ಭಯ ನಿಮ್ಮನ್ನು ಕಾಡುತ್ತಿದೆಯಾ..? ಹಾಗಾದರೆ ಇಲ್ಲಿವೆ ನೋಡಿ ಕೆಲವು ಸಲಹೆಗಳು

ಆಧುನಿಕ ಗಡಿಬಿಡಿ ಜೀವನ ಶೈಲಿಯು ನಮ್ಮ ಮನಸ್ಸಿನ ಮೆಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿದೆ. ಅದರಲ್ಲಿ ಭಯವು ಪ್ರಮುಖವಾಗಿದೆ. ಭಯದ ಜೊತೆಗೆ ಉದ್ವೇಗ ಹೆಚ್ಚುತ್ತದೆ. ಇವೆರಡೂ ಮಾನವನ ಸಹಜ ಗುಣಗಳಾದರೂ ಇತ್ತೀಚಿನ ದಿನಮಾನಗಳಲ್ಲಿ ಇವು ನಮ್ಮ ನಿಕಟ ಸಂಗಾತಿಗಳಾಗಿವೆ. ಮನಸ್ಸಿನಲ್ಲಿ ಭಯ ಮೂಡಿತೆಂದರೆ ಅದರಿಂದ ಹೊರಬರುವುದು ಅಷ್ಟು ಸುಲಭದ ಮಾತಲ್ಲ. ಭಯ ಕೇವಲ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಕಾಡುವ ಮಾನಸಿಕ ಸಮಸ್ಯೆ. ಭಯ ಅಂದರೇನು, ಅದು ಏಕೆ ಉಂಟಾಗುತ್ತದೆ, ಅದನ್ನು ಹೇಗೆ ನಿವಾರಿಸುವುದು ಎಂಬ ಪ್ರಶ್ನೆಗಳು ನಮ್ಮಲ್ಲಿ ಅದೆಷ್ಟೋ ಬಾರಿ ಸುಳಿಯುತ್ತವೆ.
ಭಯ ಅಂದರೆ ಏನು ಅಂತ ನಿರ್ದಿಷ್ಟವಾಗಿ ಹೇಳೋಕೆ ಆಗಲ್ಲ. ಆದರೆ ಅದನ್ನು ಒಂದಿಲ್ಲೊಂದು ಸಂದರ್ಭದಲ್ಲಿ ನಾವು ಅನುಭವಿಸುತ್ತೇವೆ. ಇದು ಮನಸ್ಸಿನ ನಕಾರಾತ್ಮಕ ಭಾವನೆ.

ಭಯ ಎಂದರೇನು?

ನಮ್ಮ ಶಕ್ತಿಗೆ ಮೀರಿದ ಅಸಂಭವನೀಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಿಕೊಳ್ಳತೊಡುಗತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನೇ ತುಳಿಯುತ್ತವೆ.
ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಕಾಲ್ಪನಿಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ ಭಾವುಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ

ಭಯ ಉಂಟಾಗೋದು ಯಾವಾಗ ?

ನಾಳೆ ಏನಾಗುತ್ತದೆಯೋ ಏನೊ ಎಂಬ ಚಿಂತೆಯು ಭಯವಾಗಿ ಪರಿವರ್ತನೆಯಾಗುತ್ತದೆ. ಯಾವುದೇ ವಿಷಯದ ಬಗೆಗೆ ನಿರಾಶಾದಾಯಕವಾಗಿ ಆಲೋಚಿಸುವುದು, ಸುಮ್ಮನೆ ಏನನ್ನೋ ಇಲ್ಲದ್ದನ್ನು ಊಹಿಸಿಕೊಳ್ಳುವುದು, ಹಿಂದೆ ನಡೆದು ಹೋದ ಕಹಿ ಘಟನೆಗಳನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವುದು, ನಾನೆಲ್ಲಿ ಸೋತು ಹೋಗುತ್ತೇನೊ ಎಂಬ ಸೋಲಿನ ಆತಂಕ, ನನಗಾರೂ ಇಲ್ಲ ನಾನು ಏಕಾಂಗಿ ಎಂಬ ಭಾವ, ಪರರು ನನಗಿಂತ ಮುಂದೆ ಹೋಗುತ್ತಿದ್ದಾರೆ ಎಂಬ ಮತ್ಸರ ಭಾವ ನಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತವೆ. ನಾವು ಅಪಾಯದಲ್ಲಿದ್ದಾಗ ನಮ್ಮ ಜೀವನದ ಬಗ್ಗೆ ಹೆದರಿಕೆಯಾಗುತ್ತದೆ.

ಯಾವುದಕ್ಕೆ ಭಯಗೊಳ್ಳುತ್ತೆವೆ ?

ಚಿಕ್ಕ ಪುಟ್ಟ ವಿಷಯಗಳಿಗೂ ಮನಸ್ಸು ಭಯಗೊಳ್ಳುತ್ತದೆ. ಇದು ಒಂದು ತೆರನಾದ ಮಾನಸಿಕ ಸಂಘರ್ಷ. ಇದಕ್ಕೆ ಫೆÇೀಬಿಯಾ ಅಂತಲೂ ಕರೆಯುತ್ತಾರೆ. ಕೆಲವರಿಗೆ ಕಾಡುಪ್ರಾಣಿಗಳೆಂದರೆ ಭಯ. ಇನ್ನೂ ಕೆಲವರಿಗೆ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಕಂಡರೂ ಭಯ. ಮಳೆ ಗುಡುಗು ಮಿಂಚಿಗೂ ಹೆದರುತ್ತಾರೆ. ವಿಚಿತ್ರೆಂದರೆ ಕೆಲವರು ಜನರನ್ನು ಕಂಡರೆ ಕಾಡು ಪ್ರಾಣಿ ನೋಡಿದಂತೆ ಭಯಗೊಳುತ್ತಾರೆ. ಆಹಾರದ ಭಯ, ಎತ್ತರ ಜಾಗದ ಭಯ, ಬಸ್ಸಿನಲ್ಲಿ, ರೈಲಿನಲ್ಲಿ, ವಿಮಾನದಲ್ಲಿ ಪ್ರಯಾಣ ಮಾಡುವುದೆಂರೆ ಭಯ. ಇನ್ನು ಕೆಲವರು ನೀರು ಕಂಡರೆ ಹೆದರುತ್ತಾರೆ. ಅಂದರೆ ಭಯ ಎಲ್ಲ ಹಂತಗಳಲ್ಲಿ ಇದ್ದೇ ಇರುತ್ತದೆ. ಒಬ್ಬೊಬ್ಬರಿಗೆ ಒಂದೊಂದನ್ನು ಕಂಡರೆ ಭಯ. ಆಫೀಸಿಗೆ ಹೋದ ಗಂಡ, ಸ್ಕೂಲಿಗೆ ಹೋದ ಮಕ್ಕಳು ಮನೆಗೆ ಸರಿಯಾದ ಸಮಯಕ್ಕೆ ಮರಳಿ ಬರದಿದ್ದರೂ ಕೆಲ ಮಹಿಳೆಯರು ಭಯಗೊಳ್ಳುವ ಪ್ರಸಂಗಗಳಿವೆ. ನಾವು ಧೈರ್ಯವಂತರು ಎಂದು ಎಷ್ಟೋ ಜಂಭ ಕೊಚ್ಚಿಕೊಂಡರೂ ಭಯಗೊಳ್ಳುತ್ತೇವೆ. ಎಲ್ಲಕ್ಕಿಂತ ದೊಡ್ಡ ಭಯ ಎಂದರೆ ಸಾವಿನ ಭಯ. ಈ ಭಯ ನಮ್ಮ ಅಸ್ತಿತ್ವಕ್ಕೆ ಸಂಭಧಿಸಿದ್ದು. ಎಲ್ಲಿ ನಮ್ಮ ಪ್ರಾಣಕ್ಕೆ ಸಂಚಕಾರ ಬರುವುದೋ ಎಂದು ಎಷ್ಟೋ ಬಾರಿ ಭಯಗೊಳ್ಳುತ್ತೇವೆ.

ಭಯದ ಲಕ್ಷಣಗಳೇನು ?

ಭಯವುಂಟಾದಾಗ ಮನಸು ಫುಲ್‍ಬ್ಲ್ಯಾಂಕ್ ಆಗಿರುತ್ತೆ. ಯಾವುದೇ ವಿಚಾರಗಳು, ಆಲೋಚನೆಗಳು ಹೊಳೆಯೊದಿಲ್ಲ. ಮೈಯೆಲ್ಲ ಬೆವರುತ್ತೆ. ಕೈ ಕಾಲುಗಳಲ್ಲಿ ಶಕ್ತಿಯಿಲ್ಲದಂತೆ ಭಾಸವಾಗುತ್ತೆ. ಮಾತೇ ಹೊರಡೊದಿಲ್ಲ. ಹೊರಟರೂ ತೊದಲುತ್ತೆ. ಭಯದ ವಿಚಾರವನ್ನು ಹೊರತುಪಡಿಸಿ ಬೇರೆ ಯಾವ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರವು. ವಿಚಾರಗಳೆಲ್ಲ ಅಸ್ತವ್ಯಸ್ತವಾಗುತ್ತವೆ. ಅಂದುಕೊಂಡ ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಬೆಚ್ಚಿ ಬೀಳುವುದು ಅಥವಾ ಇದಕ್ಕೆ ತದ್ವಿರುದ್ಧವಾಗಿ ಗಂಭೀರ ವಿಷಯಗಳಿಗೂ ಪ್ರತಿಕ್ರಿಯಿಸದೆ ಮೌನವಾಗಿರುವುದು. ಇವೆಲ್ಲ ಭಯದ ಮುಖ್ಯ ಲಕ್ಷಣಗಳು.

ಭಯ ತಡೆಯೋಕೆ ಏನು ಉಪಾಯ : 

ಪ್ರತಿಯೊಂದು ಭಯದಿಂದಲೂ ನಾವು ಮುಕ್ತರಾಗಬಹುದು. ಭಯ ತಡೆಯುವ ಉಪಾಯಗಳು ಕಠಿಣವೆನಿಸಿದರೂ ಅಸಾಧ್ಯವೇನಲ್ಲ. ನಾವು ಭಯಗೊಳ್ಳುತ್ತೇವೆ ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳುವುದು.ಯಾವ ವಿಷಯದ ಬಗ್ಗೆ ಭಯವಿದೆ ಎಂಬುನ್ನು ತಿಳಿದು ಅದನ್ನು ಮುಕ್ತವಾಗಿ ಆತ್ಮೀಯರೊಂದಿಗೆ ಚರ್ಚಿಸುವುದು. ಯಾವಾಗಲೂ ಕೆಲಸದಲ್ಲಿ ತೊಡಗಿಸಿಕೊಳ್ಳುವುದು. ಮೂಢನಂಬಿಕೆ ಮತ್ತು ಅಪಶಕುನಗಳನ್ನು ನಂಬದೆ ಇರುವುದು. ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುವುದು. ಪರಿಸ್ಥಿತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳುವುದು ಅನುಮಾನಕ್ಕೆ ಆಸ್ಪದ ಕೊಡದಿರುವುದು. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ನಮಗೆ ಎಚ್ಚರಿಕೆಯಂತೆ ವರ್ತಿಸುತ್ತದೆ ಎಂದು ತಿಳಿದುಕೊಳ್ಳುವುದು. ಭಯ ನಿವಾರಿಸುವುದಕ್ಕೆ ಪ್ರಯತ್ನಿಸಿ ತಜ್ಞ ವೈಜ್ಞರನ್ನು ಭೇಟಿ ಮಾಡುವುದು. ನಿಜವಾದ ಧೈರ್ಯವನ್ನು ಮನಸ್ಸಿಗೆ ತುಂಬಿಕೊಳ್ಳುವುದು ಆಶಾವಾದಿಯಾಗಿರುವುದು. ನಾನು ಧೈರ್ಯವಂತ ಎಂದು ನಾವೇ ಹೇಳಿಕೊಳ್ಳುವುದು-

ಅಂದರೆ ಸೆಲ್ಫ್ ಹಿಪ್ನಾಟಿಸಂ ಮಾಡಿಕೊಳ್ಳುವುದು. :

ವಿವೇಕಾನಂದರ ವಾಣಿಯಂತೆ- ನಿಮ್ಮಿಂದ ನೀವೇ ಉದ್ಧಾರವಾಗಬೇಕು. ನಿನಗೆ ಯಾರೂ ಸಹಾಯ ಮಾಡಲಾರರು. ನಿನಗೆ ನೀನೇ ದೊಡ್ಡ ಶತ್ರು. ನಿನಗೆ ನೀನೇ ದೊಡ್ಡ ಮಿತ್ರ. ಹಾಗಾದರೆ ನೀನು ಆತ್ಮವನ್ನು ದೃಢವಾಗಿ ಹಿಡಿದುಕೊ. ಎದ್ದು ನಿಲ್ಲು. ಅಂಜಬೇಕಾಗಿಲ್ಲ. ನೀನು ಜಗತ್ತನ್ನೇ ಅಲ್ಲಾಡಿಸಲು ಸಮರ್ಥನಾಗುವೆ. ಶಕ್ತಿಯ ರಹಸ್ಯ ವ್ಯಕ್ತಿ ಮತ್ತು ಆತನ ಜೀವನವೇ ಹೊರತು ಮತ್ತಾವುದೂ ಅಲ್ಲವೆಂಬುವದನ್ನು ನೆನಪಿನಲ್ಲಿಡಿ.  ಸ್ವಾಮಿ ವಿವೇಕಾನಂದರ ಈ ವಿವೇಕಯುತ ವಾಣಿಯನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತ ಕೇವಲ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡದೆ ಮಾನಸಿಕ ಆರೋಗ್ಯದ ಬಗ್ಗೆ ಗಮನವಹಿಸಿ. ಆಗಾಗ ತಜ್ಞ ವೈದ್ಯರನ್ನು ಭೇಟಿಯಾಗಿ ನಮ್ಮ ವರ್ತನೆಯಲ್ಲಾದ ಬದಲಾವಣೆಯ ಕುರಿತು ಚರ್ಚಿಸಿ, ಅವರ ಸಲಹೆಗಳನ್ನು ಪಾಲಿಸಿದರೆ, ಭಯ ಮಂಗಮಾಯವಾಗುವುದು ಖಚಿತ.

ಬಹುವಿಧ ದೃಷ್ಟಿ ಸಮಸ್ಯೆಗೆ ಪರಿಹಾರ : 

ಯಾವುದೇ ರೀತಿಯ ದೃಷ್ಟಿ ಸಮಸ್ಯೆ ಇದ್ದರೆ ಮನುಷ್ಯರು ಬಹಳ ತೊಂದರೆ ಪಡಬೇಕಾಗುತ್ತದೆ. ಅಂತಹುದರಲ್ಲಿ ಬಹುವಿಧದ ಸಮಸ್ಯೆಗಳಿದ್ದರೆ…? ಊಹಿಸಿಕೊಳ್ಳುವುದೂ ಕಷ್ಟ ತೀವ್ರ ರೀತಿಯ ತೊಂದರೆಯಾಗುವುದರಲ್ಲಿ ಸಂಶಯವೇ ಇಲ್ಲ….  ಹೀಗೆ ಬಹು ಹಂತದ ದೃಷ್ಟಿ ಸಮಸ್ಯೆಗಳಿಂದ ಬಳಲುತ್ತಿದ್ದ ಯಮೆನ್ ದೇಶದ 75ವರ್ಷದ ವೃದ್ಧರೊಬ್ಬರನ್ನು ಬೆಂಗಳೂರಿನ ಡಾ.ಅಗರ್‍ವಾಲ್ ಐ ಹಾಸ್ಪಿಟಲ್‍ನ ವೈದ್ಯರು ಒಂದೇ ಒಂದು ಚಿಕಿತ್ಸೆಯಿಂದ ಸಂಪೂರ್ಣ ಗುಣಪಡಿಸಿ ಸಾಧನೆ ಮಾಡಿದ್ದಾರೆ.

ದೃಷ್ಟಿಗೆ ಸಂಬಂಧಿಸಿದಂತೆ ಒಂದು ಸಮಸ್ಯೆಯಿಂದ ಬಳಲುತ್ತಿದ್ದರೆ ಕಣ್ಣು ಒಣಗಲಾರಂಭಿಸುತ್ತದೆ. ಒಂದು ವೇಳೆ ಬಹುಹಂತದ ದೃಷ್ಟಿ ಸಮಸ್ಯೆಗಳು ಇದ್ದರೆ ಏನಾಗಬಹುದು ಎಂದು ನೆನಪಿಸಿಕೊಂಡರೆ ಮೈ ಜುಂ ಎನ್ನುತ್ತದೆ. ಖಾಸಿಂ ಅಬ್ದುಲ್‍ಬಾರಿ ಅಬ್ದುಲ್ ಕರೀಂ ಅವರು ಯಮೆನ್‍ನಿಂದ ಬಂದಿದ್ದರು, ಅವರಿಗೆ ಕಣ್ಣಿನ ಪ್ರಾಕೃತಿಕ ಅಕ್ಷಿಪಟಲಕ್ಕೆ ಧಕ್ಕೆಯಾಗಿತ್ತು. ಐರಿಸ್‍ಗೂ ಕೂಡಾ ಧಕ್ಕೆಯಾಗಿತ್ತು. ಅವರು ಕ್ಯಾಟರಾಕ್ಟ್, ಗ್ಲಾಕೋಮಾದಿಂದ ಬಳಲುತ್ತಿರುವುದು ತಪಾಸಣೆಯಿಂದ ಕಂಡುಬಂದಿತ್ತು.

ಖಾಸಿಂ ಅಬ್ದುಲ್‍ಬಾರಿ ಕರೀಂ ಅವರಿಗೆ 12 ತಿಂಗಳ ಹಿಂದೆ ಅವರ ಎಡಕಣ್ಣಿನಲ್ಲಿ ಕಲ್ಲಿನ ಕಿಡಿ ಹಾರಿ ಸಮಸ್ಯೆ ಉಂಟಾಗಿತ್ತು. ಅವರು ಯೆಮೆನ್‍ನಲ್ಲಿ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಲ್ಲಿ ಜನ್ಮತಹಃ ಇದ್ದ ಅಕ್ಷಿಪಟಲಕ್ಕೆ ಧಕ್ಕೆಯಾಗಿದೆ ಎಂಬುದು ತಿಳಿದುಬಂದಿದೆ. ಅವರಿಗೆ ಕ್ಯಾಟರಾಕ್ಟ್ ಸಮಸ್ಯೆಯೂ ಇರುವುದು ತಪಾಸಣೆಯಲ್ಲಿ ಗೊತ್ತಾಗಿದೆ. ಈ ಪೆಟ್ಟಿನ ಪರಿಣಾಮದಿಂದ ಅವರ ಕಣ್ಣಿನಲ್ಲಿ ಗ್ಲಾಕೋಮಾ ಸಮಸ್ಯೆ ಉಲ್ಬಣವಾಗಿದೆ. (ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಬೀಳುವುದು). ಗ್ಲಾಕೋಮಾಗೆ ಅವರು ಚಿಕಿತ್ಸೆ ಪಡೆದುಕೊಂಡರೂ ಅವರ ಎಡಗಣಿಗೆ ಆಗಿದ್ದ ಪೆಟ್ಟು ಮತ್ತು ಕ್ಯಾಟರಾಕ್ಟ್ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಗಲಿಲ್ಲ. ಕಾಸೀಂ ಅವರು ಹಂತ ಹಂತವಾಗಿ ದೃಷ್ಟಿ ಕಳೆದುಕೊಳ್ಳಲು ಕಾರಣವಾಯಿತು. ಒಂಬತ್ತು ತಿಂಗಳ ಅವಧಿಯಲ್ಲಿ ದೃಷ್ಟಿ ಬಹುತೇಕ ಮಂದವಾಯಿತು. ಅಂದರೆ ಒಂದು ಅಡಿ ಅಂತರವನ್ನು ಮೀರಿ ಅವರು ಏನನ್ನು ನೋಡುವ ಸ್ಥಿತಿಯಲ್ಲಿ ಇರಲಿಲ್ಲ.

ಕಾಸೀಂ ಅವರ ಕುಟುಂಬ ಗುಣಮಟ್ಟದ ಚಿಕಿತ್ಸೆ ಪಡೆಯಲು ಸೂಕ್ತ ಆಸ್ಪತ್ರೆಯ ಅನ್ವೇಷಣೆ ಆರಂಭಿಸಿತು. ಬೆಂಗಳೂರಿನ ಡಾ. ಅಗರವಾಲ್ ಐ ಹಾಸ್ಪಿಟಲ್‍ಗೆ ಬಂದರು. ಸವಿವರವಾದ ತಪಾಸಣೆಯ ಬಳಿಕ ಡಾ. ಬಿಂದಿಯಾ ಹಪನಿ ಮತ್ತು ತಂಡ ಅವರಿಗೆ ಗ್ಲ್ಯುಯಿಡ್ ಐಒಎಲ್ ಸರ್ಜರಿಗೆ ಒಳಗಾಗಲು ಸೂಚಿಸಿದರು. ಗ್ಲ್ಯುಯಿಲ್ ಐಒಎಲ್ ಎಂಬುದು ಅತ್ಯಾಧುನಿಕವಾದ ಚಿಕಿತ್ಸೆಯಾಗಿದ್ದು, ಇದನ್ನು ಡಾ. ಅಗರವಾಲ್ ಐ ಹಾಸ್ಪಿಟಲ್‍ನ ಅಧ್ಯಕ್ಷ ಡಾ. ಅಮರ್ ಅಗರವಾಲ್ ಅವರು ಅನ್ವೇಷಿಸಿದ್ದರು. ಗ್ಲ್ಯೂಯಿಡ್ ಐಒಎಲ್ ಚಿಕಿತ್ಸೆಯ ಮೂಲಕ ವೈದ್ಯರು, ಧಕ್ಕೆಯಾಗಿರುವ ಲೆನ್ಸ್ ಬದಲಾವಣೆಯಷ್ಟೇ ಅಲ್ಲ, ಗ್ಲಾಕೋಮಿಯ ಗುಣಪಡಿಸಲು ನೆರವಾದರು. ಇಂದು ಕಾಸಿಂ ಅವರು ಸುಮಾರು 10 ಅಡಿ ಅಂತರದವರೆಗಿನ ಪರಿಕರಗಳನ್ನು ನೋಡಲು ಶಕ್ತರಾಗಿದ್ದು, ಸಹಜ ಜೀವನ ನಡೆಸುತ್ತಿದ್ದಾರೆ.
ಪ್ರಕರಣದ ವಿವರ ನೀಡಿದ ಡಾ. ಅಗರವಾಲ್ ಐ ಹಾಸ್ಪಿಟಲ್‍ನ ಮೆಡಿಕಲ್ ರೆಟಿನಾ ಎಕ್ಸ್‍ಪರ್ಟ್ ಡಾ.ಬಿಂದಿಯಾ ಹಪನಿ ಅವರು, ಕಾಸೀಂ ಅವರಿಗೆ ಒಂದೇ ಸಂದರ್ಭದಲ್ಲಿ ಕಣ್ಣಿನ ನಾಲ್ಕು ವಿವಿಧ ಸಮಸ್ಯೆಗಳು ಕಂಡುಬಂದಿದ್ದವು. ಚಿಕಿತ್ಸೆಯು ದೊಡ್ಡ ಸವಾಲಿನದಾಗಿತ್ತು. ಮೊದಲಿಗೆ ಅವರಲ್ಲಿ ಕಣ್ಣಿನಿಂದ ಸಬ್‍ಲಕ್ಸೆಟೆಡ್ ಕ್ಯಾಟರಾಕ್ಟ್ ಪಟಲವನ್ನು ತೆಗೆಯಲಾಯಿತು. ನಂತರ ಇಂಟ್ರಾಕುಲರ್ ಲೆನ್ಸ್ ಅನ್ನು ಅಳವಡಿಸಲಾಯಿತು. ನಂತರ ಅವರ ಐರಿಸ್‍ಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು ಎಂದು ವಿವರಿಸಿದರು.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *