ಇದನ್ನು ಓದಲು ನಿಮಗೆ ಸ್ವಲ್ಪ ಮುಜುಗರವೆನಿಸಬಹುದು , ಆದರೆ ತಪ್ಪದೆ ಓದಿ..!?

ಓದಲು ಮುಜುಗರವೆನಿಸಿದರೂ ಓದಲೇಬೇಕಾದ ಕೆಲವೊಂದು ಬೆತ್ತಲಾದ ಸತ್ಯಗಳಿವು. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ದಿನದಲ್ಲಿ ಸಾವಿರಾರು ಸಮೀಕ್ಷೆಗಳು ನಡೆಯುತ್ತವೆ. ಪ್ರತಿಯೊಂದು ಸಮೀಕ್ಷೆಯೂ ಒಂದೊಂದು ಅಚ್ಚರಿಯನ್ನು ಹೊರಹಾಕುತ್ತವೆ.. ಹಾಗೆಯೇ ಇಲ್ಲಿ ಕೆಲವು ಪತ್ರಿಕೆಗಳು, ಸಂಸ್ಥೆಗಳು, ಎನ್‌ಜಿಓಗಳು ನಡೆಸಿದ ಆಯ್ದ ಕುತೂಹಲ ಕೆರಳಿಸುವ ಕೆಲವು ಸಮೀಕ್ಷೆಗಳು ನಿಮ್ಮ ಮುಂದಿವೆ. ನಿಜಕ್ಕೂ ಅವು ನಿಮ್ಮನ್ನು ದಂಗಾಗಿಸುತ್ತವೆ. ಏಕೆಂದರೆ ಈ ಸಮೀಕ್ಷೆಗೆ ಆಯ್ದುಕೊಂಡ ವಿಷಯವೇ ಅಂತಹದ್ದು. ಸೂಕ್ಷ್ಮ ಸಂಬಂಧಗಳ ನಡುವಿನ ಸಂಘರ್ಷಗಳ ಪರಿಣಾಮವೇ ಈ ಸಮೀಕ್ಷೆಯ ಮೂಲ.

ನಿಮಗೆ ಗೊತ್ತು, ಒಂದು ಸುಂದರ ಸಂಸಾರದಲ್ಲಿ ಹುಳಿ ಹಿಂಡುವ ವಿಷಯವೊಂದಿದ್ದರೆ ಅದು ಅಕ್ರಮ ಸಂಬಂಧದ ಸಂಶಯದ ಗಾಳಿ. ಒಂದು ಹಂತದಲ್ಲಿ ವಯಸ್ಸೆಂಬುದು ನಮ್ಮ ಜೀವನದಲ್ಲಿ ಬಹು ಆಯ್ಕೆ ಪ್ರಶ್ನೆಯಾಗಿ ಎದುರು ನಿಂತುಬಿಡುತ್ತದೆ. ಆ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂಬ ಗೊಂದಲದಲ್ಲಿ ನಾನಾ ತಪ್ಪುಗಳು ಅರಿವಿಗೆ ಬರದೇ ನಡೆದು ಹೋಗಬಹುದು. ಇನ್ನೂ ಕೆಲವು ತಪ್ಪುಗಳು ನಮ್ಮ ಅವಸರ, ಆತುರದಿಂದ ನಡೆದು ಹೋಗಿಬಿಡುತ್ತವೆ. ನಂಬಿದವರ ನಂಬಿಕೆಯ ಕನ್ನಡಿಯಲ್ಲಿ ಬಿರುಕು ಕಾಣಿಸಿಕೊಂಡು ನಮ್ಮ ಮುಖವೇ ನಮಗೆ ವಿಕಾರವಾಗಿ ಕಾಣಸಲಾರಂಭಿಸುತ್ತದೆ.  ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯಲು ಕಾರಣವೇ ಪ್ರೇಮ ಮತ್ತು ಕಾಮ ಎಂಬುವ ಎರಡು ಕೊನೆ ಇಲ್ಲದ ಸಮಸ್ಯೆಗಳು. ಈ ವಿಷಯವನ್ನೇ ಆಧಾರವಾಗಿಟ್ಟುಕೊಂಡು ನಡೆದ ಕೆಲವು ಸಮೀಕ್ಷೆಗಳ ಕೂತೂಹಲಕಾರಿ ಅಂಶಗಳು ಇಲ್ಲಿವೆ ನೋಡಿ.

ಮೊದಲನೆಯ ಸಮಿಕ್ಷೆ ನಿಮಗೆ ಶಾಕ್ ನೀಡಬಹುದು. ಆದರೆ ಅದೇ ಸತ್ಯವಂತೆ. ಇಂದು ಒಬ್ಬ ವ್ಯಕ್ತಿಯು ಮದುವೆಯ ಸಂದರ್ಭದಲ್ಲಿ ಪರ್ಯಾಯ ಸಂಬಂಧವೊಂದನ್ನು ಹೊಂದಿರುವ ಶೇ.50-50 ಸಂಭವವಿರುತ್ತದೆ ಎಂದು ಕೆಲವು ಸಂಶೋಧಕರು ಹೇಳುತ್ತಾರೆ. ಇದು ದೈಹಿಕ ಮತ್ತು ದೈಹಿಕವಲ್ಲದ ಸಂಬಂಧಗಳನ್ನು ಒಳಗೊಂಡಿರುತ್ತದೆ. ಸುಮಾರು 30ರಿಂದ 60%ರಷ್ಟು ವಿವಾಹಿತರು (ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ) ಅವರ ಮದುವೆಗೆ ಮುಂಚಿನ ಯಾವುದೊದರೊಂದು ಸಂದರ್ಭದಲ್ಲಿ ದಾಂಪತ್ಯ ದ್ರೋಹದಲ್ಲಿ ತೊಡಗಿರುತ್ತಾರೆ ಎಂದು ಅಂದಾಜಿಸಲಾಗಿದೆ. ಕೆಲವು ತಜ್ಞರು (ಉದಾಹರಣೆಗಾಗಿ, ಗ್ರೊ ಅಪ್ ಗೋಲ್ಡನ್ ಬುಕ್ಸ್‌ನ ಫ್ರ್ಯಾಂಕ್ ಪಿಟ್‌ಮ್ಯಾನ್) 90%ರಷ್ಟು ಮೊದಲ ಬಾರಿಯ ವಿವಾಹ-ವಿಚ್ಛೇದನಗಳಿಗೆ ದಾಂಪತ್ಯ ದ್ರೋಹವು ಕಾರಣವಾಗಿರುತ್ತದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಕ್ರಿಸ್ಟಿನ್ ಗಾರ್ಡನ್ 1997ರಲ್ಲಿ ಮಾಡಿದ ಅಧ್ಯಯನವು, “ದಾಂಪತ್ಯ ದ್ರೋಹವನ್ನು ಅನುಭವಿಸುವ ಅರ್ಧಕ್ಕಿಂತಲೂ ಹೆಚ್ಚಿನ ಮದುವೆಗಳು ವಿವಾಹ-ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ ಎಂದು ಪತ್ತೆಯಾಗಿದೆ. ಮದುವೆಯಾಗಿ ಸಂತೋಷವಾಗಿರುವ 27%ರಷ್ಟು ಮಂದಿ ಒಂದು ಪರ್ಯಾಯ ಸಂಬಂಧವನ್ನು ಹೊಂದಿರುತ್ತಾರಂತೆ..! 16,000 ವಿಶ್ವವಿದ್ಯಾನಿಲಯದ-ವಿದ್ಯಾರ್ಥಿಗಳ 53 ರಾಷ್ಟ್ರಗಳಲ್ಲಿನ ಒಂದು ಇತ್ತೀಚಿನ ಸಮೀಕ್ಷೆಯಲ್ಲಿ, 20%ರಷ್ಟು ದೀರ್ಘ-ಕಾಲದ ಸಂಬಂಧಗಳು ಒಬ್ಬ ಅಥವಾ ಇಬ್ಬರೂ ಸಂಗಾತಿಗಳು ಮತ್ತೊಬ್ಬರೊಂದಿಗೆ ಪರ್ಯಾಯ-ಸಂಬಂಧ ಹೊಂದಿದ್ದಾಗ ಇದು ಆರಂಭವಾಗುತ್ತವೆ ಎಂದು ಹೇಳಲಾಗಿದೆ. ಸುಮಾರು 30-40%ನಷ್ಟು ಡೇಟಿಂಗ್ ಸಂಬಂಧಗಳು ಹಾಗೂ 18-20%ನಷ್ಟು ಮದುವೆಗಳು ಕನಿಷ್ಠ ಒಂದು ಲೈಂಗಿಕ ದಾಂಪತ್ಯ ದ್ರೋಹದ ಸಂಗತಿಯನ್ನು ಹೊಂದಿರುತ್ತವೆ ಎಂದು ಈ ಅಧ್ಯಯನಗಳು ಸೂಚಿಸುತ್ತವೆ. ವಿವಾಹಿತ ಅಥವಾ ಡೇಟಿಂಗ್ ಸಂಬಂಧದಲ್ಲಿ ಮಹಿಳೆಯರಿಗಿಂತ ಹೆಚ್ಚು ಪುರುಷರು ಪರ್ಯಾಯ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತಿದೆ.

ಯುನೈಟೆಡ್ ಕಿಂಗ್‌ಡಮ್‌ನ ಐವತ್ತು ವಿವಾಹ-ವಿಚ್ಛೇದನ ವಕೀಲರಲ್ಲಿ, 2003ರಲ್ಲಿ ಅವರ ಪ್ರಕರಣಗಳಿಗೆ ಹೆಚ್ಚು ಸಾಮಾನ್ಯ ಕಾರಣಗಳು ಯಾವೆಂದು ಕೇಳಲಾಯಿತು. ವಿವಾಹೇತರ ಸಂಬಂಧಗಳು ಕಾರಣವೆಂದು ಸೂಚಿಸಿದವರಲ್ಲಿ 55%ನಷ್ಟು ಮಂದಿ ಇದಕ್ಕೆ ಸಾಮಾನ್ಯವಾಗಿ ಪತಿ ಕಾರಣವೆಂದು ಹಾಗೂ 45%ನಷ್ಟು ಮಂದಿ ಪತ್ನಿಯರು ಕಾರಣವೆಂದು ಹೆಚ್ಚಿನ ತಜ್ಞರು ನಂಬಿದ್ದಾರೆ.

+ ದಾಂಪತ್ಯ ದ್ರೋಹ :

“ಸಾಂದರ್ಭಿಕ ಲೈಂಗಿಕತೆಗೆ ಲಿಂಗ ಭಿನ್ನತೆಯು ಕಾರಣವಾಗಿರುತ್ತದೆ. ದಾಂಪತ್ಯ ದ್ರೋಹವು ವಿವಿಧ ರೀತಿಯ ಕಾರಣಗಳಿಂದ ಬರುತ್ತದೆ, ಕೆಲವೊಮ್ಮೆ ಸಂಕೀರ್ಣವಾಗಿಯೂ ಇರುತ್ತದೆ. ಅದು ಪುರುಷ, ಸ್ತ್ರೀ ಮತ್ತು ಪುರುಷರೂ-ಸ್ತ್ರೀಯರೂ ಅಲ್ಲದ ಲಿಂಗಗಳಲ್ಲಿ ಭಿನ್ನವಾಗಿರುತ್ತವೆ. ಮೈಕೆಲ್ ಎ. ಫಾರ್ಮಿಕಾನ “ಸೈಕಾಲಿಜಿ ಟುಡೆ ಬ್ಲಾಗ್‌ನ ಪ್ರಕಾರ, “ಲೈಂಗಿಕತೆ ಮತ್ತು ಭಾವನಾತ್ಮಕತೆ ಮಧ್ಯೆ ಒಂದು ಅನ್ಯೋನ್ಯ ಸಂಬಂಧವಿದೆ. ಪುರುಷರು ಮತ್ತು ಮಹಿಳೆಯರು ಆ ಸಂಬಂಧವನ್ನು ವ್ಯಾಪಕವಾಗಿ ಭಿನ್ನ ಸೂಚನೆಗಳ ಮೂಲಕ ಸಾಧಿಸುತ್ತಾರೆ. ಆ ಭಿನ್ನತೆಗಳು ಸ್ಪಷ್ಟವಾಗಿ ಪ್ರತಿಯೊಂದು ಲಿಂಗದ ದಾಂಪತ್ಯ ದ್ರೋಹದ ಮೇಲೆ ಪರಿಣಾಮ ಬೀರುತ್ತವೆ, ದಾಂಪತ್ಯ ದ್ರೋಹವು ಭಾವನಾತ್ಮಕವಾಗಿರಲಿ ಅಥವಾ ಲೈಂಗಿಕವಾಗಿರಲಿ.

ಆನೆಟ್ಟ್ ಲಾವ್ಸನ್‌ಳ “ಅಡಲ್ಟರಿ ಆನ್ ಅನಾಲಿಸಿಸ್ ಆಫ್ ಲವ್ ಆಂಡ್ ಬೆಟ್ರಾಯಲ್ನಲ್ಲಿ ಆಕೆ ಹೀಗೆಂದು ವಿಚಾರ ಮಾಡುತ್ತಾಳೆ – ಪುರುಷರು ಪರ್ಯಾಯ-ಸಂಬಂಧಗಳನ್ನು ಹೊಂದಿರುವಾಗ, ಅವರು ತಮ್ಮನ್ನು ತಾವು ಖಂಡನೆಗೆ ಒಳಪಡಿಸಲು ಮತ್ತು ಅವಲಂಬಿತರಾಗಲು ಬಯಸುತ್ತಾರೆ. ಅದೇ ಮಹಿಳೆಯರು ಪರ್ಯಾಯ-ಸಂಬಂಧಗಳನ್ನು ಹೊಂದಿರುವಾಗ ಹೆಚ್ಚು ಪ್ರಬಲರಾಗಬೇಕೆಂದು ಮತ್ತು ಸ್ವತಂತ್ರರಾಗಬೇಕೆಂದು ಬಯಸುತ್ತಾರೆ.

+ ಕೆಲಸದಲ್ಲಿ ದಾಂಪತ್ಯ ದ್ರೋಹ :

ಕಛೇರಿಯಲ್ಲಿನ ರೊಮಾನ್ಸ್ , ಕೆಲಸದಲ್ಲಿನ ರೊಮಾನ್ಸ್ ಅಥವಾ ಸಂಸ್ಥೆಯಲ್ಲಿನ ಪರ್ಯಾಯ-ಸಂಬಂಧ ಎಂದರೆ ಒಂದೇ ಕಛೇರಿ, ಉದ್ಯೋಗದ-ಸ್ಥಳ ಅಥವಾ ವ್ಯವಹಾರದಲ್ಲಿ ಒಟ್ಟಿಗೆ ಕೆಲಸ ಮಾಡುವ ಇಬ್ಬರು ಮಧ್ಯೆ ಕಂಡುಬರುವ ರೊಮಾನ್ಸ್ ಆಗಿದೆ. ಕಛೇರಿಯಲ್ಲಿನ ರೊಮಾನ್ಸ್‌ಗಳು ಬೆಳೆಯಲು ಮತ್ತೊಂದು ಕಾರಣವೆಂದರೆ ಸಹೋದ್ಯೋಗಿಗಳು ಒಟ್ಟಿಗೆ ಹೆಚ್ಚು ಸಮಯ ಕಳೆಯುವುದು. ಇಂದು ದಂಪತಿಗಳು ಪರಸ್ಪರ ಒಟ್ಟಿಗೆ ಇರುವುದಕ್ಕಿಂತ ಹೆಚ್ಚು ಕಾಲ ಸಹೋದ್ಯೋಗಿಗಳೊಂದಿಗೆ ಇರುತ್ತಾರೆ. ಲೀಸಾ ಮಿಲ್ಲರ್ ಮತ್ತು ಲೊರೈನ್ ಅಲಿ ನ್ಯೂಸ್‌ವೀಕ್‌ನ ಲೇಖನ “ದಿ ನ್ಯೂ ಇನ್ಫಿಡೆಲಿಟಿಯಲ್ಲಿ ಹೀಗೆಂದು ಸೂಚಿಸಿದ್ದಾರೆ – “ಸುಮಾರು ಶೇಕಡಾ 60ರಷ್ಟು ಅಮರಿಕನ್ ಮಹಿಳೆಯರು ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ಈ ಪ್ರಮಾಣವು 1964ರಲ್ಲಿದ್ದ ಶೇಕಡಾ 40ರಷ್ಟಕ್ಕಿಂತ ಹೆಚ್ಚಾಗಿದೆ. ಶೇವ್ ಮ್ಯಾಗಜಿನ್‌ಗಾಗಿ ಡಾ. ಡೆಬ್ರಾ ಲೈನೊ ಬರೆದ ಲೇಖನದ ಪ್ರಕಾರ, ಮಹಿಳೆಯರು ಉದ್ಯೋಗದ-ಸ್ಥಳದಲ್ಲಿ ವಂಚಿಸಲು ಕಾರಣವೆಂದರೆ ಅವರು ಕೆಲಸದ-ಸ್ಥಳದಲ್ಲಿ ಪುರುಷರೊಂದಿಗೆ ಮಿತಿತಪ್ಪಿ ವ್ಯವಹರಿಸುವುದು ಹಾಗೂ ಅದರ ನೇರ ಪರಿಣಾಮವಾಗಿ ಹೆಚ್ಚಿನವರು ವಂಚಿಸುವ ಅವಕಾಶಗಳನ್ನು ಹೊಂದಿರುತ್ತಾರೆ.

+ ದಾಂಪತ್ಯ ದ್ರೋಹ ಮತ್ತು ಇಂಟರ್ನೆಟ್

ಇಂಟರ್ನೆಟ್ ಮತ್ತು ತಂತ್ರಜ್ಞಾನದ ಬೆಳವಣಿಗೆಯು ಸಾಮಾನ್ಯವಾಗಿ ಆಧುನಿಕ ಜೋಡಿಗಳಿಗೆ ಹೊಸ ಸವಾಲುಗಳನ್ನು ತಂದೊಡ್ಡಿದೆ. 2003ರ ಗ್ಲೋಬಲ್ ಇಂಟರ್ನೆಟ್ (ಅಂಕಿಅಂಶ) ಸ್ಟ್ಯಾಟಿಸ್ಟಿಕ್ಸ್‌ನ ಪ್ರಕಾರ, ಪ್ರಪಂಚದಾದ್ಯಂತ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ಒಂದು ದಶಕದೊಳಗೆ ಅಸಾಧಾರಣ ರೀತಿಯಲ್ಲಿ ಅತಿ ವೇಗವಾಗಿ ಬೆಳೆದಿದೆ, 1995ರಲ್ಲಿ 16 ದಶಲಕ್ಷದಷ್ಟಿದ್ದ ಬಳಕೆದಾರರ ಸಂಖ್ಯೆಯು 2003ರ ಉತ್ತರಾರ್ಧದಲ್ಲಿ ಸರಿಸುಮಾರು 680 ದಶಲಕ್ಷಕ್ಕೆ ಏರಿದೆ. ಅದು2012 ಶೇ.10 ರಷ್ಟು ಹೆಚ್ಚಾಗಿದೆ. ಈಗಂತೂ ಇನ್‌ಟರ್‌ನೆಟ್ ಇಲ್ಲದೇ ಜೀವನವೇ ಇಲ್ಲ ಎಂಬಂತಾಗಿದೆ.  ಅಂತಹ ದಶಲಕ್ಷದಷ್ಟು ಬಳಕೆದಾರರು ಅಪರಿಚಿತರನ್ನು ಭೇಟಿಯಾಗಲು, ಪ್ರೇಮದ ಚೆಲ್ಲಾಟವಾಡಲು ಮತ್ತು ಹೆಚ್ಚಾಗಿ ಲೈಂಗಿಕತೆಯ ಬಗ್ಗೆ ಮಾತಕತೆಯಾಡಲು ಇಂಟರ್ನೆಟ್‌ನ್ನು ಬಳಸುವವರಹ ಹೆಚ್ಚಾಗಿದ್ದಾರೆ.

ಇಂಟರ್ನೆಟ್ ದಾಂಪತ್ಯ ದ್ರೋಹದ ಬಗೆಗಿನ ಸಂಶೋಧನೆಯು ಹೆಚ್ಚುಕಡಿಮೆ ಹೊಸ ಆಸಕ್ತಿಯ ವಿಷಯವಾಗಿದೆ. ಇಂಟರ್ನೆಟ್ ಮೂಲಕ ಯಾವುದೇ ರೀತಿಯ ಲೈಂಗಿಕ ಮಾತುಕತೆಯನ್ನು ದಾಂಪತ್ಯ ದ್ರೋಹವೆಂದು ಹೇಳಲಾಗುವುದಿಲ್ಲ ಏಕೆಂದರೆ ಇದರಲ್ಲಿ ದೈಹಿಕ ಸಂಪರ್ಕವಿರುವುದಿಲ್ಲ. ಅಲನ್ ಸಾಬಲ್ ಮತ್ತು ನಿಕೋಲಸ್ ಪವರ್ “ದಿ ಫಿಲಾಸಫಿ ಆಫ್ ಸೆಕ್ಸ್ ಪುಸ್ತಕದಲ್ಲಿ ಈ ವಿಷಯ ದಾಖಲಿಸಿದ್ದಾರೆ.  ಇಂದಿನ ಮೊಬೈಲ್, ಇನ್‌ಟರ್‌ನೆಟ್,  ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಅಪ್, ವೀಚಾಟ್, ಗೂಗಲ್ ಚಾಟ್ ಸೇರಿದಮತೆ ಹಲವು ಉಪಯುಕ್ತ ತಂತ್ರಜ್ಞಾನಗಳೂ ಸಹ ಇತ್ತೀಚೆಗೆ ಅಕ್ರಮ ಸಂಬಂಧಗಳಿಗೆ ಕೊಂಡಿ ಬೆಸೆಯುವ ಕಾರ್ಯ ಮಾಡಲು ಸಹಕಾರಿಯಾಗುತ್ತವೆ ಎಂದು ಸಮೀಕ್ಷೆಯೊಂದು ಸ್ಪಷ್ಟಪಡಿಸಿದೆ. ಆದಷ್ಟೂ ಚಾಟಿಂಗ್‌ನಿಂದ ದೂರವಿರುವುದು ಸೇಫ್ ಜೀವಕ್ಕೆ ಸಹಕಾರಿಯೆಂದೂ ಸಹ ತಿಳಿಸಲಾಗಿದೆ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *