ಪ್ರತಿದಿನ ಧ್ಯಾನ ಏಕೆ ಮಾಡಬೇಕು..?

ನಾವು ಆತಂಕವೆಂದರೂ ಅಥವಾ ಎದುರು ನೋಡುವಿಕೆಂಯೆಂದರೂ ಅದೆಲ್ಲವೂ ಮೂಲಭೂತವಾಗಿ ಭಯವೆ. ಭಯ ಹೇಗೆ ಏಳುತ್ತದೆ ಮತ್ತು ಅದರ ಮೂಲ ಎಲ್ಲಿದೆ? ಜಗತ್ತನ್ನು ಅವಲೋಕಿಸಿದಾಗ ಇದರ ಬಗ್ಗೆ ಸ್ವಲ್ಪ ಸೂಚಿಗಳು ಸಿಗಬಹುದು, ಭಯವು ಏನನ್ನು ಸೂಚಿಸುತ್ತದೆ? ಭಯದ ಒಂದು ಸಾಮಾನ್ಯ ಕಾರಣವೆಂದರೆ ಆಶಾಭಂಗತನ. ಉನ್ನತಕ್ಕಾಗಿ ಬಯಸುತ್ತೇವೆ ಮತ್ತು ಅದನ್ನು ಸಾಧಿಸಲಾಗದಾಗ ಆಶಾಭಂಗತನ ಉಂಟಾಗುತ್ತದೆ ಮತ್ತು ಅದರ ಪರಿಣಾಮದಿಂದ ಭಯವುಂಟಾಗುತ್ತದೆ.

ಭಯದ ಮೂರನೆಯ ಕಾರಣವೆಂದರೆ ಆತಂಕ, ಕೋಪ, ದ್ವೇಷ ಅಥವಾ ವಯಸ್ಸು ಈ ಭಾವನೆಗಳು ಅಥವಾ ಪರಿಸ್ಥಿತಿಗಳು, ದುಷ್ಪರಿಣಾಮಗಳ, ಸೇಡಿನ, ಅನಾರೋಗ್ಯದ ಭಯವನ್ನು ಉಂಟು ಮಾಡುತ್ತವೆ. ವಯಸ್ಸಾದಂತೆ ಭಯವೂ ಬೆಳೆಯುತ್ತದೆ. ಭವಿಷ್ಯದ ಭಯ ಉಂಟಾಗುತ್ತದೆ. ಭಯದ ನಾಲ್ಕನೆಯ ಕಾರಣವೆಂದರೆ ಚಡಪಡಿಕೆಯ ಅಂಶ. ಜಗತ್ತು ಮತ್ತು ಅದರ ನಿವಾಸಿಗಳು ಸದಾ ವಿಷಯಗಳನ್ನು ಶೀಘ್ರವಾಗಿ ಮಾಡಿ, ನಂತರ ನಿಧಾನವಾಗಿ ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಿರುವಂತೆಯೇ ತೋರುತ್ತದೆ. ಈ ರೀತಿಯ ಹುಚ್ಚು ಆವಸರದಿಂದ ತಪ್ಪುಗಳು ಮತ್ತು ಸೋಲುಗಳು ಉಂಟಾಗುತ್ತದೆ ಮತ್ತು ಸಹಜವಾಗಿಯೇ ಚಡಪಡಿಕೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಭಯವು ತನ್ನ ಗರ್ಭದಲ್ಲಿ ಆಶಾಭಂಗತನವನ್ನು ಮೋಹವನ್ನು, ಆತಂಕ ಮತ್ತು ಚಡಪಡಿಕೆಯನ್ನು ಹೊಂದಿದೆ. ಇದರ ಬಗ್ಗೆ ಸುದೀರ್ಘವಾಗಿ ಆಲೋಚಿಸಿದಾಗ ಇದರ ಪರಿಹಾರವನ್ನು ಮಾಡುವ ರೀತಿಯಲ್ಲಿ ವಿವೇಚನೆಯಿರುವಂತೆಯೂ ಇರುವುದಿಲ್ಲ ಅಥವಾ ಸಾಮಾನ್ಯವಾಗಿರುವಂತೆಯೂ ಇರುವುದಿಲ್ಲ. ನಮ್ಮ ಮಹತ್ವಾಕಾಂಕ್ಷೆಗಳು ಭಯವನ್ನು ಆಹ್ವಾನಿಸುತ್ತವೆ. ನಮ್ಮ ಕಾರ್ಯಕ್ರಮಗಳು ಭಯವನ್ನು ಪೋಷಿಸುತ್ತವೆ ಮತ್ತು ನಮ್ಮ ಆಲೋಚನೆಗಳು ಭಯವನ್ನೂ ಉತ್ಪಾದಿಸುತ್ತವೆ.

ಅನೇಕ ವಿಷಯಗಳನ್ನು ನಾವು ತಳ್ಳಿ ಹಾಕುತ್ತೇವೆ. ಆದರೆ ಕೊನೆಗೆ ಭಯದ ಜಾಲದೊಳಗೆ ಸಿಲುಕಿಕೊಳ್ಳುತ್ತೇವೆ. ಈ ತೀವ್ರವಾದ ಖಿನ್ನತೆಯಿಂದ ಕೂಡಿದ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವೇ ಇಲ್ಲ. ನಮ್ಮ ಶಾಸ್ತ್ರಗಳು ಇದನ್ನು ಅನೇಕ ಸಲ ಹೇಳಿವೆ. ಭಾರತೀಯ ಪರಂಪರೆಯು ಮಂತ್ರ ಎಂಬ ವಿಷಯವನ್ನು ಪ್ರತಿಪಾದಿಸುತ್ತದೆ. ಮತ್ತು ಈ ವಿಷಯ ಪಾಶ್ಚಿಮಾತ್ಯ ದೇಶಗಳ ಅನೇಕರಿಗೆ ಕೇಳರಿಯದ ವಿಷಯವಾಗಿದೆ. ಮಂತ್ರ ಎಂದರೇನು? ಸಂಸ್ಕøತದಲ್ಲಿ ಮಂತ್ರ ಎಂದರೆ ಯಾವುದನ್ನೂ ಪದೇ ಪದೇ ಉಚ್ಚರಿಸಿದಾಗ ಅದರ ಕಂಪನಗಳು ಭಯವನ್ನು ನಿವಾರಿಸುತ್ತದೋ ಅದೇ ಮಂತ್ರ. ಈಗ ಘನವಾದುದನ್ನು ಸಂಧಿಸಿದ್ದೇವೆ. ಭಯದಿಂದ ಹೊರಬರಲು ಒಂದು ದಾರಿ ಇದೆ ಎಂದ ಮೇಲೆ, ಅದನ್ನೇಕೆ ಹಿಡಿದುಕೊಳ್ಳಬಾರದು?

ಆದರೆ ಸ್ವಲ್ವ ತಾಳಿ…! ಮಂತ್ರಕ್ಕಾಗಿ ಒಂದು ದಾರಿ ಬೇಕು. ಉತ್ತಮ ಫಲಿತಾಂಶಕ್ಕಾಗಿ ಅದನ್ನು ಅನುಸರಿಸಬೇಕು. ಆ ದಾರಿ ಯಾವುದು? ಎಂದು ನೀವು ಕೇಳಬಹುದು. ಅದನ್ನು ಧ್ಯಾನ ಎಂದು ಕರೆಯುತ್ತಾರೆ. ಗುರುಗಳು ನಿಮಗೆ ನೀಡಿರುವ ಮಂತ್ರದೊಡನೆ ಧ್ಯಾನ ಮಾಡಿ. ಆಗ ನೀವು ಅರ್ಧ ಯುದ್ಧವನ್ನು ಗೆದ್ದಂತೆ. ಆದರೆ ಇದನ್ನು ಒಮ್ಮೆ ಮಾತ್ರ ಮಾಡಿ ಮುಗಿಸಿಬಿಡುವಂತಹ ಪರಿಹಾರ ಎಂದು ಪರಿಗಣಿಸಬೇಡಿ. ಏಕೆಂದರೆ ಭಯವೆಂದರೆ ಒಂದು ಕಾಲಕ್ಕೆ ಮಾತ್ರ ಸೀಮಿತವಾಗಿರುವಂತಹ ಕಾಯಿಲೆ ಅಲ್ಲ.

ಧ್ಯಾನದ ನಿರಂತರವಾದ, ಎಡೆಬಿಡದ ಅಭ್ಯಾಸದಿಂದ ನಿಮ್ಮ ಮನಸ್ಸಿನಲ್ಲಿ ಪ್ರಶಾಂತತೆ ಉಂಟಾಗುತ್ತದೆ ಮತ್ತು ಹೃದಯದಲ್ಲಿ ವಿಶ್ವಾಸ ಮೂಡುತ್ತದೆ. ಇಲ್ಲಿಯವರೆಗೂ ಒಳ್ಳೆಯದು, ಆದರೆ ಅದಕ್ಕೆ ತನ್ನದೇ ಆದ ಸೀಮಿತತೆಗಳಿವೆ. ಸೋಲಿನ ಭಯವನ್ನು, ಭವಿಷ್ಯದ ಭಯವನ್ನು ಧ್ಯಾನದಿಂದ ಮತ್ತು ಮಂತ್ರದಿಂದ ಮಾತ್ರ ದಾಟಿ ಬರಲು ಸಾಧ್ಯವಿಲ್ಲ. ವರ್ತಮಾನದ ಕ್ಷಣದಲ್ಲಿ ಅದು ಸಹಾಯ ಮಾಡುವಂತೆ ಕಂಡರೂ ಗತ ಮತ್ತು ಭವಿಷ್ಯ ಅದರ ಹಿಡಿತದಲ್ಲಿ ಇಲ್ಲವೇನೋ ಅನ್ನಿಸುತ್ತದೆ. ಹಾಗಿದ್ದರೆ ಏನು ಮಾಡಬೇಕು? ಗತವನ್ನು ಅಥವಾ ಭವಿಷ್ಯವನ್ನು ಮೀರುವಂತಹ ಯಾವ ಶಕ್ತಿ ಇದೆ? ಗತದ ಪಶ್ಚಾತ್ತಾಪಗಳಿಂದ ಮತ್ತು ಭವಿಷ್ಯದ ಆತಂಕಗಳಿಂದ ನಮ್ಮನ್ನು ಹೇಗೆ ಬಿಡುಗಡೆಗೊಳಿಸಿಕೊಳ್ಳುವುದು? ನಮ್ಮ ಪ್ರಾಚೀನ ಗ್ರಂಥಗಳು ಮತ್ತೊಮ್ಮೆ ಸಿದ್ಧವಾದ ಮತ್ತು ನಂಬಲರ್ಹ ವಾದ ಪರಿಹಾರ ವನ್ನು ನೀಡುತ್ತವೆ. ನಿಮ್ಮ ನಂಬಿಕೆಗಳ ಬಗ್ಗೆ ದೈವದಲ್ಲಿ ಪೂರ್ಣ ವಿಶ್ವಾಸವಿಡಿ. ನಿಮ್ಮ ಆಯ್ಕೆಯ ಗುರುಗಳಿಗೆ ಪೂರ್ಣವಾಗಿ ಶರಣಾಗಿ ಎನ್ನುತ್ತವೆ. ಇದರಿಂದ ನಮ್ಮಲ್ಲಿ ಒಂದು ನಾಡಿ ಮಿಡಿದು ವಿಷಯಗಳನ್ನು ಅವರ ಕೈಗಳಿಗೆ ಪೂರ್ಣವಾಗಿಟ್ಟು ವಿಶ್ರಮಿಸುತ್ತೇವೆ.

ಎಲ್ಲರ ಯಶಸ್ಸಿಗೂ ಇಲ್ಲಿ ರಹಸ್ಯವಡಗಿದೆ. ಮಾನವತೆಯು ಇದನ್ನು ಮೊದಲು ಪ್ರಯತ್ನಿಸಿದೆ ಮತ್ತು ನೀವೂ ಸಹ ಇದನ್ನು ವಿಶ್ವಾಸದಿಂದ ಮತ್ತು ಆದರದಿಂದ ಏಕೆ ಅನುಸರಿಸಬಾರದು? ಜೀವನವನ್ನು ಕೆಲವೊಮ್ಮೆ ಕ್ರಿಕೆಟ್‍ಗೆ ಹೋಲಿಸಲಾಗುತ್ತದೆ ಮತ್ತು ಅದನ್ನು ಆಡಿ ಚೆಂಡನ್ನು ಜೋರಾಗಿ ಹೊಡೆಯಬೇಕು. ದೈವವು ಮತ್ತು ಗುರುವು ಅದನ್ನು ನಿಭಾಯಿಸಲಿ ಎಂದು ನಿಶ್ಚಯವಾಗಿರಿ. ಅದು ನಿಮ್ಮ ಬಳಿಗೆ ಬಂದು ನೀವು ಈ ಜಗತ್ತಿನಿಂದ ತೆರಳುವವರೆಗೂ ಕ್ರಿಯಾಶೀಲರಾಗಬೇಕಾಗಿರುವ ತನಕ ವಿಶ್ರಮಿಸಿ. ಲಾಭವಿದ್ದರೆ ಅದನ್ನು ಆನಂದಿಸಿ ಮತ್ತು ನೋವಿದ್ದರೆ ಅದನ್ನು ತಡೆದುಕೊಳ್ಳಿ. ನಿಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ಮಾಡಿ. ಉಳಿದದ್ದನ್ನು ಇತಿಹಾಸವು ನೋಡಿಕೊಳ್ಳುತ್ತದೆ.

( ಮತ್ತಷ್ಟು ಅಪ್ಡೇಟ್ಸ್ ಪಡೆಯಲು ತಪ್ಪದೆ ನಮ್ಮ ಫೇಸ್ಬುಕ್ ಪೇಜ್ My Health My Lifestyle ಲೈಕ್ ಮಾಡಿ )

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *