ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು ಬೇಸಿಗೆಯಲ್ಲಿ ಚರ್ಮ ರಕ್ಷಣೆ ಮಾಡಿಕೊಳ್ಳಬಹುದು

ಬೇಸಿಗೆ ಒಂದು ರೀತಿ ಶತ್ರುವು ಹೌದು ಮಿತ್ರನೂ ಹೌದು. ಸೂರ್ಯ ನಮ್ಮ ಬದುಕಿಗೆ ಏನೆಲ್ಲಾ ಕೊಡುಗೆಯನ್ನು ನೀಡಿದ್ದಾನೆ. ಸೂರ್ಯನಿಲ್ಲದೇ ನಮ್ಮ ಜೀವನ ಸಾಗದು. ಇನ್ನೊಂದೆಡೆ ಸೂರ್ಯನ ನೇರಳಾತೀತ (ಆಲ್ಟ್ರಾವೈಲೆಟ್) ವಿಕಿರಣಕ್ಕೆ ನಮ್ಮ ದೇಹ ತೆರೆದುಕೊಳ್ಳುವುದರಿಂದ ಬಹುತೇಕ ಎಲ್ಲ ರೀತಿಯ ಕ್ಯಾನ್ಸರ್ ರೋಗಗಳಿಗೆ ಕಾರಣವಾಗುತ್ತದೆ. ಅಲ್ಲದೆ, ನೀವು ಯೋಚಿಸುವುದಕ್ಕಿಂತ ತಂಬಾ ಸುಲಭವಾಗಿ ಸನ್‍ಬರ್ನ್ ದಾಳಿ ಮಾಡುತ್ತದೆ.

ಅದೃಷ್ಟವಶಾತ್, ಸೂರ್ಯನ ಅಪಾಯಕಾರಿ ಕಿರಣಗಳಿಂದ ರಕ್ಷಿಸಿಕೊಳ್ಳಲು ಅನೇಕ ಸುಲಭ ಮಾರ್ಗಗಳಿವೆ. ಸೂರ್ಯ ಪ್ರಖರವಾಗಿ ಉರಿಯುತ್ತಿರುವಾಗ ಮತ್ತು ಬಿಸಿಲಿನ ಝಳ ಅಧಿಕವಿದ್ದಾಗ ಅದರಿಂದ ರಕ್ಷಿಸಿಕೊಳ್ಳುವ ವಿಧಾನವೇ ಸನ್ ಪ್ರೊಟೇಕ್ಷನ್. ಸುರಕ್ಷತಾ ಬಟ್ಟೆಗಳನ್ನು ತೊಡಬೇಕು, ಅಗಲ ಅಂಚು ಇರುವ ಟೋಪಿ ಹಾಕಿಕೊಳ್ಳಬೇಕು ಮತ್ತು ಸನ್‍ಗ್ಲಾಸ್‍ನನ್ನು ಧರಿಸಬೇಕು. ಸನ್ ಸ್ಕ್ರೀನ್‍ನನ್ನು ಕೂಡ ಬಳಸಬಹುದು.

ಸನ್‍ ಬರ್ನ್‍ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹಾಗೂ ನಿಮ್ಮ ಚರ್ಮ ಆರೋಗ್ಯಕರವಾಗಿ ಮತ್ತು ಚಿರ ಯೌವನವಾಗಿ ಕಾಣಲು ಇಲ್ಲಿ ಕೆಲವು ಸರಳ ಕ್ರಮಗಳನ್ನು ನೀಡಲಾಗಿದೆ.

+ ಹೊರಗೆ ಹೋಗುವುದಕ್ಕೆ ಮೊದಲು ಸನ್ ಸ್ಕ್ರೀನ್ ಹಾಕಿಕೊಳ್ಳುವುದನ್ನು ಮರೆಯದಿರಿ.
+ ನೀವು ಬಿಸಿಲಿನಲ್ಲಿ ಹೊರಗೆ ದೀರ್ಘ ಕಾಲ ಇರಬೇಕಾದ ಸಂದರ್ಭ ಬಂದರೆ ಅದಕ್ಕೆ ಅನುಗುಣವಾಗಿ ಬಟ್ಟೆಗಳನ್ನು ಧರಿಸಿ.
+ ಸೂರ್ಯನ ತಾಪ ಪ್ರಖರವಾಗಿರುವ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಹೊರಗೆ ಇರುವುದನ್ನು ಸಾಧ್ಯವಾದಷ್ಟು ತಪ್ಪಿಸಿ.
+ ನಿಮ್ಮ ಮುಖಕ್ಕೆ ಹೆಚ್ಚುವರಿ ರಕ್ಷಣೆ ನೀಡಲು ದೊಡ್ಡ ಅಂಚಿನ ಟೋಪಿ ಬಳಸಿ.
+ ಮಹಿಳೆಯರು ಗುಲಾಬಿ ವರ್ಣದ ಲಿಪ್‍ಸ್ಟಿಕ್ ಹಚ್ಚಿಕೊಳ್ಳುವುದು ಉತ್ತಮ.
+ ಹೊರಗೆ ಬಿಸಿಲಿನಲ್ಲಿ ಹೋಗುವುದಕ್ಕೆ 20 ನಿಮಿಷಗಳ ಮೊದಲು ಮೊದಲ ಸನ್ ಸ್ಕ್ರಿನ್ ಲೇಪಿಸಿ ಹಾಗೂ ಬಿಸಿಲಿನಿಂದ ಒಳಗೆ ಹೋದ 20 ನಿಮಿಷಗಳ ಬಳಿಕ ಎರಡನೇ ಸನ್ ಸ್ಕ್ರಿನ್ ಲೇಪಿಸಿಕೊಳ್ಳಿ.


+ ನೀವು ಬಿಸಿಲಿನಲ್ಲಿ ದೀರ್ಘ ಕಾಲ ಇರಬೇಕಾದ ಸಂದರ್ಭದಲ್ಲಿ ಸನ್ ಸ್ಕ್ರಿನ್‍ನನ್ನು ಅಗಾಗ ಲೇಪಿಸಬೇಕು.
+ ಈಜಿದ ನಂತರ ಅಥವಾ ನೀರಿನಲ್ಲಿರಬೇಕಾದ ಸಂದರ್ಭದಲ್ಲಿ ಸನ್ ಸ್ಕ್ರಿನ್‍ನನ್ನು ಮತ್ತೆ ಲೇಪಿಸಬೇಕು.
+ ಬೆಳಿಗ್ಗೆ 5-7ರ ಅವಧಿಯಂತ ತಣ್ಣಗಿನ ಸಮಯದಲ್ಲಿ ಪರಿಶ್ರಮದ ವ್ಯಾಯಾಮ ಮಾಡಿ.
+ ಅರ್ಧ ಬಕೇಟ್ ಅಷ್ಟು ತಣ್ಣಗಿನ ನೀರಿಗೆ 2 ಚಮಚದಷ್ಟು ನಿಂಬೆರಸವನ್ನು ಹಾಕಿ ಕಾಲು ಪಾದ-ಕೈ ಹಸ್ತವನ್ನು ನೀರಿನಲ್ಲಿ ಇರಿಸಿಕೊಳ್ಲುವುದು. ಹೀಗೆ 20 ನಿಮಿಷ ನೀರಿನಲ್ಲಿ ಕಾಲಿನ ಪಾದವನ್ನು ನೆನೆಸುವುದರಿಂದ ಮೈಯಲ್ಲಿನ ಉಷ್ಣದಿಂದಾಗುವ ಉರಿ ಕಡಿಮೆಯಾಗುತ್ತದೆ.
+ ಹಾನಿಕಾರಕ ಆಲ್ಟ್ರಾವಯಲೇಟ್ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸನ್
ಗ್ಲಾಸ್ ಧರಿಸಿ.
+ ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳನ್ನು ಸೂರ್ಯನಿಂದ ದೂರ ಇಡಬೇಕು.
+ ಮೋಡ ಮುಸುಕಿದ ವಾತಾವರಣದಲ್ಲೂ ಸೂರ್ಯನ ಕಿರಣಗಳು ಹಾನಿಕರವಾಗಿರುತ್ತದೆ. ಅವುಗಳ ಬಗ್ಗೆ ಎಚ್ಚರದಿಂದಿರಿ.
+ ಹಾಗೂ ಸೌತೆಕಾಯಿಯ ಪೀಸ್ ಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳುವುದು. ನಿಂಬೆರಸ-ಮೊಸರು ಅಥವಾ ಜೇನುತುಪ್ಪ ಬೆರೆಸಿ ಮುಖಕ್ಕೆ ಲೇಪಿಸಿ-10ನಿಮಿಷದ ಬಳಿಕ ಮುಖ ತೊಳೆದುಕೊಳ್ಳುವುದು. * ಎಳನೀರಿಗೆ ಒಂದು ಡ್ರಾಪ್ ನಿಂಬೆ ರಸವನ್ನು ಹಾಕಿ ಕುಡಿಯುವುದು. ಮಜ್ಜಿಗೆಗೆ ಸ್ವಲ್ಲ ಜೀರಿಗೆ ಪುಡಿ, ನಿಂಬೆ ರಸ, ಸ್ವಲ್ಪ ಉಪ್ಪುಹಾಕಿ ಕುಡಿಯುವುದರಿಂದಲೂ ಬಾಯಾರಿಕೆ ತಡೆಯಬಹುದು. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು, ಬೆಣ್ಣೆಹಣ್ಣು, ಮೂಸಂಬಿ, ಕಿತ್ತಲೆಹಣ್ಣುಗಳ ಜ್ಯೂಸ್ ಗಳನ್ನು ಹೆಚ್ಚು ಸೇವಿಸುವುದು.

+ ಊಟದ ಸಮಯದಲ್ಲಿ ಸೌತೆಕಾಯಿ, ಈರುಳ್ಳಿ ಪೀಸ್ ಗಳನ್ನು ಹೆಚ್ಚಾಗಿ ಸೇವಿಸುವುದು. ಊಟಕ್ಕೆ ಮೊಸರಿನ ಬದಲು ಮಜ್ಜಿಗೆಯನ್ನು ಉಪಯೋಗಿಸುವುದು ಉತ್ತಮ.

+ ಯಾವುದೇ ರೀತಿಯ ಸತ್ತ ಚರ್ಮವನ್ನು ಕಿತ್ತೊಗೆಯಿರಿ. ಯಾವುದೇ ಸತ್ತ ಚರ್ಮದ ಅಣುಗಳನ್ನು ತೆಗೆಯಲು ಪೊಮಿಸ ಸ್ಟೋನ್ ಉಪಯೋಗಿಸಿ. ಇನ್ಫೆಕ್ಷನ್ ಆಗದ0ತೆ ಶೇವ್ ಮಾಡುವುದಾಗಲಿ ಕಾರ್ನ್ ಅಥವಾ ಪಾಪ್ ಬ್ಲಿಸ್ಟರ್‌ಗಳನ್ನು ತು0ಡರಿಸಿ ತೆಗೆಯುವುದಾಗಲೀ ಮಾಡಬೇಡಿ. ಡೆಸ್‌ ಸ್ಕಿನ್‌ ತೆಗೆದ ನಂತರ ಕೊಬ್ಬರಿ ಎಣ್ಣೆಯಿಂದ ಚೆನ್ನಾಗಿ ಮಸಾಜ್‌ ಮಾಡಿ. ಇದರಿಂದ ಒಡೆದ ಹಿಮ್ಮಡಿ ಸರಿಯಾಗುತ್ತದೆ.

+ ಬಿಸಿಲಿನಲ್ಲಿ ಓಡಾಡಿ ಬಂದ ನಂತರ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿದರೆ , ದೇಹದ ಮತ್ತು ಚರ್ಮದ ತಾಪಮಾನ ಕುಗ್ಗುವುದರಿಂದ ತ್ವಚೆ ಕಪ್ಪಾಗುವುದನ್ನು ತಪ್ಪಿಸಬಹುದಾಗಿದೆ. ಇನ್ನು ಹೆಚ್ಚಾಗಿ ಬಿಸಿಲಿನಲ್ಲಿ ಇರುವವರು ಲೂಫಾ ಅಥವಾ ಬಾಡಿ ಸ್ಕ್ರಬರ್‌ ಬಳಸಿ ತ್ವಚೆಯ ಸತ್ತ ಜೀವಕೋಶಗಳನ್ನು ತೊಳೆದು ಹಾಕಿ ಮಾಯಿಶ್ಚರೈಸರ್‌ ನ ತೆಳು ಲೇಪನ ಮಾಡಿದರೆ ಉತ್ತಮ. ಸೂರ್ಯನ ಬೆಳಕಿಗೆ ಹೋಗುವ ಹದಿನೈದು ನಿಮಿಷಗಳ ಮುನ್ನ ಸನ್‌ ಸ್ಕ್ರೀನ್ ಮುಲಾಮು ಹಚ್ಚಿಕೊಂಡರೆ ಇದು ಸೂರ್ಯನ ಅತಿ ನೇರಳೆ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಇನ್ನು ಬೇಸಿಗೆಯಲ್ಲಿ ವಿಟಮಿನ್ ಗಳನ್ನು ಹೊಂದಿರುವ ಹಣ್ಣು ಹಂಪಲುಗಳನ್ನು ಸೇವಿಸಿದರೆ ದೇಹ ತಂಪಾಗಿರುತ್ತದೆ.

+ ಸನ್‌ಸ್ಕ್ರೀನ್‌ ಲೋಶನ್‌ಗಳಲ್ಲಿ ಹಲವಾರು ವಿಧಗಳಿವೆ. ದೇಹಕ್ಕೆ ಲೇಪಿಸಿಕೊಳ್ಳುವುದಕ್ಕಾಗಿ, ಮತ್ತು ಮುಖಕ್ಕೆ ಲೇಪಿಸಿಕೊಳ್ಳುವುದಕ್ಕಾಗಿ ಪ್ರತ್ಯೇಕ ಲೋಶನ್‌ಗಳು ಲಭ್ಯವಿದೆ. ಹಲವಾರು ವಿಧದ ಸನ್‌ಸ್ಕ್ರೀನ್‌ಗಳು ಸಿಗುತ್ತದೆ. ಭಾರತದ ಬಿಸಿಲಿನ ತಾಪಮಾನಕ್ಕೆ 30+ ಎಸ್‌ಪಿಎಫ್‌ (ಸನ್‌ ಪ್ರೋಟೆಕ್ಷನ್‌ ಫ್ಯಾಕ್ಟರ್‌ ) ನ ಸನ್‌ಸ್ಕ್ರೀನ್‌ ಸೂಕ್ತ. ಕೊಳ್ಳುವಾಗ ನಿಗಾ ಇರಲಿ. 30+ ಎಸ್‌ಪಿಎಫ್‌ ನ ಸನ್‌ಸ್ಕ್ರೀನ್‌ ಲೋಶನ್‌ನ್ನೇ ಖರೀದಿಸಿ, ಮಕ್ಕಳಿಗಾಗಿಯೇ ಪ್ರತ್ಯೇಕ ಸನ್‌ಸ್ಕ್ರೀನ್‌ ಬಳಸಿ ಎಂಬುದು ತಜ್ಞರು ಸಲಹೆ.

+ ಸನ್‌ಸ್ಕ್ರೀನ್ ಬಳಸಲು ಇಷ್ಟಪಡದವರು ಕನಿಷ್ಠ ಚರ್ಮಕ್ಕೆ ಕಠೋರ ಬಿಸಿಲು ತಗುಲದಂತೆಯಾದರೂ ನೋಡಿಕೊಳ್ಳಿ. ಬಿಸಿಲಿನಲ್ಲಿ ಹೋಗುವಾಗ ಪೂರ್ತಿ ಚರ್ಮ ಮುಚ್ಚುವಂತೆ ವಸ್ತ್ರ ಧರಿಸಿ. ಮುಖಕ್ಕೆ ಬಿಸಿಲು ತಾಗದಂತೆ ಹ್ಯಾಟ್‌ ಹಾಕಿ, ಸ್ಟಾಲ್‌ ಉಪಯೋಗಿಸಿ, ಬಿಸಿಲಿನಲ್ಲಿ ಚಲಿಸುವಾಗ ಕೊಡೆ ಬಳಸಿ ಸೂರ್ಯನ ಪ್ರಖರ ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಿ, ಬಿಸಿಲಿನಲ್ಲಿ ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ, ಪ್ರತಿ 2 ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್‌ ಲೋಶನ್‌ ಚರ್ಮಗಳಿಗೆ ಹಚ್ಚಿ. ಮುಂಬರುವ ಬೇಸಿಗೆಗಾಗಿ ಸುರಕ್ಷತಾ ಕ್ರಮ ಕೈಗೊಂಡು, ಚರ್ಮವನ್ನು ರಕ್ಷಿಸಿಕೊಳ್ಳಿ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *