ನಿಮ್ಮ ಸಂಗಾತಿಯಲ್ಲಿ ಹೇಳಿಕೊಳ್ಳಲಾಗದ ಕೆಲವು ಸಂಗತಿಗಳು ಇವು

ಪ್ರತಿಯೊಂದು ಸಂಬಂಧಗಳಿಗೂ ಒಂದು ಗಡಿ ಇರುತ್ತದೆ. ಅದರಾಚೆಗೆ ಕೆಲವು ಸಂಗತಿಗಳು ನಮ್ಮನ್ನು ಕೆಟ್ಟವರನ್ನಾಗಿಸುತ್ತವೆ. ಮನಸ್ಸು ಏನನ್ನು, ಎಷ್ಟನ್ನು ಬಯಸುತ್ತದೆಯೋ ಅಷ್ಟು ಪ್ರೀತಿ, ಕಾಳಜಿ ಸಿಕ್ಕರೆ ಅದು ಒಂದು ಸುಖಕರ ಜೀವನವೆನಿಸುತ್ತದೆ. ಕೆಲವರ ಮೇಲೆ ನೀವು ತೋರುವ ಅತಿಯಾದ ಪ್ರೀತಿಯೂ ಸಹ ನಿಮ್ಮನ್ನು ಕೆಟ್ಟವರನ್ನಾಗಿ ಬಿಂಬಿಸಿಬಿಡುತ್ತದೆ. ಎಲ್ಲರ ಗುಣ ಒಂದೇ ರೀತಿ ಇರುವುದಿಲ್ಲ. ಒಡ ಹುಟ್ಟಿದವರೇ ಆದರೂ ಗುಣದಲ್ಲಿ ನಮ್ಮ ರೀತಿ ಇರುವುದಿಲ್ಲ. ಅದೇ ರೀತಿ ನಾವು ಪ್ರೀತಿಸುವ ವ್ಯಕ್ತಿ ಅಥವಾ ಬಾಳಸಂಗಾತಿ ಆಗುವವರು ನಮಗೆ ಇಷ್ಟವಾಗುವ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಕೆಲವೊಂದು ಗುಣಗಳು ನಮಗೆ ಇಷ್ಟವಾಗದೇ ಇರಬಹುದು. ಸಂಬಂಧ ಜೀವಂತವಾಗಿ ಇರಲು ಹೊಂದಾಣಿಕೆ ಮಾಡಬೇಕಾಗುತ್ತದೆ. ಅಲ್ಲದೆ ಹೊಂದಾಣಿಕೆಯ ಗುಣ ಅವಶ್ಯಕ ಕೂಡ. ಕೆಲವು ಗುಣಗಳನ್ನು ಎಂದಿಗೂ ನೀವು ಇಷ್ಟಪಟ್ಟವರಿಂದ ಸಹಿಸಿಕೊಳ್ಳಬೇಡಿ. ಏಕೆಂದರೆ ಅಂತಹವರಿಂದ ನೆಮ್ಮದಿ ದೊರೆಯಲು ಸಾಧ್ಯವಿಲ್ಲ. ಸಂಬಂಧದಲ್ಲಿ ಇರಬಾರದ ಆ ಕೆಲವು ಗುಣಗಳಾವುವೆಂದರೆ…,

ಕೆಳಮಟ್ಟದ ನಡುವಳಿಕೆ ಮತ್ತು ಹಿಂಸೆ ನೀಡುವ ಗುಣ. ತುಂಬಾ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುವುದು, ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುವುದು ಈ ರೀತಿ ಗುಣವಿದ್ದರೆ ಅಂತಹವರು ತುಂಬಾ ಅಪಾಯದ ವ್ಯಕ್ತಿಗಳಾಗಿರುತ್ತಾರೆ. ಅವರಿಂದ ದೂರವಾಗುವುದೇ ಒಳ್ಳೆಯದು. ಕೆಟ್ಟದಾಗಿ ಮಾತನಾಡುವುದು, ಮಾತಿನಲ್ಲಿ ಸಂಶಯ ವ್ಯಕ್ತ ಪಡಿಸುವುದು, ಕೆಟ್ಟ ಪದಗಳಿಂದ ಬೈಯ್ಯುವುದು, ಬೇರೆಯವರ ಹತ್ತಿರ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಈ ರೀತಿಯ ಗುಣಗಳಿದ್ದರೆ ಅಂತಹವರ ಗುಣವನ್ನು ಸಹಿಸದಿರುವುದು ಒಳ್ಳೆಯದು.  ನಂಬಿಕೆಗೆ, ಪ್ರೀತಿಗೆ ಮೋಸ ಮಾಡುವವರನ್ನು ಸಹಿಸಲು ಸಾಧ್ಯವೇ ಇಲ್ಲ. ನಿಜವಾದ ಪ್ರೇಮಿ ತಾನು ಪ್ರೀತಿಸುತ್ತಿರುವ ವ್ಯಕ್ತಿಯನ್ನು ಕನಸ್ಸಿನಲ್ಲಿಯೂ ಮೋಸ ಮಾಡಲು ಬಯಸುವುದಿಲ್ಲ.

ಕೆಲವು ವರ್ಷಗಳ ಸಂಬಂಧದ ನಂತರ ಕೆಲ ಪುರುಷರು ತಾನು ಪ್ರೀತಿಸಿದ ಮಹಿಳೆಯ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಾರೆ. ಅವಳ ಭಾವನೆಗಳನ್ನು ತಿಳಿದುಕೊಳ್ಳಲು ಹೋಗುವುದೇ ಇಲ್ಲ. ಈ ರೀತಿಯ ನಡುವಳಿಕೆ ನಿಮ್ಮ ಬಾಳಸಂಗಾತಿಯಲ್ಲಿ ಕಾಣಿಸಿದರೆ ಅದರ ಬಗ್ಗೆ ಒಮ್ಮೆ ಮಾತನಾಡಿ. ಆಗಲೂ ಕೇಳದಿದ್ದರೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ನೀವೇ ತೀರ್ಮಾನಿಸಿ.ಪ್ರೀತಿ ಇರುವಲ್ಲಿ ಪೋಸೆಸಿವ್‍ನೆಸ್ ಇರುತ್ತದೆ, ಆದರೆ ಅದೇ ಮಿತಿಯಾದರೆ ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ತುಂಬಾ ನಂಬಿಕೆಯಿಂದ ಅವರು ಹೇಳುವುದೆಲ್ಲಾ ನಿಜವೆಂದು ನಂಬಿ, ಒಂದು ದಿನ ಸುಳ್ಳೆಂದು ಗೊತ್ತಾದಾಗ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ.

ಮೊದಲನೇ ಸಂಬಂಧದಿಂದ ನಿಮಗೆ ಮಕ್ಕಳಿದ್ದು ಆ ವ್ಯಕ್ತಿ ತೀರಿ ಹೋಗಿ ಅಥವಾ ಬಿಟ್ಟು ಹೋಗಿ ಒಂಟಿಯಾಗಿ ಇರುವಾಗ ನಿಮ್ಮ ಜೊತೆ ಹೊಸ ಸಂಬಂಧಕ್ಕೆ ಯಾರಾದರೂ ಸಿದ್ಧವಾದರೆ ಅವರು ನಿಮ್ಮ ಜೊತೆ ನಿಮ್ಮ ಮಗುವನ್ನು ಸ್ವೀಕರಿಸಲು ಸಿದ್ಧವಿಲ್ಲವೆಂದರೆ ಅವರ ಜೊತೆ ಬಾಳ್ವೆ ಮಾಡಲು ಮುಂದಾಗದಿರುವುದು ಒಳ್ಳೆಯದು.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *