ಆರೋಗ್ಯದ ಮೇಲೆ ನಿಂಬೆ ಹುಳಿ ಮಾಡುತ್ತೆ ಮ್ಯಾಜಿಕ್..!

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಮಾಮೂಲಿಯಾಗಿ ಕಾಣಿಸಿಕೊಳ್ಳುವ ಕೆಲವು ಸಮಸ್ಯೆಗಳೆಂದರೆ ಗ್ಯಾಸ್ಟ್ರಿಕ್, ಬೊಜ್ಜು ಹಾಗೂ ಹೆಚ್ಚಾದ ದೇಹದ ತೂಕದ ಸಮಸ್ಯೆಗಳು. ಇವುಗಳಿಂದ ಇನ್ನೂ ಅನೇಕ ಕಾಯಿಲೆಗಳು ದೇಹದಲ್ಲಿ ನೆಲೆಸಲು ಅವಕಾಶಗಳು ಹೆಚ್ಚಾಗಿರುತ್ತವೆ. ಪ್ರತಿದಿನ ನಾವು ಸೇವಿಸುವ ಆಹಾರದ ಬಗ್ಗೆ ನಮಗೆ ಅರಿವಿಲ್ಲದೇ ಸಿಕ್ಕಿದ್ದನ್ನೆಲ್ಲ ತಿನ್ನುವ ಬಾಯಿಚಪಲ. ಇದರಿಂದ ದೇಹದಲ್ಲುಂಟಾಗುವ ಅನೇಕ ಬದಲಾವಣೆಗಳು ಅನೇಕ ಕಾಯಿಲೆಗಳಿಗೆ ಎಡೆಮಾಡಿಕೊಡುತ್ತವೆ. ಚಿಕ್ಕ ಪುಟ್ಟ ಸಮಸ್ಯೆಗಳಿಗೆಲ್ಲ ಆಸ್ಪತ್ರೆ ಮೆಟ್ಟಿಲೇರಲಾಗುವುದಿಲ್ಲ. ಮನೆಯಲ್ಲಿಯೇ ಅವುಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನಿಂಬೆಹಣ್ಣು ಅನೇಕ ಕಾಯಿಲೆಗಳಿಗೆ ಒಂದು ಉತ್ತಮ ಮನೆಮದ್ದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ನಿಂಬೆಹಣ್ಣಿನ ಮಹತ್ವ ಹಾಗೂ ಅದರ ಉಪಯೋಗಗಳ ಬಗ್ಗೆ ತಿಳಿದುಕೊಂಡಿರುವುದು ಒಳಿತು. ಏಕೆಂದರೆ ದೇಹದಲ್ಲಿನ ಅನೇಕ ಸಮಸ್ಯೆಗಳಿಗೆ ಮನೆಯಲ್ಲಿಯೇ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಬಹುದು. ಲಿಂಬೆ ರಸವು ಶೇಕಡ 5 ರಷ್ಟು ಸಿಟ್ರಿಕ್ ಎಂಬ ಹುಳಿಯನ್ನು ತನ್ನಲ್ಲಿ ಒಳಗೊಂಡಿದ್ದು ಇದು ಲಿಂಬೆಗೆ ಅದ್ಭುತ ರುಚಿಯನ್ನು ನೀಡಿದೆ. ಅದೂ ಅಲ್ಲದೆ ಲಿಂಬೆ ತನ್ನಲ್ಲಿ ವಿಟಮಿನ್ ‘ಸಿ’ ಅಂಶವನ್ನು ಹೇರಳವಾಗಿ ಪಡೆದುಕೊಂಡಿದೆ. ಲಿಂಬೆ ರಸವನ್ನು ಜ್ಯೂಸ್ ಮಾಡಿ ಪ್ರತಿದಿನ ಮುಂಜಾನೆ ಕುಡಿಯುವುದರಿಂದ ದೇಹದಲ್ಲಿನ ಅನೇಕ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.


ಜೀರ್ಣಕ್ರಿಯೆ ಸಮಸ್ಯೆಗಳಿಗೆ :
ಲಿಂಬೆ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಹಲವಾರು ವಿಧದ ಕಾಯಿಲೆಗಳು ತಟ್ಟನೆ ಮಾಯವಾಗುತ್ತದೆ. ಇದು ವಾಕರಿಕೆ, ಎದೆಯುರಿಗೆ ಉತ್ತಮ ಔಷಧವಾಗಿದೆ. ಲಿಂಬೆಯ ಜೀರ್ಣಕ್ರಿಯೆ ಗುಣಗಳಿಂದಾಗಿ, ಅಜೀರ್ಣದ ಲಕ್ಷಣಗಳಾದಂತಹ ಎದೆಯುರಿ, ಹೊಟ್ಟೆ ಉಬ್ಬರ ಮತ್ತು ತೇಗು ಮಾಯವಾಗುತ್ತದೆ. ಲಿಂಬೆ ರಸವನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ, ಕರುಳು ಬೇಡವಾದ ಉತ್ಪನ್ನಗಳನ್ನು ಸುಲಭವಾಗಿ ಹೊರಹಾಕುತ್ತದೆ.

ಚರ್ಮದ ಕಾಂತಿಗೆ :
ಚರ್ಮದ ಹಲವಾರು ಬಗೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಲಿಂಬೆ ಬಹುಪ್ರಯೋಜನಕಾರಿ. ಇದು ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ತನ್ನ ಉತ್ತಮ ಪ್ರಭಾವವನ್ನು ಬೀರುತ್ತದೆ. ಲಿಂಬೆ ರಸದಿಂದ ಮುಖವನ್ನು ಪ್ರತಿನಿತ್ಯ ತೊಳೆಯುವುದರಿಂದ ಮುಖದ ಕಾಂತಿ ವೃದ್ಧಿಸುತ್ತದೆ.

ಹಲ್ಲಿನ ರಕ್ಷಣೆಗೆ:
ಹಲ್ಲಿನ ರಕ್ಷಣೆಯಲ್ಲೂ ಲಿಂಬೆಯ ರಸ ಪರಿಣಾಮಕಾರಿಯಾದುದು. ಹಲ್ಲುನೋವಿನ ಭಾಗದಲ್ಲಿ ಇದರ ರಸವನ್ನು ಲೇಪಿಸುವುದರಿಂದ, ಹಲ್ಲುನೋವಿನ ಬಾಧೆಯಿಂದ ಕೂಡಲೇ ನೀವು ಉಪಶಮನವನ್ನು ಪಡೆಯುವಿರಿ. ದವಡೆಯಿಂದ ರಕ್ತಒಸರುವ ಸಮಸ್ಯೆಗೂ ಇದು ಉತ್ತಮವಾದುದು. ಮತ್ತು ಬಾಯಿಯ ವಾಸನೆಯನ್ನು ಹೋಗಲಾಡಿಸಿ ಉಸಿರನ್ನು ತಾಜಾತನದಿಂದಿರಿಸುತ್ತದೆ.

ತಲೆಹೊಟ್ಟು & ಗಂಟಲು ಸೋಂಕಿಗೆ
ಗಂಟಲಿನ ಹಲವಾರು ತೊಂದರೆಗಳಿಗೆ ಲಿಂಬೆ ರಸವು ರಾಮಬಾಣ ಒಡೆದ ಗಂಟಲು ಹಾಗೂ ಬ್ಯಾಕ್ಟೀರಿಯಾ ಅಂಶಗಳನ್ನು ಹೊಂದಿರುವ ಗಲಗ್ರಂಥಿಯ ಉರಿಯೂತಕ್ಕೂ ಇದು ಉತ್ತಮ ಔಷಧವಾಗಿದೆ. ತಲೆಹೊಟ್ಟು ನಿವಾರಿಸಿ ತಂಪಿನ ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಾಪಾಡುತ್ತದೆ.

ತೂಕ ನಿಯಂತ್ರಣಕ್ಕೆ :
ದೇಹದ ತೂಕ ಹೆಚ್ಚಳವಾಗುವುದರಿಂದ ಕಾಲುನೊವು, ಆಲಸ್ಯ ಹಾಗೂ ಇತರೆ ತೊಂದರೆಗಳು ಸಾಮಾನ್ಯವಾಗಿಬಿಡುತ್ತವೆ. ಲಿಂಬೆ ರಸವನ್ನು ನಿಯಮಿತವಾಗಿ ಕುಡಿ ಯುವುದರಿಂದ ದೇಹದಲ್ಲಿರುವ ಅನಗತ್ಯ ಬೊಜ್ಜನ್ನು ಕರಗಿಸಲು ನೆರವನ್ನು ನೀಡುತ್ತದೆ. ದೆಹದ ತೂಕವನ್ನೂ ಕಡಿಮೆ ಮಾಡಿತ್ತದೆ.

ರಕ್ತದೊತ್ತಡದ ನಿಯಂತ್ರಣಕ್ಕೆ:
ಹೃದಯ ತೊಂದರೆಗಳನ್ನು ಹೊಂದಿರುವವರಿಗೆ ಲಿಂಬೆ ರಸವು ಅತ್ಯುತ್ತಮ ಔಷಧವಾಗಿದೆ. ಇದರಲ್ಲಿರುವ ಹೆಚ್ಚಿನ ಪೊಟ್ಯಾಶಿಯಂ ಅಂಶವು ಈ ತೊಂದರೆಯನ್ನು ನೀಗಿಸುವಲ್ಲಿ ಆಶ್ವಾಸಕಾರಿಯಾದುದು. ಅಸ್ತಮದ ತೊಂದರೆ ನಿವಾರಿಸುವಲ್ಲಿ ಲಿಂಬೆ ರಸ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಹೀಗೆ ಬಹುಪಯೋಗಿ ನಿಂಬೆಹಣ್ಣನ್ನು ದಿನನಿತ್ಯದ ಆಹಾರದ ಒಂದು ಭಾಗವಾಗಿ ಮಾಡಿಕೊಳ್ಳುವುದರಿಂದ ಊಟಕ್ಕೆ ರುಚಿ ನೀಡುವುದಲ್ಲದೆ, ದೇಹದಲ್ಲಿನ ಅನೇಕ ತೊಂದರೆಗಳಿಗೆ ಪರಿಹಾರವನ್ನೂ ನೀಡುತ್ತದೆ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *