ಪ್ರೀತಿ ಪಾತ್ರರಿಗೆ ನಿಮ್ಮ ಗಿಫ್ಟ್ ಹೇಗಿರಬೇಕು. ..?

ಪ್ರೇಮಿಗಳ ಹೃದಯದ ಪಿಸುಮಾತು, ಹೃದಯದ ಬಡಿತ ಹೆಚ್ಚಿಸುವ ವ್ಯಾಲೆಂಟೈನ್ಸ್ ಡೇ ಹತ್ತಿರದಲ್ಲಿದೆ. ಪ್ರಪ್ರಥಮ ಬಾರಿಗೆ ಪ್ರೀತಿಯನ್ನು ಹೇಳಬೇಕೆನ್ನುವರ ಎದೆಯ ಬಡಿತವೂ ನಗಾರಿಯಂತೆ ಹೊಡೆದು ಕೊಳ್ಳುತ್ತಿರಬಹುದು. ಈಗಾಗಲೇ ಪ್ರೀತಿಗೆ ಗ್ರೀನ್ ಸಿಗ್ನಲï ಸಿಕ್ಕವರು ಗಿಫ್ಟ್ ಕುರಿತು ಚಿಂತಿಸಬೇಕಾದ ಸಮಯವಿದು. ಪ್ರೀತಿ ಪಾತ್ರರಿಗೆ ಯಾವ ಗಿಫ್ಟ್ ಕೊಡುವುದೆಂದು ಗೊಂದಲದಲ್ಲಿ ಪ್ರೇಮಿಗಳಿರಬಹುದು. ನಿಮ್ಮ ಮುದ್ದಿನ ನಲ್ಲೆಗೆ/ನಲ್ಲನಿಗೆ ವಜ್ರದ ಆಭರಣ ಕೊಟ್ಟರು ಕೂಡ ಕಮ್ಮಿಯೆ ಅಂತ ಅನಿಸುತ್ತದೆ. ಹಾಗಂತ ದುಬಾರಿ ಉಡುಗೊರೆ ಕೊಡಲು ಬಜೆಟ್ ಸಾಕಾಗುತ್ತಿಲ್ಲ ಅನ್ನುವ ಚಿಂತೆ ಬೇಡ. ಉಡುಗೊರೆ ಕುರಿತು ಇಲ್ಲೊಂದಿಷ್ಟು ಸಲಹೆಗಳಿವೆ.

+ ಬಜೆಟ್ ಗೆ ಹೊಂದುವ ಗಿಫ್ಟ್ :
ನಿಮ್ಮ ಬಜೆಟ್ ಗೆ ಸರಿಹೊಂದುವ ಪ್ರೀತಿಯ ಉಡುಗೊರೆ ಕೊಡಬಹುದು. ಈ ರೀತಿ ಕೊಡುವಾಗ ಮೊದಲು ಅವಳ ಇಷ್ಟವಾದ ವಸ್ತುಗಳು ಯಾವುದೆಂದು ತಿಳಿದುಕೊಂಡು ಅಂತಹ ವಸ್ತುಗಳನ್ನು ನೀಡಿ. ಆಗ ಅವರಿಗೆ ಇಷ್ಟವಾಗುತ್ತಾದಾ? ಎಂಬ ಸಂಶಯವಿರುವುದಿಲ್ಲ. ದುಡ್ಡಿಲ್ಲದಿದ್ದರೆ ಚಿಂತಿಸಬೇಡಿ. ಹೂಕುಂಡದಲ್ಲಿ ಬೆಳೆದ ಗುಲಾಬಿಯನ್ನೇ ಕೊಡಿ.

+ ಪ್ರೀತಿಯ ಕಾಣಿಕೆ:
ಪ್ರೀತಿಯಿಂದ ಕೊಟ್ಟ ಯಾವುದೇ ಉಡುಗೊರೆಗೆ ಬೆಲೆಕಟ್ಟಲಾಗದು. ಕೊಟ್ಟ ವಸ್ತುವಿನ ಬೆಲೆಗಿಂತ ಅಲ್ಲಿ ಪ್ರೀತಿಯ ಆಳ ನೋಡಿ. ನೀವು ಕೊಡುವ ಉಡುಗೊರೆ ಬೆಲೆ ಬಾಳುವಂತದ್ದಾಗಿರದಿದ್ದರೂ ನಿಮ್ಮ ನೆಚ್ಚಿವರು ಅದಕ್ಕೆ ಬೆಲೆ ಕೊಡುವಂತಿರಲಿ. ಶಾಶ್ವತವಾಗಿ ಉಳಿಯಬಲ್ಲ ಉಡುಗರೆಗಳನ್ನು ನೀಡುವುದು ಒಳಿತು.

+ ಹೋಲಿಸುವುದು ಬೇಡ:
ನಿಮ್ಮ ಗೆಳತಿಯ ಹುಡುಗ ಅವಳಿಗೆ ಚಿನ್ನದ ಉಂಗುರ ಕೊಡಿಸಿದ, ನಿಮ್ಮ ಹುಡುಗ ಒಂದು ಡ್ರೆಸ್ ಮಾತ್ರ ಕೊಡಿಸಿದ ಎಂದೇಲ್ಲ ಹೋಲಿಸಿ ಕೊರಗದಿರಿ. ನಿಮ್ಮ ನಲ್ಲ/ನಲ್ಲೆ ಕೊಟ್ಟ ಉಡುಗೊರೆಯನ್ನು ಪ್ರೀತಿಸಿ. ಉಡುಗೊರೆಗಿಂತ ಕೊಡುವರ ಮನಸ್ಸು ಮುಖ್ಯ ನೆನಪಿರಲಿ.

+ ಹೆಚ್ಚಿನ ಸಮಯ ಕಳೆಯಿರಿ :
ಪ್ರೇಮಿಗಳ ದಿನದಂದು ಸಾಧ್ಯವಾದರೆ ನಿಮ್ಮ ಗೆಳಯ ಅಥವಾ ಗೆಳತಿ ಜೊತೆ ಸಾಕಷ್ಟು ಸಮಯ ಕಳೆಯಿರಿ. ಹೊರಗೆ ತಿನ್ನುವ ಬದಲು ನೀವೇ ಕೈಯಾರೆ ಅಡುಗೆ ಮಾಡಿ ತಿಂದರೆ ಮತ್ತಷ್ಟು ರುಚಿಕರವಾಗಿರುತ್ತದೆ. ಪ್ರೀತಿಯೆಂಬುದು ಅ ದಿನಕ್ಕಷ್ಟೆ ತೋರಿಸುವ ಆಡಂಬರವಾಗದೆ ಜೀವನದ ಸೆಲೆಯಾಗಲಿ.
ಹಾಗೇ ಈ ದಿನದಂದು “ಐ ಲವ್ ಯೂ” ಎನ್ನುವ ಮೂರಕ್ಷರದ ಮಂತ್ರವನ್ನು ಹೇಳಲು ಮರೆಯದಿರಿ.

ಪ್ರೀತಿ ಯಾವಾಗ, ಹೇಗೆ, ಎಲ್ಲಿ, ಯಾಕೆ, ಯಾರೊಂದಿಗೆ ಹುಟ್ಟುತ್ತದೆ ಎಂದು ಮುಂಚಿತವಾಗಿ ಯಾರೂ ಊಹಿಸಲು ಸಾಧ್ಯವಿಲ್ಲ. ಒಮ್ಮೆ ಪ್ರೀತಿಯ ಬೀಜ ಮನದಲ್ಲಿ ಮೊಳಕೆಯೊಡೆದಮೇಲೆ ಪ್ರೀತಿಯ ನಿವೇದನೆಗೆ ನೂರಾರು ಅಡ್ಡಿಗಳು. ಈ ಅಡ್ಡಿಗಳ ನಡುವೆ ಸಿಲುಕಿ ನರಳಾಡುವವರೇ ಹೆಚ್ಚು. ಅವರು ಆ ನರಳುವಿಕೆಯಲ್ಲೇ ಖುಷಿ ಪಡುತ್ತಿರುತ್ತಾರೆ. ಕನಸುಗಳನ್ನು ಕಾಣು ತ್ತಿರುತ್ತಾರೆ. ಆದರೆ ಕೆಲವು ಬಾರಿ ದುರದೃಷ್ಟವೆಂಬತೆ ಕಾಲಮಿಂಚಿ ಹೋಗಿ ಬಿಟ್ಟಿರುತ್ತದೆ. ಕನಸಿನಿಂದ ಹೊರ ಬಂದಾಗ ನಮ್ಮವರು ನಮ್ಮಿಂದ ಬಹು ದೂರ ಸರಿದಿರುತ್ತಾರೆ. ಆಗ ನಾವು ಮಾಡಿದ ತಪ್ಪು ಅರಿವಿಗೆ ಬರುತ್ತದೆ. ಅದು ಜೀವನದುದ್ದಕ್ಕೂ ಕಾಡುತ್ತಿರುತ್ತದೆ. ಆದ್ದರಿಂದ ಪ್ರೀತಿಸುತ್ತದ್ದೇನೆಂದು ನಿಮ್ಮಷ್ಟಕ್ಕೆ ನೀವು ಕಮಿಟ್ ಆಗಿದ್ದರೆ ನೇರವಾಗಿ ನೀವು ಪ್ರೀತಿಸುತ್ತಿರುವವರಿಗೆ ನಿಮ್ಮ ಪ್ರೀತಿಯನ್ನು ಹೇಳಿ. ಉತ್ತರ ಅವರಿಷ್ಟ್ಟ. ತಡ ಮಾಡಿದರೆ ನಿಮಗೇ ಕಷ್ಟ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *