ಪ್ರತಿದಿನ ಕಾಡುವ ಸ್ಟ್ರೆಸ್ ನಿಂದ ಹೊರಬರೋದು ಹೇಗೆ ..?

ಜೀವನದಲ್ಲಿ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವಿದ್ದರೆ ಮಾತ್ರ ಆ ಜೀವನ ಸುಂದರವಾಗಿರುತ್ತದೆ. ಮಾನಸಿಕವಾಗಿ ನಾವು ಬಳಲಿದ್ದರೆ ಆ ಜೀವನ ಸಪ್ಪೆಯಾಗುತ್ತದೆ ಮತ್ತು ಜೀವನ ಶೂನ್ಯ ಎಂದೇ ನಮ್ಮ ಮನದಲ್ಲಿ ಮೂಡುತ್ತದೆ. ಹಾಗಿದ್ದರೆ ಮಾನಸಿಕ ನೆಮ್ಮದಿ ಪಡೆದುಕೊಳ್ಳಲು ನಾವು ಮಾಡಬೇಕಾದದ್ದು ಏನು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಾದರೆ ಇಲ್ಲಿದೆ ನೋಡಿ ಸೂಕ್ತ ಸಲಹೆಗಳು. ಪ್ರಶಾಂತವಾಗಿರುವ ಮನಸ್ಸು ಕೂಡ ಒಮ್ಮೊಮ್ಮೆ ಅಲ್ಲೋಲ ಕಲ್ಲೋಲವಾಗುತ್ತದೆ. ಜೀವನವೇ ಬೇಡವೆಂಬ ಜಿಗುಪ್ಸೆ ಮನದಲ್ಲಿ ಮೂಡುತ್ತದೆ. ಆಗ ನಮ್ಮ ನೆರವಿಗೆ ಬರುವುದು ಮಾನಸಿಕ ಆರೋಗ್ಯವಾಗಿದೆ. ಈ ಮಾನಸಿಕ ಶಾಂತಿಯನ್ನು ಕಾಪಾಡಲು ಹಾಗೂ ಮಾನಸಿಕವಾಗಿ ಸದೃಢವಾಗಿರಲು ನಾವು ಚಿಂತನೆಯನ್ನು ನಡೆಸಬೇಕಾಗುತ್ತದೆ. ಹಾಗಿದ್ದರೆ ಮಾನಸಿಕ ಶಾಂತಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ?

ಜಿಮ್‍ನ ಬಂಧಿಸುವ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಹೊತ್ತಾದರೂ ವಿದಾಯ ಹೇಳಿ. ಸ್ವಚ್ಛ ಪರಿಸರದಲ್ಲಿ ಓಡಾಡಿ. ಹೊರಗೆ ಅಡ್ಡಾಡುವುದು ನಿಮಗೆ ಮಾನಸಿಕ ಆರೋಗ್ಯದೊಂದಿಗೆ ದೈಹಿಕ ಆರೋಗ್ಯವನ್ನೂ ನೀಡುತ್ತದೆ. ಇದರಿಂದ ನಿಮ್ಮ ಮನಸ್ಸು ಹಗುರವಾಗಿ ಹೃದಯ ಶುಭ್ರವಾಗುತ್ತದೆ. ಮಾನಸಿಕ ತುಮುಲ ಒತ್ತಡ ದೂರಾಗುತ್ತವೆ. ವಿಟಮಿನ್‍ಗಳ ಸೇವನೆ ದೇಹಕ್ಕೆ ಅತ್ಯವಶ್ಯಕವಾದುದು ಎಂಬುದು ನಮಗೆಲ್ಲಾ ತಿಳಿದಿದೆ ಆದರೆ ನೀವು ಬಿ12 ಮಾತ್ರೆಯ ಬಗ್ಗೆ ತಿಳಿದಿದ್ದೀರಾ. ಈ ವಿಟಮಿನ್ ಮಾತ್ರೆ ಮಾನಸಿಕ ಒತ್ತಡವನ್ನು ದೂರವಾಗಿಸಿ ನಿಮಗೆ ಸುದೃಢ ಚಿಂತನೆಯನ್ನು ನೀಡುತ್ತದೆ.

ಧ್ಯಾನ ನಮ್ಮ ಮಾನಸಿಕ ಸ್ವಾಸ್ಥ್ಯಕ್ಕೆ ಅತಿ ಮುಖ್ಯವಾದುದು. ಧ್ಯಾನ ಹಾಗೂ ಯೋಗ ಜೀವನದ ಪ್ರತೀ ಕ್ಷಣವನ್ನೂ ಸುಖದಿಂದಿರುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯಕ್ಕೆ ಧ್ಯಾನ ಮತ್ತು ಯೋಗ ಅತೀ ಪ್ರಧಾನವಾದುದು. ನಿಮ್ಮ ಮನಕ್ಕೆ ಸಂತೋಷ ಕೊಡುವುದರ ಮೇಲೆ ನಿಮ್ಮಲ್ಲಿರುವ ದುಡ್ಡನ್ನು ವಿನಿಯೋಗಿಸಿ. ದುಂದು ವೆಚ್ಚ ಮಾಡಿ ನಂತರ ಅದಕ್ಕಾಗಿ ಕೊರಗದಿರಿ. ನೀವು ಯಾವುದಕ್ಕೆ ಹಣ ವಿನಿಯೋಗಿಸುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ಗಮನವಿರಲಿ. ಅದು ನಿಮಗೆ ಸಂತೋಷ ಕೊಡುವುದಿದ್ದರೆ ಮಾತ್ರ ಅದಕ್ಕೆ ಮುಂದುವರೆಯಿರಿ.

ಸಮಧುರ ಸಂಗೀತ ಆಲಿಸಿ:

ನಿಮ್ಮ ಮನಸ್ಸಿಗೆ ಮುದ ನೀಡುವ ಸಂಗೀತ ಖಂಡಿತ ನಿಮ್ಮ ಮಾನಸಿಕ ಒತ್ತಡವನ್ನು ದೂರವಾಗಿಸುತ್ತದೆ. ಆದ್ದರಿಂದ ಸುಮಧುರವಾದ ಸಂಗೀತವನ್ನು ಆಲಿಸಿ. ಸಂಗೀತ ಕಛೇರಿಗೆ ಭೇಟಿ ನೀಡಿ. ಅಲ್ಲಿನ ವಾತಾವರಣ ಖಂಡಿತ ನಿಮ್ಮ ಮನಸ್ಸನ್ನು ಮಾರ್ಪಡಿಸಿ ಅಲ್ಲಿ ಸಂತೋಷ ನೆಲೆಗೊಳ್ಳುವಂತೆ ಮಾಡುತ್ತದೆ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *