದ್ದ ಕೂಡಲೇ ಶೇವ್ ಮಾಡಬಾರದು. ಶೇವ್ ಜೆಲï ಬದಲು ಫೇಶಿಯಲ್ ಕ್ಲೀನ್ಸರ್ಸ್ ಬಳಸುವುದು ಒಳ್ಳೆಯದು.

*ಪುರುಷರು ಹೆಚ್ಚಾಗಿ ಮೈ ತಿಕ್ಕುವ ಸೋಪನ್ನೇ ಮುಖಕ್ಕೆ ಬಳಸುತ್ತಾರೆ. ತುಂಬಾ ಎಣ್ಣೆ ಮುಖವಿರುವವರು ಸೋಪು ಬಳಸದೆ ಫೇಸ್ ವಾಶ್ ಬಳಸುವುದು ಒಳ್ಳೆಯದು. ಮುಖವನ್ನು ದಿನಾ ಕ್ಲೀನ್ ಮಾಡಿ ಮಾಯಿಶ್ಚರೈಸರ್ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.
*ಮುಖದಲ್ಲಿರುವ ಬ್ಲ್ಯಾಕ್ ಹೆಡ್ಸ್ , ವೈಟ್ ಹೆಡ್ಸ್ ಮತ್ತು ನಿರ್ಜೀವ ತ್ವಚೆ ಹೋಗಲಾಡಿಸಲು ವಾರದಲ್ಲಿ ಎರಡು ಬಾರಿ ಫೇಸ್ ಸ್ಕ್ರಬï ಮಾಡಬೇಕು.
*ನೆರೆ ಕೂದಲನ್ನು ಮರೆ ಮಾಚಲು ಮೆನ್ ಹೇರ್ ಕಲರ್ ಕ್ರೀಮ್ ಗಳನ್ನು ಬಳಸಬಹುದು.
*ಮದ್ಯಪಾನ, ಧೂಮಪಾನ ಆರೋಗ್ಯಕ್ಕೆ ಹಾನಿಕಾರ. ಅದರಲ್ಲೂ ಮಿತಿ ಮೀರಿ ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದರೆ ಮುಖ ಸುಕ್ಕಾಗಿ ಬೇಗನೆ ವಯಸ್ಸಾದಂತೆ ಕಾಣುವುದು.
*ಮುಖಕ್ಕೆ ಲೋಳೆರಸ ಹಚ್ಚಿದರೆ ಮುಖದಲ್ಲಿರುವ ಮೊಡವೆ, ಕಲೆಗಳಿದ್ದರೆ ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುವುದು.
*ಕಣ್ಣಿನ ಸುತ್ತ ಕಪ್ಪು ಕಲೆಗಳು ಉಂಟಾಗುವುದನ್ನು ತಡೆಯಲು ಮಿತಿ ಮೀರಿ ಟೀ ಕುಡಿಯಬಾರದು.
*ಹಲ್ಲುಗಳನ್ನು ಬ್ರೆಷ್ ನಿಂದ ಬಲವಾಗಿ ತಿಕ್ಕಬೇಡಿ, ಪೇಸ್ಟ್ ನಿಂದ ಹಲ್ಲು ಉಜ್ಜಿದ ನಂತರ ಸ್ವಲ್ಪ ಉಪ್ಪು ಹಾಕಿ ಹಲ್ಲುಜ್ಜಿದರೆ ಹಲ್ಲುಗಳು ಸ್ವಚ್ಛವಾಗಿ ಕಾಣಿಸುತ್ತದೆ.
*ಚೆನ್ನಾಗಿ ಬೆವರು ಬರುವಂತಹ ವ್ಯಾಯಾಮ ಮಾಡಬೇಕು. ಮೈಯಿಂದ ಬೆವರು ಬಂದರೆ ಬೆವರಿನ ರೂಪದಲ್ಲಿ ಕಶ್ಮಲಗಳು ಹೊರಗೆ ಹೋಗುವುದರಿಂದ ತ್ವಚೆ ಕಾಂತಿಯನ್ನು ಪಡೆಯುತ್ತದೆ.
*ಕೊನೆಯದಾಗಿ, ಪ್ರತಿ ದಿನ 5-6 ಲೀಟರ್ ನೀರು ಕುಡಿಯಲು ಪ್ರಯತ್ನಿಸಿ. ಇದು ನಿಮ್ಮ ದೇಹದ ಆರೊಗ್ಯವನ್ನು ಕಾಪಾಡುವುದರೊಂದಿಗೆ ದೇಹದ ಸೌದರ್ಯªನ್ನು ಹೆಚ್ಚಿಸುತ್ತದೆ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *