ಸಿಗರೇಟ್, ತಂಬಾಕಿನ ದಾಸರಾಗಿದ್ದೀರಾ..? ಮುಕ್ತಿ ಮಾರ್ಗಗಳು ಇಲ್ಲಿವೆ ನೋಡಿ

ಭಾರತದಲ್ಲಿ ಅತಿ ಹೆಚ್ಚು ಜನರು ಸಾಯುತ್ತಿರುವುದು ತಂಬಾಕಿನಿಂದ ಎಂದರೆ ನೀಡು ನಂಬಲೇಬೇಕು. ಹೌದು, ಭಾರತದಲ್ಲಿ ತಂಬಾಕಿನಿಂದಾದ ಬಾಯಿ ಕ್ಯಾನ್ಸರನ ಪ್ರಕರಣಗಳು ಜಗತ್ತಿನಲ್ಲಿಯೇ ಅತಿ ಹೆಚ್ಚು, ಭಾರತದಲ್ಲಿ ಪುರುಷರ ಮತ್ತು ಮಹಿಳೆಯರ ತಂಬಾಕಿನಿಂದ ಬರುವ ಕ್ಯಾನ್ಸರಿನ ಪ್ರಮಾಣ ಕ್ರಮವಾಗಿ 56.4% ಮತ್ತು 44.9% ಆಗಿದೆ, ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಇತರ ರೋಗಗಳಿಗೆ 90% ನಷ್ಟು ಕಾರಣವಾಗಿದೆ. ವಿಶ್ವದಾದ್ಯಂತ ಕೊಕೇನ್ ಅಥವಾ ಹೆರಾಯಿನ್ ಮತ್ತು ಮದ್ಯ ಬಳಕೆಯಿಂದ, ಅಗ್ನಿ ದುರಂತ, ಕೊಲೆ, ಆತ್ಮಹತ್ಯೆ, ಅಪಘಾತ ಮತ್ತು ಏಡ್ಸ್ ನಿಂದಾಗುವ ಸಾವುಗಳ ಒಟ್ಟೂ ಸಂಖ್ಯೆಗಳಿಗಿಂತಲೂ ತಂಬಾಕು ಸೇವನೆಯಿಂದ ಸಾಯುವವರ ಸಂಖ್ಯೆಯು ಅಧಿಕ ಪ್ರಮಾಣದಲ್ಲಿದೆ.

ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳ ಬಳಕೆಯು ವ್ಯಕ್ತಿಯ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ? ತಂಬಾಕು ವ್ಯಸನದಿಂದಾಗುವ ತೊಂದರೆಗಳೇನು? ವ್ಯಸನವನ್ನು ಗುರುತಿಸುವುದು ಹೇಗೆ? ವ್ಯಸನ ಮುಕ್ತರಾಗುವುದು ಹೇಗೆ? ಎಂಬುದು ಎಲ್ಲರನ್ನು ಕಾಡುವ ಸಾಮಾನ್ಯ ಪ್ರಶ್ನೆ.
ತಂಬಾಕು ವ್ಯಾಪಕವಾಗಿ ಬಳಕೆಯಲ್ಲಿರುವ ಒಂದು ವ್ಯಸನಕಾರಿ ಪದಾರ್ಥ. ನಿಕೊಟಿನ್ ತಂಬಾಕನ್ನು ಸಿಗರೇಟ್ ರೂಪದಲ್ಲಿ ವಿಶ್ವದಾದ್ಯಂತ ಹೆಚ್ಚಾಗಿ ಬಳಸಲಾಗುತ್ತಿರುವಂತೆ, ಭಾರತದಲ್ಲಿ ಸಿಗರೇಟ್, ಬೀಡಿ, ನಶ್ಯ, ಹುಕ್ಕಾ ಮತ್ತು ಜಗಿಯುವ ತಂಬಾಕು ಎಂಬ ಬೇರೆಬೇರೆ ರೂಪದಲ್ಲಿ ಬಳಸಲಾಗುತ್ತದೆ.

ಹೊಗೆಸೊಪ್ಪಿನ ಗಿಡದಲ್ಲಿನ ನಿಕೊಟಿಯಾನಾ ಟೊಬ್ಯಾಕಮ್ ಎನ್ನುವ ಸಾರವನ್ನು ಬಳಸಿಕೊಂಡು ತಯಾರಾಗುವ ಪದಾರ್ಥ ತಂಬಾಕು. ಈ ಗಿಡದ ಒಣಗಿದ ಎಲೆಗಳನ್ನು ಉಳಿದ ಕೆಲವು ವಸ್ತುಗಳೊಂದಿಗೆ ಮಿಶ್ರಣ ಮಾಡಿ ಬೀಡಿ, ಸಿಗರೇಟ್, ನಶ್ಯ, ಹುಕ್ಕಾ, ಜರ್ದಾ, ಕಡ್ಡಿಪುಡಿ ಮತ್ತು ತಂಬಾಕಿನ ಉಳಿದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಸುಫಾರಿ ಜಗಿಯುವುದರ ಮೂಲಕ, ಸೇದುವುದರ ಮೂಲಕ , ಧೂಮಪಾನದ ಮೂಲಕ  ಹೀಗೆ ಅನೇಕ ವಿಧಗಳಲ್ಲಿ ತಂಬಾಕನ್ನು ಬಳಸಲಾಗುತ್ತದೆ.ಮುದ ನೀಡುವ ನಿಕೊಟಿನ್ ತಂಬಾಕು ಗಿಡದ ಎಲೆಗಳಲ್ಲಿ ಕಂಡುಬರುವ ರಾಸಾಯನಿಕ. ಧೂಮಪಾನ ಅಥವಾ ತಂಬಾಕು ಜಗಿಯುವದು ನಿಕೊಟಿನ್ ಮತ್ತು ಕಾರ್ಬನ್ ಮೋನಾಕ್ಸೈಡ್ ಹಾಗೂ ಟಾರ್ ಗಳನ್ನೊಳಗೊಂಡು ಅಂದಾಜು 4000 ಬೇರೆ ರೀತಿಯ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ.

ವ್ಯಸನಕ್ಕೆ ಕಾರಣಗಳು :

ತಂಬಾಕು ಸೇವನೆಯು ಮಿದುಳಿನಲ್ಲಿ ಆನಂದ ನೀಡುವ ಡೋಪಮೈನ್‌ ನರವಾಹಕವನ್ನು ಬಿಡುಗಡೆ ಮಾಡುತ್ತದೆ. ಮಿದುಳು ಇದನ್ನು ಆನಂದದಾಯಕವಾದ ಚಟುವಟಿಕೆ ಎಂದು ಗ್ರಹಿಸುತ್ತದೆ ಮತ್ತು ವ್ಯಕ್ತಿಯು ತಂಬಾಕು ಸೇವನೆಯನ್ನು ಮತ್ತೆಮತ್ತೆ ಬಯಸುವಂತೆ ಮಾಡುತ್ತದೆ. ಕ್ರಮೇಣ ಮಿದುಳಿನ ಸಂದೇಶವಾಹಕಗಳು ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಆನಂದದ ಭಾವ ಹೊಂದಲು ಮಿದುಳು ಹೆಚ್ಚು ತಂಬಾಕು ಪದಾರ್ಥಗಳ ಸೇವನೆಯನ್ನು ಬಯಸುತ್ತದೆ.

ವ್ಯಕ್ತಿಯು ನಿಕೊಟಿನ್ ಸೇವಿಸಿದಾಗ, ರಾಸಾಯನಿಕಗಳು ಚರ್ಮ, ಬಾಯಿ, ಮೂಗಿನ ನಾಳಗಳು ಹಾಗೂ ಶ್ವಾಸಕೋಶಗಳ ಮೂಲಕ ಮಾನವನ ಮಿದುಳನ್ನು ತಲುಪುತ್ತವೆ. ನಿಕೊಟಿನ್ಯುಕ್ತ ಧೂಮಪಾನವು ನಿಮಗೆ ತಕ್ಷಣ ನಶೆಯನ್ನು ಮತ್ತು ಅತಿಯಾದ ಶಕ್ತಿಯನ್ನು ನೀಡುತ್ತದೆ. ಕೆಲವು ನಿಮಿಷಗಳ ನಂತರ, ನಶೆ ಇಳಿದುಹೋಗುತ್ತದೆ ಮತ್ತು ನಿಮಗೆ ಸುಸ್ತಾದಂತೆ ಅಥವಾ ಶಕ್ತಿ ಕಡಿಮೆಯಾದಂತೆ ಭಾಸವಾಗುತ್ತದೆ. ಇದರ ಪರಿಣಾಮವಾಗಿ, ನಿಮಗೆ ಮತ್ತೆ ಧೂಮಪಾನ ಮಾಡಬೇಕೆಂದು ಅನಿಸುತ್ತದೆ. ಅಧ್ಯಯನಗಳ ಪ್ರಕಾರ ಮಕ್ಕಳು ಹಾಗೂ ಹದಿಹರೆಯದವರು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಉತ್ಪನ್ನಗಳ ವ್ಯಸನಿಗಳಾಗುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂಬಾಕು ಬಳಸಲು ಆರಂಭಿಸಿದರೆ, ವ್ಯಸನಿಗಳಾಗುವ ಸಾಧ್ಯತೆ ಹೆಚ್ಚು.ತಂಬಾಕು ವ್ಯಸನದಿಂದ ಮಿದುಳಿನಲ್ಲಿ ಉಂಟಾಗುವ ಬದಲಾವಣೆಗಳು ಕೊಕೇನ್ ಮತ್ತು ಹೆರಾಯಿನ್ ಬಳಕೆಯಿಂದ ಉಂಟಾಗುವ ಬದಲಾವಣೆಗಳಂತೆ. ದೀರ್ಘಕಾಲದ ಬಳಕೆಯಿಂದ ವ್ಯಕ್ತಿಗೆ ಧೂಮಪಾನ ಮಾಡುವ (ಅಥವಾ ತಂಬಾಕು ಪದಾರ್ಥಗಳ ಬಳಕೆಯ) ಬಯಕೆ ಕೂಡ ಉಂಟಾಗಬಹುದು. ಸಾಮಾನ್ಯವಾಗಿ ಬೆಳಗ್ಗೆ ಏಳುವಾಗ, ಕಾಫಿಯ ಸೇವಿಸುವಾಗ, ಕೆಲಸದ ನಡುವಿನ ಊಟದ ವಿರಾಮದಲ್ಲಿ ತಂಬಾಕು ಸೇವನೆಯನ್ನು ಬಯಸುವಂತೆ ಮಾಡುತ್ತದೆ. ವಾಹನ ಚಲಿಸುವಾಗ, ಮದ್ಯಪಾನ ಮಾಡುವಾಗ ಅಥವಾ ಒತ್ತಡದ ಕೆಲಸ ಮಾಡುತ್ತಿರುವಾಗ ಧೂಮಪಾನ ಮಾಡಬೇಕೆಂದು ಬಲವಾಗಿ ಅನಿಸುವ ಸಾಧ್ಯತೆಯೂ ಇದೆ.

ನಿಧಾನವಾಗಿ ಕೊಲ್ಲುವ ತಂಬಾಕು :

ದೀರ್ಘಕಾಲದ ತಂಬಾಕು ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಹಾಗೂ ಹಲ್ಲುಗಳ ಅಕಾಲಿಕ ಮುಪ್ಪು (ಚರ್ಮ ಸುಕ್ಕುಗಟ್ಟುವಿಕೆ), ಕಣ್ಣಿನ ಪೊರೆ, ಅಧಿಕ ಅಥವಾ ಕಡಿಮೆ ರಕ್ತದೊತ್ತಡ, ಬೊಜ್ಜು, ಉಸಿರಾಟದ ತೊಂದರೆ, ಹೃದಯದ ತೊಂದರೆ ಹಾಗೂ ಸ್ಟ್ರೋಕ್ ಅಪಾಯ, ಭ್ರೂಣಕ್ಕೆ ಹಾನಿ ( ಗರ್ಭಿಣಿ ಮಹಿಳೆಯರು ಧೂಮಪಾನ ಮಾಡುವುದರಿಂದ), ನಪುಂಸಕತ್ವ ಅಥವಾ ಬಂಜೆತನದ ಸಮಸ್ಯೆಗಳು ಉಂಟಾಗಬಹುದು. ತಂಬಾಕು ಸೇವನೆಯು ಮಧುಮೇಹ, ಸಂಧಿವಾತ ಹಾಗೂ ಆಸ್ಟಿಯೋಪೊರೊಸಿಸ್ ಮುಂತಾದ ತೊಂದರೆಗಳನ್ನು ಹೆಚ್ಚು ಮಾಡಬಹುದು. ಧೂಮಪಾನ ಮಾಡಿದವರ ಆಯುಷ್ಯವು ಧೂಮಪಾನ ಮಾಡದವರ ಆಯುಷ್ಯಕ್ಕಿಂತ 15 ವರ್ಷ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ.
ಸ್ಮೋಕಿಂಗ್ ಬಿಡೋದು ಹೇಗೆ..?ಸಿಗರೇಟ್ ಸೇವನೆಯಿಂದ ನಮ್ಮ ದೇಹದೊಳಗೆ ಯಾವ ರೀತಿ ಭೀಕರ ಪರಿಣಾಮ ಉಂಟಾಗುತ್ತದೆ ಎಂಬ ವಿಷಯಗಳನ್ನು ಚೆನ್ನಾಗಿ ಅರಿತುಕೊಳ್ಳಿ. ನೀವು ಒಂದೊಂದು ದಮ್ ಎಳೆಯುವಾಗಲೂ ಈ ವಿಷಯ ನಿಮ್ಮನ್ನು ಚುಚ್ಚುತ್ತದೆ. ಒತ್ತಡದ ಸನ್ನಿವೇಶಗಳು ಎದುರಾದಾಗ ಅದರಿಂದ ಹೊರಬರಲು ಸಿಗರೇಟ್ ಸೇದುವುದು ಸಾಮಾನ್ಯ. ತಂಬಾಕಿನಲ್ಲಿರುವ ನಿಕೋಟಿನ್ ಅಂಶದಿಂದ ನಿಮಗೆ ಸ್ಟ್ರೆಸ್ ಕಡಿಮೆಯಾದಂತೆನಿಸುತ್ತದೆ. ಆದರೆ, ವಾಸ್ತವವಾಗಿ ಅದು ಸುಳ್ಳು. ನಿಮಗೆ ಒತ್ತಡ ಏರ್ಪಟ್ಟಾಗ ನಿಮ್ಮಿಷ್ಟದ ಸಂಗೀತ ಆಲಿಸಿ, ವಾಕಿಂಗ್ ಮಾಡಿ, ವ್ಯಾಯಾಮ ಮಾಡಿ, ಮಸಾಜ್ ಮಾಡಿಸಿಕೊಳ್ಳಿ, ಚೆನ್ನಾಗಿ ನಿದ್ರೆ ಮಾಡಿ.

ನಿರ್ದಿಷ್ಟ ಸಂದರ್ಭಗಳಲ್ಲಿ ಧೂಮಪಾನ ಮಾಡುವ ಬಯಕೆ ಹೆಚ್ಚಾಗಿರುತ್ತದೆ. ಕೆಲವರಿಗೆ ಆಲ್ಕೋಹಾಲ್ ಸೇವಿಸುವಾಗ ಸಿಗರೇಟ್ ಸೇದಬೇಕೆನಿಸುತ್ತದೆ. ಇಂಥ ಟ್ರಿಗರ್ ಅಂಶಗಳನ್ನ ಪಟ್ಟಿ ಮಾಡಿಟ್ಟುಕೊಂಡು, ಅವುಗಳಿಂದ ದೂರ ಉಳಿಯಿರಿ.

ದೀರ್ಘ ಕಾಲದಿಂದ ಧೂಮಪಾನ ಚಟವಿದ್ದು, ಅದನ್ನು ಬಿಟ್ಟುಬಿಟ್ಟಾಗ ನಮ್ಮ ದೇಹದೊಳಗೆ ಹಲವಾರು ಏರುಪೇರುಗಳಾಗಬಹುದು. ತಲೆನೋವು, ತಲೆಸುತ್ತು, ಆತಂಕ, ಹತಾಶೆ, ತುರಿಕೆ ಉಂಟಾಬಹುದು. ಸಿಗರೇಟ್ ಬಿಟ್ಟಾಗ ನಮ್ಮ ಶ್ವಾಸಕೋಶಗಳು ಹೆಚ್ಚೆಚ್ಚು ನಿರಾಳಗೊಳ್ಳುತ್ತಾಗ ಹೋಗುತ್ತವೆ. ಇದರಿಂದ ಕೆಮ್ಮು ಬರಬಹುದು. ಕೆಮ್ಮು ನಿಲ್ಲಿಸಲು ಸಿಗರೇಟ್ ಸೇದಬೇಕೆನಿಸಬಹುದು. ಆದರೆ, ಈ ಬಯಕೆಯನ್ನು ಸ್ವಲ್ಪ ದಿನ ನಿಯಂತ್ರಿಸಿದರೆ ಕೆಮ್ಮು ತನ್ನಂತಾನೆ ಕಡಿಮೆಯಾಗುತ್ತದೆ. ನಿಮ್ಮ ಶ್ವಾಸಕೋಶ ಮೊದಲಿನ ಆರೋಗ್ಯ ಸ್ಥಿತಿಗೆ ಬರುತ್ತದೆ.

ವಿವಿಧ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ಪ್ರತೀ ಕ್ಷಣವೂ ನೀವು ಬ್ಯುಸಿಯಾಗಿರಬೇಕು. ಮನೆಯಲ್ಲಿ ವಿವಿಧ ಕೆಲಸಗಳನ್ನ ನೀವೇ ಮಾಡಿ. ನಿಮ್ಮ ನೆಚ್ಚಿನ ಹವ್ಯಾಸಗಳತ್ತ ಹೆಚ್ಚು ಗಮನ ಹರಿಸಿ.  ಸಿಗರೇಟ್ ಸೇದುವುದನ್ನು ಬಿಟ್ಟಿದ್ದೀರಿ ಅಥವಾ ಬಿಡುತ್ತಿದ್ದೀರಿ ಎಂಬುದನ್ನು ನೀವು ನಿಮ್ಮ ಪರಿಚಯಸ್ಥರಿಗೆ ಹೇಳಿಕೊಳ್ಳಿ. ಇದರಿಂದ ನಿಮಗೆ ಹೆಚ್ಚು ಬದ್ಧತೆ ಬರಬಹುದು. ಸ್ನೇಹಿತರು ನಿಮ್ಮ ಕಾರ್ಯಕ್ಕೆ ಬೆಂಬಲ ನೀಡಬಹುದು.

ನೀವು ಒಂದೊಂದು ಸಿಗರೇಟ್ ಕಡಿಮೆ ಮಾಡಿದರೂ ಆ ಹಣವನ್ನು ಒಂದೆಡೆ ಸೇರಿಸುತ್ತಾ ಹೋಗಿ. ಹಣ ಸಂಗ್ರಹವಾಗುತ್ತಿರುವುದನ್ನು ನೋಡಿ ನಿಮ್ಮಲ್ಲಿ ಸಿಗರೇಟ್ ಸೇವನೆಯ ಚಟ ಕಡಿಮೆಯಾಗಬಹುದು.   ಸಿಗರೇಟ್ ಚಟದಿಂದ ಮುಕ್ತರಾಗಲು ಅನೇಕ ಚಿಕಿತ್ಸೆಗಳಿವೆ. ಇದರಲ್ಲಿ ನಿಕೋಟಿನ್ ರೀಪ್ಲೇಸ್ಮೆಂಟ್ ಥೆರಪಿ ಕೂಡ ಪ್ರಮುಖವಾದುದು. ಇವು ನಿಜಕ್ಕೂ ಪ

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *