ನಿಮ್ಮ ಸೌಂದರ್ಯವರ್ಧಕ ವೆಜ್ ಅಥವಾ ನಾನ್ವೆಜ್ ಮೂಲದ್ದೋ ಎಂದು ತಿಳಿಯಬಹುದು..!

ನಿಮ್ಮ ಸೌಂದರ್ಯವರ್ಧಕಗಳಲ್ಲಿ ಸಸ್ಯಾಹಾರಿ ಅಥವಾ ಮಾಂಸಹಾರಿ ಮೂಲದ್ದೇ ಎಂಬುದು ನಿಮಗೆ ಶೀಘ್ರ ತಿಳಿಯಲಿದೆ. ಸೌಂದರ್ಯವರ್ಧಕಗಳು ಹಾಗೂ ಫೇಸ್‍ವಾಸ್, ಸೋಪುಗಳು, ಶಾಂಪೂಗಳು ಮತ್ತು ಟೂತ್‍ ಪೇಸ್ಟ್ ಗಳಂಥ ವಸ್ತುಗಳಲ್ಲಿ ವೆಜ್ ಅಥವಾ ನಾನ್ ವೆಜ್ ಅಂಶಗಳು ಇರುವ ಬಗ್ಗೆ ಮಾಹಿತಿ ನೀಡುವ ಗುರುತುಗಳನ್ನು ನೀವು ಪರಿಶೀಲಿಸಬಹುದು.  ಆಹಾರ ಉತ್ಪನ್ನಗಳ ಮೇಲೆ ಇರುವಂತೆ ಸೌಂದರ್ಯವರ್ಧಕಗಳ ಮೇಲೆ ಕಂದು/ಕೆಂಪು ಅಥವಾ ಹಸಿರು ಚುಕ್ಕಿ ಗುರುತುಗಳನ್ನು ಮಾಡಲಾಗುತ್ತದೆ. ಕಂದು/ಕೆಂಪು ಗುರುತು ಇದ್ದರೆ ಅದು ಮಾಂಸಾಹಾರಿ ಮೂಲದ್ದು ಹಾಗೂ ಹಸಿರು ಡಾಟ್ ಇದ್ದರೆ ಅದು ಸಸ್ಯಜನ್ಯದ್ದು ಎಂಬುದನ್ನು ತಿಳಿಯಬಹುದು. ಸದ್ಯದಲ್ಲೆ ಕಾಸ್ಮೆಟಿಕ್‍ಗಳ ಮೇಲೆ ಈ ಗುರುತುಗಳು ಕಾಣಿಸಿಕೊಳ್ಳಲಿವೆ. ಈ ಬಗ್ಗೆ ಔಷಧ ಸಲಹಾ ಮಂಡಳಿ ಡಿಟ್ಯಾಬ್ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

( ಮತ್ತಷ್ಟು ಅಪ್ಡೇಟ್ಸ್ ಪಡೆಯಲು ತಪ್ಪದೆ ನಮ್ಮ ಫೇಸ್ಬುಕ್ ಪೇಜ್ My Health My Lifestyle ಲೈಕ್ ಮಾಡಿ )

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *