ನೋವಿಗೆ ಮೊದಲ ಔಷಧಿ ಅಮ್ಮ ಅನ್ನೋ ಕೂಗು : ಹ್ಯಾಪಿ ಮದರ್ಸ್ ಡೇ..

ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದವಳು ನೀನಮ್ಮ! ಈ ಜಗತ್ತನ್ನು ಪರಿಚಯಿಸಿದವಳು ನಮ್ಮಮ್ಮ ! ಆಚಾರ-ವಿಚಾರ ಸಂಸ್ಕಾರಗಳನ್ನು ನೀಡಿ ವಿಶ್ವ ಮಾನವನನ್ನಾಗಿ ಮಾಡಿದವಳು ನೀನೇ ಅಮ್ಮ. ಈ ಜಗತ್ತಿನಲ್ಲಿ ಎಲ್ಲಾ ವಸ್ತುಗಳನ್ನು ಖರೀದಿಸಬಹುದು ಹೆತ್ತ ತಾಯಿಯನ್ನು ಖರೀದಿಸಲು ಆದೀತೆ?
ತಾಯಿಗಿಂತ ಬಂಧುವಿಲ್ಲ , ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತು ಎಷ್ಟು ಸತ್ಯ. ಸಾವಿರ ಬಾರಿ ದೇವರನ್ನು ಕರೆದರೂ ಬಾರದೆ ಹೋಗಬಹುದು ಒಂದು ಸಲ ಅಮ್ಮಾ ಎಂದು ಕರೆದೊಡನೆ ಪ್ರತ್ಯಕ್ಷಳಾಗುವಳು ಮಹಾ ಮಾತೆ.

ಅಮ್ಮಾ ಆ ಸನ್ನಿವೇಶ ಇನ್ನು ನೆನಪಿದೆ. ನಾನು ಆಗ ಇನ್ನು ಚಿಕ್ಕವನಿದ್ದಾಗ ಗೆಳೆಯರೊಂದಿಗೆ ಗಿಲ್ಲಿ-ದಾಂಡು ಆಟವಾಡುತಿದ್ದಾಗ ಆಕಸ್ಮಿಕವಾಗಿ ಗೆಳೆಯನೊಬ್ಬನಿಗೆ ತಲೆ ಒಡೆದು ರಕ್ತ ಬರುತ್ತಿತ್ತು. ಇದನ್ನು ಕಂಡ ಗೆಳೆಯನ ತಾಯಿ ಓಡಿ ಬಂದು ನನ್ನನ್ನು ಥಳಿಸುವಾಗ ನೀ ಬಂದು ನನ್ನ ಸರಗಿನಲ್ಲಿ ಗುಬ್ಬಚ್ಚಿಯ ಹಾಗೆ ಬಚ್ಚಿಟ್ಟುಕೊಂಡೆ. ರಕ್ಷಾ ಕವಚವಾಗಿ ನಿಂತುಕೊಂಡೆ. ನನ್ನ ಪರವಾಗಿ ವಾದಕ್ಕೆ ಇಳಿದೆ. ನಾನು ಅಳುತ್ತಿರುವಾಗ ಸಮಾಧಾನ ಮಾಡಿ ಇನ್ನೊಮ್ಮೆ ನನ್ನ ಕಂದನ ಮೇಲೆ ಕೈ ಮಾಡಿದರೆ ಸರಿ ಇರಲ್ಲ ನೋಡು ಎಂದು ಎಚ್ಚರಿಕೆ ಕೊಟ್ಟು ಮನೆಗೆ ಕರೆ ತಂದೆ.  ತಾಯಿ ದೇವರ ಪ್ರತಿ ರೂಪ ತನ್ನ ಮಗುವೇ ಅವಳಿಗೆ ಸರ್ವಸ್ವ, ಇವಳೇ ದೈವೀ ಶಕ್ತಿ, ಪುಣ್ಯಕೋಟಿ, ಕಾಮಧೇನು. ಅಮ್ಮ ನಿನ್ನ ಕಂದನ ವಂದನೆಗಳು. ಅಮ್ಮ ನೀನು ಎಂದೆಂದಿಗೂ ನಗುತ್ತಿರು.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *